Site icon Vistara News

Vijay Deverakonda: ಜನುಮದಿನದಂದು ಸಮಂತಾಗೆ ʻನನ್ನ ರೋಜಾ ನೀನೇʼ ಎಂದ ವಿಜಯ್‌ ದೇವರಕೊಂಡ!

Kushi song Na Roja Nuvve Out For Vijay Deverakonda Birthday

ಬೆಂಗಳೂರು: ಟಾಲಿವುಡ್ ನಟ ವಿಜಯ್ ದೇವರಕೊಂಡ ( Vijay Deverakonda) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಜಯ್ ಜನುಮದಿನದ ಅಂಗವಾಗಿ ʻಖುಷಿʼ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ʻನನ್ನ ರೋಜಾ ನೀನೇʼ ಎಂಬ ಮೆಲೋಡಿ ಟ್ರ್ಯಾಕ್ ಬಿಡುಗಡೆಯಾಗಿದ್ದು, ನೋಡುಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಹೇಶಮ್ ಅಬ್ದುಲ್ ವಹಾಬ್ ಧ್ವನಿಯಾಗುವುದರ ಜತೆಗೆ ಟ್ಯೂನ್ ಹಾಕಿದ್ದಾರೆ. ಲವರ್ ಬಾಯ್ ಆಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ಸಮಂತಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾಶ್ಮೀರ ಭಾಗದಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ʻಖುಷಿʼ ಸಿನಿಮಾ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ತೆರೆಗೆ ಬರಲಿದೆ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ʻಮಜಿಲಿʼ ಸಿನಿಮಾದ ಹಿಟ್ ನಿರ್ದೇಶಕ ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ.

ರೊಮ್ಯಾಂಟಿಕ್ ಲವ್ ಎಂಟರ್ಟೈನರ್‌ ಕಥಾಹಂದರ ಹೊಂದಿರುವ ʻಖುಷಿʼ ಸಿನಿಮಾ ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. 2018ರ ಮಹಾನಟಿ ಚಿತ್ರದ ನಂತರ ವಿಜಯ್‌ ಹಾಗೂ ಸ್ಯಾಮ್‌ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Vijay Deverakonda: ರಶ್ಮಿಕಾ ಜತೆಗಿನ ಸಂಬಂಧದ ಬಗ್ಗೆ ವಿಜಯ್‌ ದೇವರಕೊಂಡ ಪೋಷಕರು ಚಿಂತೆಗೆ ಒಳಗಾಗಿದ್ಯಾಕೆ?

ವಿಜಯ್ ದೇವರಕೊಂಡ, ಸಮಂತಾ, ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ ಮುಂತಾದ ಅದ್ಭುತ ನಟ, ನಟಿಯರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ, ಪೀಟರ್ ಹೆನ್ಸ್ ಸಾಹಸ ನಿರ್ದೇಶನ, ಪ್ರವೀನ್ ಪುಡಿ ಅವರ ಸಂಕಲನ, ಜಿ ಮುರಳಿ ಕ್ಯಾಮೆರಾ ಕೆಲಸ ಮಾಡಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ.

Exit mobile version