Site icon Vistara News

Laal Singh Chaddha | ನಟ ಚಿರಂಜೀವಿ ಮನೆಯಲ್ಲಿ ಸ್ಪೆಷಲ್‌ ಶೋ: ಕಣ್ಣೀರಿಟ್ಟ ಆಮಿರ್‌ ಖಾನ್

Laal Singh Chaddha

ಬೆಂಗಳೂರು : ನಟ ಆಮಿರ್‌ ಖಾನ್‌ ಮತ್ತು ಕರೀನಾ ಕಪೂರ್‌ ಅಭಿನಯದ ಹಿಂದಿ ಸಿನಿಮಾ ಲಾಲ್‌ ಸಿಂಗ್‌ ಛಡ್ಡಾ (Laal Singh Chaddha ) ಟ್ರೈಲರ್‌ ಭಾನುವಾರ (ಮೇ 29) ಬಿಡುಗಡೆಯಾಗಿತ್ತು. ಸ್ವಲ್ಪ ಹೊತ್ತಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ Boycott LaalSingh Chaddha (ಲಾಲ್‌ ಸಿಂಗ್‌ ಛಡ್ಡಾ ಚಿತ್ರವನ್ನು ಬಹಿಷ್ಕರಿಸಿ) ಎಂಬ ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಆಗಿತ್ತು. ಇದೀಗ ಅವರ ಕುರಿತ ವಿಡಿಯೊ ಒಂದು ಸಖತ್‌ ವೈರಲ್‌ ಆಗುತ್ತಿದೆ. ಈಗ ಈ ಚಿತ್ರವನ್ನು ದಕ್ಷಿಣ ಭಾರತದ ಸ್ಟಾರ್‌ಗಳಿಗೆ ಪ್ರದರ್ಶನ ನೀಡಿದ್ದಾರೆ.

ಈ ಚಿತ್ರ ಹಾಲಿವುಡ್‌ನ ʻಫಾರೆಸ್ಟ್‌ ಗಂಪ್‌ʼ ಚಿತ್ರದ ರಿಮೇಕ್‌ ಆಗಿದೆ. ಚಿತ್ರವನ್ನು ಆಮಿರ್‌ ಖಾನ್‌ ಇಷ್ಟ ಪಟ್ಟು ರಿಮೇಕ್‌ ಮಾಡಿದ್ದಾರೆ. ಲಾಲ್‌ ಸಿಂಗ್‌ ಛಡ್ಡಾದ ವಿಶೇಷ ಪ್ರದರ್ಶನವನ್ನು ನಟ ಚಿರಂಜೀವಿ ನಿವಾಸದಲ್ಲಿ ಆಯೋಜಿಸಿದ್ದಾರೆ. ತೆಲುಗು ಸ್ಟಾರ್ ನಟರುಗಳಾದ ನಾಗಾರ್ಜುನ, ಎಸ್‌ಎಸ್ ರಾಜಮೌಳಿ, ಸುಕುಮಾರ್ ಮತ್ತು ನಾಗ ಚೈತನ್ಯ ಅವರೊಂದಿಗೆ ಆಮಿರ್‌ ಖಾನ್‌ ತಾವು ಇರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನೋಡಿದವರು ಚಲನಚಿತ್ರವನ್ನು ಹೊಗಳಿ “ಭಾವನಾತ್ಮಕ ಪ್ರಯಾಣ” ಎಂದು ಹೇಳಿದ್ದಾರೆ.

ಇದನ್ನೂ ಓದಿ | ಟ್ರೇಲರ್‌ ರಿಲೀಸ್‌ ಬೆನ್ನಲ್ಲೇ ಟ್ರೆಂಡ್‌ ಆಗ್ತಿದೆ Boycott LaalSingh Chaddha; ಆಮಿರ್‌ ಮಾತು ಮರೆತಿಲ್ಲ ಜನ

ಈ ಚಿತ್ರದಲ್ಲಿ ಟಾಲಿವುಡ್‌ ನಟ ನಾಗಚೈತನ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ನಾಗಚೈತನ್ಯ ಅವರ ಲವ್‌ ಸ್ಟೋರಿ ಸಿನಿಮಾ ರಿಲೀಸ್‌ಗೂ ಮೊದಲು ಆಯೋಜಿಸಿದ ಪ್ರೀ-ರಿಲೀಸ್‌ ಇವೆಂಟ್‌ಗೆ ಆಮಿರ್‌ ಖಾನ್‌ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಿನಿಮಾ ನೋಡಿ ಚಿರಂಜೀವಿ, ಆಮೀರ್‌ ಖಾನ್‌ ಅವರನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಭಾವುಕರಾದ ಆಮೀರ್‌ ಖಾನ್‌ ಸಂತೋಷದಿಂದ ಕಣ್ಣೀರು ಹಾಕಿದ್ದಾರೆ.

ವೀಡಿಯೊವನ್ನು ಹಂಚಿಕೊಂಡ ನಟ ಚಿರಂಜೀವಿ ಹೀಗೆ ಬರೆದಿದ್ದಾರೆ, “ಕೆಲವು ವರ್ಷಗಳ ಹಿಂದೆ ನನ್ನ ಆತ್ಮೀಯ ಸ್ನೇಹಿತ #ಆಮಿರ್ ಖಾನ್ @ ಕ್ಯೋಟೋ ವಿಮಾನ ನಿಲ್ದಾಣ- ಜಪಾನ್‌ನಲ್ಲಿ ಅವರೊಂದಿಗೆ ಒಂದು ಆಕಸ್ಮಿಕ ಭೇಟಿ ಮಾಡಿದ್ದೆ. #AamirKhan ಧನ್ಯವಾದಗಳುʼʼ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಟ್ವೀಟ್‌ನಲ್ಲಿ ಸಿನಿಪ್ರಿಯರು ʻನಟ ಚಿರಂಜೀವಿ ಹಾಗೂ ರಾಜಮೌಳಿ ಅವರು ಇಷ್ಟ ಪಟ್ಟಿದ್ದಾರೆ ಎಂದರೆ ಸಿನಿಮಾ ಚೆನ್ನಾಗಿ ಇರಬಹುದು. ಹಾಗೂ ನಾಗಚೈತನ್ಯ ಮತ್ತು ಆಮೀರ್‌ ಖಾನ್‌ ಇವರಿಬ್ಬರನ್ನು ತೆರೆಯ ಮೇಲೆ ನೋಡಲು ಕಾತೂರರಾಗಿದ್ದೇವೆʼ ಎಂದು ಟ್ವೀಟ್‌ ಮೂಲಕ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರದಲ್ಲಿ ನಾಗ ಚೈತನ್ಯ, ಕರೀನಾ ಕಪೂರ್ ಖಾನ್ ಮತ್ತು ಮೋನಾ ಸಿಂಗ್ ಕೂಡ ನಟಿಸಿದ್ದಾರೆ. ಅಮೀರ್ ಖಾನ್, ಕಿರಣ್ ರಾವ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರ ಆಗಸ್ಟ್ 11 ರಂದು ತೆರೆಗೆ ಬರಲಿದೆ. ಅದೇ ದಿನ ಅಕ್ಷಯ್‌ ಕುಮಾರ್‌ ನಟನೆಯ ʻರಕ್ಷಾ ಬಂಧನ್‌ʼ ಸಿನಿಮಾ ತೆರೆಗೆ ಬರಲಿದ್ದು ಯಾವ ಸಿನಿಮಾ ರಂಜಿಸುತ್ತದೆ ಎನ್ನುವುದು ನೋಡಬೇಕಿದೆ.

ಇದನ್ನೂ ಓದಿ | Lagaan Movie | ಲಗಾನ್‌ಗೆ 21 ವರ್ಷ, ಮತ್ತೆ ಸೇರಿದ ಆಮೀರ್ ಟೀಮ್

Exit mobile version