ಬೆಂಗಳೂರು: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ (Liger Movie) ವಿಶ್ವಾದ್ಯಂತ ಆಗಸ್ಟ್ 25ರಂದು ಬಿಡುಗಡೆಗೊಂಡಿತ್ತು. ಆದರೆ ಸಿನಿಮಾದ ಬಾಕ್ಸ್ ಆಫೀಸ್‌ನಲ್ಲಿ ಭಾರಿ ನಿರಾಶೆಯನ್ನುಂಟು ಮಾಡಿತ್ತು. ಇದರ ಬೆನ್ನಲ್ಲೆ ಲೈಗರ್ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಸೆ. 30ರಂದು OTT ಕಂಪನಿ ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಲೈಗರ್ ಸ್ಟ್ರೀಮ್ ಆಗಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.
ಕಲೆಕ್ಷನ್‌ನಲ್ಲಿ ಭಾರಿ ಕುಸಿತ
ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಭಾರಿ ನಿರೀಕ್ಷೆಗಳ ನಡುವೆ ಬಂದ ಈ ಸಿನಿಮಾ ಅಷ್ಟೊಂದು ಪ್ರಭಾವ ಬೀರಲಿಲ್ಲ. ಮೊದಲ ಪ್ರದರ್ಶನದಿಂದಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 125 ಕೋಟಿ ರೂ. ವೆಚ್ಚದಲ್ಲಿ ಪಂಚ ಭಾಷೆಗಳಲ್ಲಿ ನಿರ್ಮಾಣಗೊಂಡ ಲೈಗರ್ ಸೆಪ್ಟೆಂಬರ್ ೪ರವರೆಗೆ ಮಾಡಿದ ಒಟ್ಟು ಕಲೆಕ್ಷನ್ ೬೬ ಕೋಟಿ ಮಾತ್ರ. ಅಂದರೆ ಹಾಕಿದ ದುಡ್ಡಿನ ಅರ್ಧದಷ್ಟೂ ಮರಳಿ ಬಂದಿಲ್ಲ. ಈಗಾಗಲೇ ಕಲೆಕ್ಷನ್ ವಿಪರೀತವಾಗಿ ಕುಸಿದಿದ್ದು, ಇನ್ನು ಹೆಚ್ಚಿನ ಗಳಿಕೆ ಸಾಧ್ಯತೆಯೂ ಇಲ್ಲ.
ಇದನ್ನೂ ಓದಿ | Liger Movie | ಸೋತ ಲೈಗರ್: ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕುಸಿತ, ನಿರ್ಮಾಪಕಿ ಚಾರ್ಮಿ ಕೌರ್ ಹೇಳಿದ್ದೇನು?
ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ
ಈ ಸಿನಿಮಾ ಬಗ್ಗೆ ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ನೆಗೆಟಿವ್ ಕಮೆಂಟ್‌ಗಳು ಹೆಚ್ಚು ಬಂದಿದ್ದು, ಕಲೆಕ್ಷನ್‌ಗೆ ಬಹಳ ಪೆಟ್ಟು ಕೊಟ್ಟಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಧರ್ಮ ಪ್ರೊಡಕ್ಷನ್‌ನಡಿ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಲಾಗಿದೆ. ಪೋಸ್ಟರ್‌ಗಳಿಂದಲೇ ಲೈಗರ್ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಅಲ್ಲದೆ, ಬಳಿಕ ಬಂದ ಟ್ರೈಲರ್ ಇದಕ್ಕೆ ಪುಷ್ಟಿ ನೀಡಿತ್ತು. ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆಗೊಂಡಿತು. ಆದರೆ ತೆರೆ ಮೇಲೆ ನೋಡಿದ ವೀಕ್ಷಕರು ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ.
ಈ ನಡುವೆ, ವಿಜಯದೇವರಕೊಂಡ ಅವರು ತಮಗೆ ಸಿಕ್ಕಿದ ಸಂಭಾವನೆಯಲ್ಲಿ ಆರು ಕೋಟಿ ರೂ.ವನ್ನು ನಿರ್ಮಾಪಕರಿಗೆ ವಾಪಸ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಖುಷಿ ಚಿತ್ರದಲ್ಲಿ ಬ್ಯುಸಿ ಆದ ವಿಜಯ್ ದೇವರಕೊಂಡ
ಲೈಗರ್ ಸೋಲಿನ ನಂತರ, ವಿಜಯ್ ದೇವರಕೊಂಡ ತಮ್ಮ ಮುಂದಿನ ಚಿತ್ರ ʻʻಖುಷಿʼʼ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರೀಕರಣದಲ್ಲಿ ಸಮಂತಾ ಕೂಡ ಭಾಗಿಯಾಗಿದ್ದಾರೆ.
ಇದನ್ನೂ ಓದಿ | Liger Movie | ನೆಗೆಟಿವ್ ಕಮೆಂಟ್‌ಗೆ ಮುಗ್ಗರಿಸಿತೇ ಲೈಗರ್: ಮೊದಲ ದಿನದ ಕಲೆಕ್ಷನ್ ಕಡಿಮೆಯಾಗಿದ್ದೇಕೆ?