Site icon Vistara News

ಲಲಿತ್‌ ಮೋದಿ ಜತೆ ಡೇಟಿಂಗ್‌: ಕೊನೆಗೂ ಮೌನ ಮುರಿದ ಸುಶ್ಮಿತಾ ಸೇನ್‌ ಹೇಳಿದ್ದೇನು?

ಮುಂಬೈ: ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ತಾನು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಜೊತೆಗೆ ಡೇಟಿಂಗ್ ನಡೆಸುತ್ತಿರುವುದಾಗಿ ಗುರುವಾರ ರಾತ್ರಿ ಘೋಷಿಸಿದ್ದರು. ತಾನು ಮತ್ತು ಸುಶ್ಮಿತಾ ಜತೆಗಿರುವ ಹಲವು ಚಿತ್ರಗಳನ್ನು ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಸುಶ್ಮಿತಾ ನನ್ನ ಜೀವನದ ಅತ್ಯುತ್ತಮ ಗೆಳತಿ ಎಂದು ಬರೆದುಕೊಂಡಿದ್ದರು. ಇದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ಲಲಿತ್‌ ಮೋದಿ ನೇರವಾಗಿ ಇಷ್ಟೊಂದು ವಿಷಯಗಳನ್ನು ಹೇಳಿಕೊಂಡಿದ್ದರೂ ಸುಶ್ಮಿತಾ ಸೇನ್‌ ಮಾತ್ರ ಈ ಬಗ್ಗೆ ಒಂದು ಮಾತೂ ಆಡಿರಲಿಲ್ಲ. ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ಅವರು, ಇನ್‌ಸ್ಟಾದಲ್ಲಿ ತಮ್ಮ ಭಾವನೆ ಹಂಚಿಕೊಂಡಿದ್ದಾರೆ.

ಇಬ್ಬರು ಹೆಣ್ಣುಮಕ್ಕಳೊಂದಿಗೆ ಇರುವ ಪೋಟೊ ಶೇರ್‌ ಮಾಡಿಕೊಂಡಿರುವ ಸುಶ್ಮಿತಾ, “ನಾನು ಸಂತೋಷವಾದ ಸ್ಥಳದಲ್ಲಿದ್ದೇನೆ!!! ಮದುವೆಯಾಗಿಲ್ಲ… ಬೆರಳಿನಲ್ಲಿ ಉಂಗುರವಿಲ್ಲ. ನಾನು ನಿಶ್ಶರ್ತವಾದ ಪ್ರೀತಿಯಿಂದ ಸುತ್ತುವರಿದಿದ್ದೇನೆ. ಸಾಕಷ್ಟು ಸ್ಪಷ್ಟನೆಗಳನ್ನು ಕೊಟ್ಟಾಗಿದೆ. ಈಗ ನಾನು ನನ್ನ ಮೊದಲಿನ ಜೀವನ ಹಾಗೂ ಕೆಲಸಕ್ಕೆ ಹಿಂತಿರುಗಿದ್ದೇನೆ. !! ನನ್ನ ಸಂತೋಷವನ್ನು ಯಾವಾಗಲೂ ಹಂಚಿಕೊಳ್ಳುತ್ತಿರುವುದಕ್ಕೆ ಧನ್ಯವಾದಗಳು. ಹಂಚಿಕೊಳ್ಳದದವರಿಗೂ ಧನ್ಯವಾದಗಳು. ಅದು ನಿಮ್ಮ ಕೆಲಸವಲ್ಲ ಬಿಡಿʼʼ ಎಂದು ಬರೆದಿದ್ದಾರೆ.

ಸುಶ್ಮಿತಾ ಸೇನ್‌ ಪೋಸ್ಟ್‌ಗೆ ಅಭಿನಂದನಾ ಸಂದೇಶಗಳು ಬರುತ್ತಿವೆ. “ದೇವರು ನಿಮ್ಮನ್ನು ಸದಾ ಆಶೀರ್ವದಿಸಲಿ, ಸದಾ ಸಂತೋಷವಾಗಿರಿ, ದೇವರು ನಿಮ್ಮನ್ನು ಹರಿಸಲಿ,ʼʼ ಎಂದು ಎಲ್ಲರೂ ಹಾರೈಸಿದ್ದಾರೆ.

ಇದನ್ನೂ ಓದಿ: ಲಲಿತ್‌ ಮೋದಿ: ವಂಚಿಸಿ ಭಾರತದಿಂದ ಪರಾರಿ, ಸುಶ್ಮಿತಾ ಸೇನ್‌ ಜತೆ ಡೇಟಿಂಗ್ ಸವಾರಿ!

Exit mobile version