ಯಾರು ಏನೇ ಹೇಳಲಿ ಪ್ರೀತಿಗೆ ಮಾತ್ರ ಆಯಸ್ಸು ಕಡಿಮೆ. ಅಂದಹಾಗೆ ಈ ಮಾತು ಭಗ್ನ ಪ್ರೇಮಿಗಳ ಬಾಯಲ್ಲಿ ಮಾಮೂಲಿ ಬಿಡಿ. ಇದೀಗ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ & ನಟಿ ಸುಶ್ಮಿತಾ ಸೇನ್ (lalit modi sushmita) ವಿಚಾರದಲ್ಲೂ ಇದೇ ಆಗಿದೆ. ಮೊನ್ನೆ ಮೊನ್ನೆ ಹುಟ್ಟಿದ್ದ ಪ್ರೀತಿಗೆ ಲಲಿತ್ ಮೋದಿ & ನಟಿ ಸುಶ್ಮಿತಾ ಸೇನ್ ಎಳ್ಳುನೀರು ಬಿಟ್ಟಿದ್ದಾರಾ..? ಎಂಬ ಹಸಿಬಿಸಿ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ.
ಅಷ್ಟಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಲಲಿತ್ ಮೋದಿ & ಸುಶ್ಮಿತಾ ಸೇನ್ ವಿಚಾರ ಈ ಮಟ್ಟಿಗೆ ಚರ್ಚೆಗೆ ಬರಲು ಕಾರಣ ಸ್ವತಃ ಲಲಿತ್ ಮೋದಿ. ಯಾಕಂದ್ರೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೊಫೈಲ್ನ Bio ಸೆಕ್ಷನ್ನಲ್ಲಿ ಸುಶ್ಮಿತಾ ಬಗ್ಗೆ ಹಂಚಿಕೊಂಡಿದ್ದ ಮಾಹಿತಿಯನ್ನ ದಿಢೀರ್ ಡಿಲೀಟ್ ಮಾಡಿದ್ದಾರೆ.
ಮುಳುಗಿದ ಪ್ರೀತಿ..?
ಕೆಲ ತಿಂಗಳ ಹಿಂದೆ ನಟಿ ಸುಶ್ಮಿತಾ ಸೇನ್ ಜೊತೆ ಪ್ರೀತಿ ಚಿಗುರಿದಾಗ ಲಲಿತ್ ಮೋದಿ ಭೂಮಿ ಮೇಲೆ ನಿಲ್ಲುತ್ತಿರಲಿಲ್ಲ. ಪ್ರಿಯತಮೆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದರು. ಹಾಗೇ ತಮ್ಮ Profile Bio Sectionನಲ್ಲಿ ‘ನನ್ನ ಕ್ರೈಮ್ ಪಾರ್ಟ್ನರ್ ಸುಶ್ಮಿತಾ ಜೊತೆ ಹೊಸ ಜೀವನ ಪ್ರಾರಂಭಿಸುತ್ತಿದ್ದೇನೆ’ ಎಂಬ ಮಾಹಿತಿ ತಿಳಿಸಿದ್ದರು. ಆದರೆ ಈ ಪ್ರೀತಿ ಈಗ ಹೊತ್ತು ಮುಳುಗುವ ಮೊದಲೇ ಮುಳುಗಿ ಹೋಗಿದೆ ಅಂತಿದ್ದಾರೆ ನೆಟ್ಟಿಗರು.
ಏಕೆ ಹೀಗಾಯ್ತೋ..!
ಇದೆಲ್ಲಾ ಆರಂಭವಾಗಿ ಇನ್ನೂ ಒಂದೂವರೆ ತಿಂಗಳು ಕಳೆದಿದೆ. ಕೇವಲ ಒಂದೂವರೆ ತಿಂಗಳ ಹಿಂದೆ ಸುಶ್ಮಿತಾ ಸೇನ್ & ಲಲಿತ್ ಮೋದಿ ಸರ್ಪ್ರೈಸ್ ಕೊಟ್ಟಿದ್ದರು. ತಾವಿಬ್ಬರು ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದರು. ಆಗಲೇ ಟ್ರೋಲರ್ಸ್ & ನೆಟ್ಟಿಗರ ಕೈಗೆ ಸಿಕ್ಕು ಒದ್ದಾಡಿದ್ದರು. ಫೋಟೋದಲ್ಲಿ ಇಬ್ಬರ ಆತ್ಮೀಯತೆಯನ್ನು ನೋಡಿ ವಿವಿಧ ಕಮೆಂಟ್ಗಳು ಬಂದಿದ್ದವು. ಆದರೆ ಈ ಪ್ರೀತಿ ಆರಂಭವಾಗಿ ಕೆಲವೇ ಕೆಲವು ತಿಂಗಳಿಗೆ ಅಳಿಸಿ ಹೋಯಿತಾ ಎಂಬ ಅನುಮಾನ ನೆಟ್ಟಿಗರಲ್ಲಿ ಶುರುವಾಗಿದೆ.
ವಯಸ್ಸು 46-58..!
ಸುಶ್ಮಿತಾ ಸೇನ್ಗೆ ಈಗ 46 ವರ್ಷ ಹಾಗೂ ಲಲಿತ್ ಮೋದಿಗೆ 58 ವರ್ಷ ವಯಸ್ಸು. ಈ ವಿಚಾರ ಕೂಡ ಟ್ರೋಲ್ಗೆ ಗುರಿಯಾಗಿತ್ತು. ಈ ಹಿಂದೆ ಕೂಡ ಸುಶ್ಮಿತಾ ಸೇನ್ ಹಲವು ಲವ್ಸ್ಟೋರಿಗಳಲ್ಲಿ ಸುದ್ದಿಯಾಗಿ, ಸದ್ದು ಮಾಡಿದ್ದವರು. ಆದರೂ ಸುಶ್ಮಿತಾಗೆ ಮದುವೆ ಆಗಿಲ್ಲ. ಲಲಿತ್ ಎಂಟ್ರಿಗೂ ಮೊದಲು 31 ವರ್ಷದ ರೋಹ್ಮನ್ ಶಾಲ್ ಜೊತೆ ಸುಶ್ಮಿತಾ ಪ್ರೀತಿಯಲ್ಲಿ ಬಿದ್ದಿದ್ದರು ಎಂಬ ಸುದ್ದಿ ಸದ್ದು ಮಾಡಿತ್ತು. ಬಳಿಕ ಬ್ರೇಕಪ್ ಮಾಡಿಕೊಂಡ ಸುದ್ದಿ ಕೂಡ ಜೋರಾಗಿತ್ತು. ಅಚ್ಚರಿ ಏನೆಂದರೆ ಕೆಲವು ದಿನಗಳ ಹಿಂದೆ ಮತ್ತೆ ಸುಶ್ಮಿತಾ ಸೇನ್ ಮತ್ತು ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆಯಾಗಿ ಕಾಣಿಸಿದ್ದರು. ಆಗಲೂ ನಟಿ ಸುಶ್ಮಿತಾ ಮತ್ತು ಲಲಿತ್ ಮೋದಿ ಟ್ರೋಲ್ಗೆ ಗುರಿಯಾಗಿದ್ದರು.
ಒಟ್ಟಾರೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ಲವ್ ಸ್ಟೋರಿ ಇದೀಗ ಅಂತ್ಯ ಕಂಡಿದೆಯಾ ಎಂಬ ಅನುಮಾನ ಶುರುವಾಗಿದೆ. ಇಷ್ಟೆಲ್ಲಾ ಹಸಿಬಿಸಿ ಚರ್ಚೆಗಳು ನಡೆಯುತ್ತಿದ್ದರೂ ಈವರೆಗೂ ಲಲಿತ್ ಮೋದಿ ಆಗಲಿ ಅಥವಾ ಸುಶ್ಮಿತಾ ಸೇನ್ ಆಗಲಿ ಸ್ಪಷ್ಟನೆ ನೀಡುತ್ತಿಲ್ಲ. ಆದರೂ ಪರೋಕ್ಷವಾಗಿ ಇದಕ್ಕೆಲ್ಲಾ ಉತ್ತರ ನೀಡುತ್ತಿದ್ದಾರೆ ಎಂಬ ಸಮಜಾಯಿಶಿ ನೆಟ್ಟಿಗರದ್ದು. ಬಹಿರಂಗವಾಗಿ ಲಲಿತ್ ಅಥವಾ ಸುಶ್ಮಿತಾ ಯಾವಾಗ ಈ ವಿಚಾರದ ಕುರಿತು ಮೌನ ಮುರಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಲಲಿತ್ ಮೋದಿ ಜತೆ ಡೇಟಿಂಗ್: ಕೊನೆಗೂ ಮೌನ ಮುರಿದ ಸುಶ್ಮಿತಾ ಸೇನ್ ಹೇಳಿದ್ದೇನು?