Site icon Vistara News

Liger Movie | ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್‌: ಷರಾ ಬರೆದ ಟ್ವಿಟ್ಟಿಗರು!

Liger Movie

ಬೆಂಗಳೂರು: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ (Liger Movie) ವಿಶ್ವಾದ್ಯಂತ ಗುರುವಾರ (ಆ.25) ಬಿಡುಗಡೆಗೊಂಡಿದೆ. ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು ಖುಷ್‌ ಆಗಿದ್ದಾರೆ. ಆದರೆ, ಕೆಲವರು ಟ್ವಿಟ್ಟರ್‌ ಮೂಲಕ ಜಾಡಿಸಿದ್ದು, ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್‌ ಅನ್ನು ಈ ಸಿನಿಮಾ ಹೊಂದಿದೆ ಎಂದು ಬರೆದುಕೊಂಡಿದ್ದಾರೆ.

ʻʻಇದು ಅತ್ಯುನ್ನತ ಸಿನಿಮಾ. ವಿಜಯ್‌ ದೇವರಕೊಂಡ ಅವರ ಬಾಕ್ಸಿಂಗ್‌ ದೃಶ್ಯಗಳು ಕ್ಲಾಸಿ ಆಗಿ ಮೂಡಿ ಬಂದಿದೆ. ಅನನ್ಯಾ ಪಾಂಡೆ ನಟನೆ ರೊಮ್ಯಾಂಟಿಕ್‌ ಆಗಿದ್ದು, ತುಂಬಾ ಚೆಂದವಾಗಿ ಕಾಣಿಸಿದ್ದಾರೆʼʼ ಎಂದು ಕೆಲವರು ಟ್ವೀಟ್‌ ಮೂಲಕ ತಮ್ಮ ಸಂತಸವನ್ನು ಹೊರಹಾಕಿದ್ದಾರೆ.

ʻʻಸಿನಿಮಾದಲ್ಲಿ ಅಬ್ಬರವಿದ್ದರೂ ಸೊಗಸಾಗಿ ಮೂಡಿಬಂದಿದೆ. ಫೈಟರ್‌ ಜೀವನ ಅಷ್ಟಾಗಿ ಚೆನ್ನಾಗಿಲ್ಲ. ಫೈಟ್‌ಗಳ ಅಬ್ಬರ ಮಾತ್ರ ಇದೆ. ಆದರೆ, ಕಥೆ ಇಲ್ಲ” ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್‌ ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್‌ ಹೊಂದಿದೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Liger Movie | ನಾಳೆಯಿಂದ ತೆರೆ ಮೇಲೆ ಅಬ್ಬರಿಸಲಿದೆ ಲೈಗರ್‌: ಟಿಕೆಟ್‌ ಸೋಲ್ಡ್‌ ಔಟ್‌!

ಸಿನಿಮಾ ತಾಂತ್ರಿಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೇಕ್ಷಕರು ಒಳ್ಳೆಯ ಪ್ರತಿಕ್ರಿಯೆ ನೀಡಿದ್ದು, ʻʻಕ್ಯಾಮರಾ ಮತ್ತು ಸಾಹಸ ನಿರ್ದೇಶನ ಅದ್ಭುತವಾಗಿ ಮೂಡಿ ಬಂದಿದೆʼʼ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ. ಮೊದಲಾರ್ಧ ತಾಯಿಯ ಸೆಂಟಿಮೆಂಟ್‌ ಉತ್ತಮವಾಗಿ ಬಂದಿದೆ. ಅಲ್ಲದೆ, ಮಾಸ್‌ ಮಸಲಾವನ್ನು ಇದರಲ್ಲಿ ಕಾಣಬಹುದಾಗಿದೆ. ಆದರೆ, ಚಿತ್ರಕಥೆ ಚೆನ್ನಾಗಿಲ್ಲʼʼ ಎಂದು ಟ್ವೀಟಿಗರು ಮೂದಲಿಸಿದ್ದಾರೆ.

ಬೆಳ್ಳಂಬೆಳಗ್ಗೆ ಥಿಯೇಟರ್ ಅಂಗಳಕ್ಕೆ ವಿಜಯ್ ದೇವರಕೊಂಡ ಫ್ಯಾನ್ಸ್ ಲಗ್ಗೆ ಇಟ್ಟಿದ್ದಾರೆ. ಕರ್ನಾಟಕದಲ್ಲೂ ಲೈಗರ್ ಅಬ್ಬರ ಜೋರಾಗಿದೆ.

ಧರ್ಮ ಪ್ರೊಡಕ್ಷನ್‌ನಡಿ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲಾಗಿದೆ. ಪೋಸ್ಟರ್‌ಗಳಿಂದಲೇ ನಿರೀಕ್ಷೆ ಹೆಚ್ಚಿಸಿದೆ. ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ ಚಿತ್ರವಾಗಿದೆ.

ವಿಜಯ್‌ ದೇವರಕೊಂಡ ಇಷ್ಟು ದಿನ ರೊಮ್ಯಾಂಟಿಕ್‌ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಬಾಕ್ಸಿಂಗ್‌ನ ದಿಗ್ಗಜ ಮೈಕ್‌ ಟೈಸನ್‌ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಇದನ್ನೂ ಓದಿ | Liger Movie | ವಿಶ್ವಾದ್ಯಂತ ಶುರುವಾಗಿದೆ ಲೈಗರ್‌ ಆರ್ಭಟ: ಅಕ್ಡಿ ಪಕ್ಡಿ ಹಾಡಿಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್‌

Exit mobile version