Site icon Vistara News

Liger | ಲೈಗರ್ ಸಿನಿಮಾದ ಥೀಮ್ ಸಾಂಗ್ ರಿಲೀಸ್‌: ಸಖತ್‌ ಮಾಸ್‌ ಸಾಂಗ್‌ ಎಂದ ಫ್ಯಾನ್ಸ್‌

Liger

ಬೆಂಗಳೂರು : ವಿಜಯ್ ದೇವರಕೊಂಡ ನಟನೆಯ ಬಹು ನಿರೀಕ್ಷಿತ ಚಿತ್ರ ಲೈಗರ್ (Liger) ಟ್ರೈಲರ್‌ ರಿಲೀಸ್ ಆಗಿ ಧೂಳ್‌ ಎಬ್ಬಿಸಿತ್ತು. ಇದೀಗ ಲೈಗರ್ ಅಂಗಳದಿಂದ ಥೀಮ್ ಸಾಂಗ್ ರಿಲೀಸ್ ಆಗಿದೆ. ನಾಯಕನನ್ನು ವರ್ಣಿಸುವ ಹಾಡು ಇದಾಗಿದೆ. ವಿಜಯ್ ಮಾಸ್ ಡೈಲಾಗ್‌ನಿಂದ ಶುರುವಾಗುವ ಈ ಹಾಡು ಯೂಟ್ಯೂಬ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಈ ಮೊದಲು ರಿಲೀಸ್ ಆಗಿದ್ದ ʻಅಕ್ಡಿ ಪಕ್ಡಿʼ ಹಾಡಿಗೆ ವಿಜಯ್‌ ದೇವರಕೊಂಡ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಮೂಲಕ ಮೈಕ್ ಟೈಸನ್ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಲೈಗರ್‌ಗೆ ಜೋಡಿಯಾಗಿ ಅನನ್ಯ ಪಾಂಡೆ ನಟಿಸಿದ್ದು, ರಮ್ಯಾಕೃಷ್ಣ ವಿಜಯ್ ತಾಯಿಯಾಗಿ ಅಬ್ಬರಿಸಿದ್ದಾರೆ.

ಧರ್ಮ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ಕರನ್ ಜೋಹರ್, ಪುರಿ ಜಗನ್ನಾಥ್, ಅಪೂರ್ವ ಮೆಹ್ತಾ ಲೈಗರ್ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಪೋಸ್ಟರ್‌ಗಳಿಂದಲೇ ನಿರೀಕ್ಷೆ ಹೆಚ್ಚಿಸಿದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ ಚಿತ್ರ ಲೈಗರ್ ಮುಂದಿನ ತಿಂಗಳ 25ಕ್ಕೆ ಬಿಗ್ ಸ್ಕ್ರೀನ್‌ಗೆ ಲಗ್ಗೆ ಇಡಲಿದೆ.

ಇದನ್ನೂ ಓದಿ | Liger song Akdi Pakdi | ವಿಜಯ್‌ ದೇವರಕೊಂಡ ಅಭಿನಯದ ʼಲೈಗರ್‌ʼನ ಅಕ್ಡಿ ಪಕ್ಡಿ ಸಾಂಗ್ ಔಟ್

ವಿಶ್ವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಈ ಚಿತ್ರದಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದು, ಕನ್ನಡದಲ್ಲಿಯೂ ರಿಲೀಸ್ ಆಗುತ್ತಿದೆ. ಆಗಸ್ಟ್‌ 25ರಂದು ತೆರೆಗೆ ಬರಲಿದೆ.

ಇದನ್ನೂ ಓದಿ | Liger Movie | ಗುಲಾಬಿ ಸಾಕು ಮಾನ ಮುಚ್ಚೋಕೆ! ಲೈಗರ್‌ ಪೋಸ್ಟರ್‌ನಲ್ಲಿ ವಿಜಯ್‌ ದೇವರಕೊಂಡ ನಗ್ನಾವತಾ

Exit mobile version