Site icon Vistara News

Viral Video | ನಟ ಸಲ್ಮಾನ್​ ಖಾನ್​ ಅಭಿಮಾನಿಗಳ ಮೇಲೆ ಪೊಲೀಸ್ ಲಾಠಿಚಾರ್ಜ್​​; ಎದ್ದುಬಿದ್ದು, ಚಪ್ಪಲಿ ಬಿಟ್ಟು ಓಡಿದ ಜನ

lathi charged on Salman Khan Fans

ಮುಂಬಯಿ: ಬಾಲಿವುಡ್​ ನಟ ಸಲ್ಮಾನ್ ಖಾನ್ ಡಿಸೆಂಬರ್​ 27ರಂದು 57ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನೆಚ್ಚಿನ ನಟನ ಜನ್ಮದಿನಕ್ಕೆ ವಿಶ್​ ಮಾಡಲು ಅವರ ಮನೆ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಅನೇಕರು ಕೈಯಲ್ಲಿ ದೊಡ್ಡದೊಡ್ಡ ಪೋಸ್ಟರ್​​ಗಳು, ಬ್ಯಾನರ್​​ಗಳನ್ನು ಹಿಡಿದು, ಸಲ್ಮಾನ್​ ಖಾನ್​​ಗೆ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಆಗಮಿಸಿದ್ದರು. ಯಾವಾಗ ಸಲ್ಮಾನ್​ ಖಾನ್​ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು, ತಮ್ಮ ಅಭಿಮಾನಿಗಳತ್ತ ಪ್ರೀತಿಯಿಂದ ಕೈಬೀಸಿದರೋ, ಆಗಂತೂ ಫ್ಯಾನ್ಸ್​ ಹುಚ್ಚೆದ್ದವರಂತೆ ವರ್ತನೆ ಮಾಡಿದ್ದಾರೆ. ಅವರ ಗಲಾಟೆ, ಮುನ್ನುಗ್ಗುವಿಕೆಯನ್ನು ನಿಯಂತ್ರಣ ಮಾಡಲು ಪೊಲೀಸರಿಗೆ ಸಾಧ್ಯವಾಗದೆ, ಲಘು ಲಾಠಿಚಾರ್ಜ್​ ಮಾಡಿದ್ದಾರೆ. ಸಲ್ಮಾನ್​ ಖಾನ್​ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ ವಿಡಿಯೊ ವೈರಲ್​ ಆಗಿದೆ.

ಸಲ್ಮಾನ್​ ಖಾನ್​ ಬರ್ತ್​ ಡೇ ಅವರ ಮನೆಯಲ್ಲಿ ಅದ್ದೂರಿಯಾಗಿ ನಡೆದಿದೆ. ನಟ ಶಾರುಖ್​ ಖಾನ್, ಸಂಗೀತಾ ಬಿಜಲಾನಿ, ಕಾರ್ತಿಕ್ ಆರ್ಯನ್, ಟಬು, ಸುನೀಲ್ ಶೆಟ್ಟಿ, ರಿತೇಶ್ ಮತ್ತು ಜೆನಿಲಿಯಾ, ಸೋನಾಕ್ಷಿ ಸಿನ್ಹಾ​ ಸೇರಿ ಹಲವು ಗಣ್ಯರು ಸಲ್ಮಾನ್​ ಮನೆಗೆ ಭೇಟಿ ಕೊಟ್ಟು ಅವರಿಗೆ ವಿಶ್​ ಮಾಡಿದ್ದಾರೆ. ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಹಾಗೇ ಅಭಿಮಾನಿಗಳೂ ಅವರ ಮನೆಯೆದುರು ಸೇರಿದ್ದರು. ತಿಳಿನೀಲಿ ಬಣ್ಣದ ಟಿ ಶರ್ಟ್​​ ಧರಿಸಿ, ತಮ್ಮ ಸಲೀಂ ಖಾನ್​ ಮತ್ತು ಬಾಡಿಗಾರ್ಡ್​​ಗಳ ಜತೆ ಬಾಲ್ಕನಿಗೆ ಬಂದ ಸಲ್ಮಾನ್​ ಖಾನ್​ ಅಭಿಮಾನಿಗಳತ್ತ ಕೈಬೀಸಿದರು. ಅವರು ಒಂದು ನಿಮಿಷ ಕೂಡ ಅಲ್ಲಿ ನಿಂತಿಲ್ಲ. ಅಭಿಮಾನಿಗಳ ಉತ್ಸಾಹ ಇಮ್ಮಡಿಯಾಗಲು ಅಷ್ಟೇ ಸಾಕಿತ್ತು. ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. ಪೊಲೀಸರ ಹೊಡೆತ ತಾಳಲಾಗದೆ ಹಲವರು ಎದ್ದುಬಿದ್ದು ಓಡಿದ್ದಾರೆ. ಶೂಗಳನ್ನೆಲ್ಲ ಬಿಟ್ಟು ಆ ಜಾಗ ಖಾಲಿ ಮಾಡಿದ್ದಾರೆ.

ಇದನ್ನೂ ಓದಿ: Actor Prabhas | ಸಲ್ಮಾನ್‌ ಖಾನ್‌ ಮದುವೆ ಆದ ನಂತರ ನನ್ನ ಮದುವೆ ಎಂದ ನಟ ಪ್ರಭಾಸ್‌!

Exit mobile version