ಬೆಂಗಳೂರು: ಇತ್ತೀಚೆಗೆ ಟಾಲಿವುಡ್ ನಟಿ ಲಕ್ಷ್ಮಿ ಮಂಚು (Lakshmi Manchu) ಸಂದರ್ಶನದ ವೇಳೆ ಕ್ಯಾಮೆರಾ ಮುಂದೆ ನಡೆದು ಅಡ್ಡ ಬಂದ ವ್ಯಕ್ತಿಗೆ ಹೊಡೆದು ಸುದ್ದಿಯಾಗಿದ್ದರು. ನಟಿಯ ಈ ವರ್ತನೆಗೆ (Lakshmi Manchu justifies) ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದ್ದರು. ಆದರೀಗ ನಟಿ ಈ ಬಗ್ಗೆ ಮಾತನಾಡಿದ್ದಾರೆ. ʻʻನಾನು ಏನು ಮಾಡಿದ್ದೇನೋ ಅದು ಸರಿಯಾಗಿದೆ. ಏಟಿಗೆ ಆ ವ್ಯಕ್ತಿ ಅರ್ಹರುʼʼ ಎಂದು ಹೇಳಿದ್ದಾರೆ.
ಸೈಮಾ ಪ್ರಶಸ್ತಿ ( SIIMA 2023) ಪ್ರದಾನ ಸಮಾರಂಭದಲ್ಲಿ ಈ ಘಟನೆ ನಡೆದಿತ್ತು. ಇದೀಗ ನಟಿ ಈ ಬಗ್ಗೆ ಮಾತನಾಡಿ ʻʻನಾನು ರೆಡ್ ಕಾರ್ಪೆಟ್ ಮೇಲೆ ಇದ್ದೇನೆ ಎಂದು ಆ ವ್ಯಕ್ತಿಗೆ ಚೆನ್ನಾಗಿ ತಿಳಿದಿತ್ತು. ಇದು ಯಾರೋ ಸುಮ್ಮನೆ ವಿಡಿಯೊ ತೆಗೆದಿದ್ದಲ್ಲ. ಆತ ತುಂಬಾ ನಿರ್ಲಕ್ಷ್ಯದಿಂದಿದ್ದರು. ಕ್ಯಾಮೆರಾದ ಮುಂದೆ ನೋಡಿಯೂ ಹಾಗೇ ನಡೆದುಕೊಂಡು ಹೋದರು. ನಾನೊಬ್ಬ ನಟಿ, ನನ್ನ ಕ್ಯಾಮೆರಾ ಮುಂದೆ ಬರಬೇಡಿ. ಯಾವತ್ತೂ ಯಾವುದೇ ಕಲಾವಿದರ ಜತೆ ಹಾಗೆ ಮಾಡಬೇಡಿ. ನಾನು ಏನು ಮಾಡಿದ್ದೇನೋ ಅದು ಸರಿಯಾಗಿದೆ. ಆ ಏಟಿಗೆ ಆ ವ್ಯಕ್ತಿ ಅರ್ಹರುʼʼ ಎಂದು ಹೇಳಿದ್ದಾರೆ.
ನಟಿ ಮಾತು ಮುಂದುವರಿಸಿ ʻʻನನಗೆ ಈ ವಿಡಿಯೊ ವೈರಲ್ ಆಗುತ್ತದೆ ಎಂಬ ವಿಚಾರ ಕೂಡ ತಿಳಿದಿತ್ತು. ಇಂದಿನ ಜಗತ್ತಿನಲ್ಲಿ, ನಿಜವಾಗಿಯೂ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಯಾರಿಗೂ ಸಮಯ ಅಥವಾ ತಾಳ್ಮೆ ಇಲ್ಲ. ಎಲ್ಲರೂ ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಲದೆ, ನನ್ನನ್ನು ಸಾಬೀತುಪಡಿಸಬೇಕೆಂಬುದು ನನಗಿಲ್ಲʼʼ ಎಂತಲೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: SIIMA 2023: ʼಸೈಮಾʼದಲ್ಲೂ ಕಾಂತಾರ ಕಲರವ; ಅತಿ ಹೆಚ್ಚು ಪ್ರಶಸ್ತಿ ಬಾಚಿದ ದಾಖಲೆ!
ಆಗಿದ್ದೇನು?
ದುಬೈನ ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ SIIMA ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಸಂದರ್ಶಕರೊಂದಿಗೆ ನಟಿ ಮಾತನಾಡುತ್ತಿದ್ದರು. ಈ ವೇಳೆ ಒಬ್ಬ ವ್ಯಕ್ತಿ ಕ್ಯಾಮೆರಾ ಮುಂದೆ ನಡೆಯುತ್ತಾರೆ. ಕೋಪಗೊಂಡ ಲಕ್ಷ್ಮಿ ಮಂಚು ಅವರ ಬೆನ್ನಿಗೆ ಹೊಡೆದಿದ್ದಾರೆ. ಜತೆಗೆ ಕೆಟ್ಟ ಶಬ್ದದಿಂದ ಬೈದಿದ್ದಾರೆ. ಇನ್ನೊಬ್ಬ ವ್ಯಕ್ತಿ ಕೂಡ ಅವರ ಸಂದರ್ಶನಕ್ಕೆ ಅಡ್ಡಿ ಮಾಡಲು ಪ್ರಯತ್ನಿಸಿದಾಗ, ‘ಕ್ಯಾಮೆರಾ ಹಿಂದೆಯಿಂದ ಹೋಗಪ್ಪ. ಇದು ಬೇಸಿಕ್ ತಿಳಿವಳಿಕೆ’ ಎಂದಿದ್ದಾರೆ.
ಮಂಚು ಲಕ್ಷ್ಮಿ ತೆಲುಗಿನಲ್ಲಿ ಸಖತ್ ಫೇಮಸ್. ರಿಯಾಲಿಟಿ ಶೋ, ನಿರೂಪಕಿಯಾಗಿ ನಟಿ ಮಿಂಚುತ್ತಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯುತ್ತಿರುವ ಇವರು ಒಳ್ಳೆಯ ಸಿನಿಮಾ ಅವಕಾಶಗಳನ್ನು ಪಡೆಯುತ್ತಿದ್ದಾರೆ. ನಟಿ ಸೈಮಾ ಅವಾರ್ಡ್ಸ್, ಫಿಲ್ಮ್ಫೇಮ್ ಅವಾರ್ಡ್ಸ್ ಸೌತ್ ಹಾಗೂ ಎರಡು ರಾಜ್ಯ ನಂದಿ ಪ್ರಶಸ್ತಿ ಪಡೆದಿದ್ದಾರೆ.