Site icon Vistara News

Ayodhya Ram Mandir: ದೊಡ್ಡ  ಪರದೆಯಲ್ಲೆ ಲೈವ್‌ ರಾಮ ಮಂದಿರ ಕಾರ್ಯಕ್ರಮ ವೀಕ್ಷಿಸಿ; ಟಿಕೆಟ್‌ ದರ ಎಷ್ಟು?

live streaming of Ram Mandir inauguration in cinemas

ಬೆಂಗಳೂರು: ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಗರ್ಭಗೃಹದಲ್ಲಿ ಇರಿಸಲಾಗಿರುವ ರಾಮಲಲ್ಲಾ ವಿಗ್ರಹವನ್ನು (Ram Lalla Idol) ಈಗಾಗಲೇ ಬಹಿರಂಗಗೊಳಿಸಲಾಗಿದೆ. ಸೋಮವಾರ ಈ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ (Pran Pratishta) ನಡೆಯಲಿದೆ. ಹಲವು ಗಣ್ಯರಿಗೆ ಆಹ್ವಾನ ಕೂಡ ಬಂದಿದೆ. ಕೆಲವರಿಗೆ ಹೋಗಲು ಇಚ್ಛೆ ಇದ್ದರೂ ಭಾಗಿಯಾವ ಅವಕಾಶ ಇರುವುದಿಲ್ಲ. ಹೀಗಾಗಿ ಇದಕ್ಕೆ ಪಿವಿಆರ್​ ಹಾಗೂ ಐನಾಕ್ಸ್ ಅವಕಾಶವೊಂದನ್ನು ನೀಡಿದೆ. ಪಿವಿಆರ್​ ಹಾಗೂ ಐನಾಕ್ಸ್ ದೇಶದ ಪ್ರಮುಖ 70 ನಗರಗಳಲ್ಲಿ 170ಕ್ಕೂ ಅಧಿಕ ಕೇಂದ್ರಗಳಲ್ಲಿ ಈ ಕಾರ್ಯಕ್ರಮವನ್ನು ಲೈವ್ ಪ್ರಸಾರ ಮಾಡಲಿದೆ.

ಅಯೋಧ್ಯೆಯಿಂದ ಲೈವ್ ಸ್ಟ್ರೀಮಿಂಗ್ ಅನ್ನು ಬೆಳಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ನಿಗದಿಪಡಿಸಲಾಗಿದೆ. ಟಿಕೆಟ್‌ಗಳನ್ನು ಪಿವಿಆರ್​ ಹಾಗೂ ಐನಾಕ್ಸ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು. ಇದು ಕೇವಲ ಸಿನಿಮಾ ಟಿಕೆಟ್ ದರ ಅಲ್ಲ, ಇದರಲ್ಲಿ ತಂಪು ಪಾನೀಯ ಹಾಗೂ ಪಾಪ್​ಕಾರ್ನ್​ ಕಾಂಬೋ ಹಣವೂ ಸೇರಿದೆ ಎನ್ನುವುದು ವಿಶೇಷ.

ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಸಹ-ಸಿಇಒ ಗೌತಮ್ ದತ್ತಾ, ಈ ಸಂದರ್ಭದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ “ಇಂತಹ ಭವ್ಯವಾದ ಮತ್ತು ಐತಿಹಾಸಿಕ ಸಂದರ್ಭಗಳನ್ನು ಅದ್ಧೂರಿಯಾಗಿ ಅನುಭವಿಸಬೇಕು. ಸಿನಿಮಾ ಪರದೆಗಳು ಸಾಮೂಹಿಕ ಆಚರಣೆಯ ಭಾವನೆಗಳಿಗೆ ಜೀವ ತುಂಬುತ್ತವೆ. ನಮಗೆ ಒಂದು ಸೌಭಾಗ್ಯವಾಗಿದೆ.”ಎಂದು ಹೇಳಿದರು. ಬುಕ್ ಮೈ ಶೋನಲ್ಲಿ ಇನ್ನೂ ಟಿಕೆಟ್​ ಬುಕಿಂಗ್ ಆರಂಭ ಆಗಿಲ್ಲ.

ಇದನ್ನೂ ಓದಿ: Ayodhya Ram Mandir: ಅಯೋಧ್ಯೆ ಮೇಲೆ ದಾಳಿಗೆ ಖಲಿಸ್ತಾನ್‌ ಸಂಚು! ಬಂಧಿತ ಮೂವರಿಗೆ ಉಗ್ರರ ಸಂಪರ್ಕ ಖಚಿತ

ಜನವರಿ 22ರಂದು ಅಯೋಧ್ಯೆಯಯಲ್ಲಿ ನಡೆಯಲಿರುವ ರಾಮ ಮಂದಿರದ ಪ್ರತಿಷ್ಠಾಪನೆಯ ದಿನದಂದು ಮಹಾರಾಷ್ಟ್ರ ಸರ್ಕಾರ ಒಂದು ದಿನದ ಸಾರ್ವಜನಿಕ ರಜೆ ಘೋಷಿಸಿದೆ. ಈ ಸಂಬಂಧ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಕರ್ನಾಟಕದಲ್ಲೂ ರಜೆ ನೀಡುವಂತೆ ಪ್ರತಿಪಕ್ಷ ಬಿಜೆಪಿ, ನಾನಾ ಸಂಘ ಸಂಸ್ಥೆಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಒತ್ತಾಯಿಸುತ್ತಿವೆ. ಆದರೆ ಸರ್ಕಾರದ ನಿರ್ಧಾರ ಏನೆಂಬುದು ಪ್ರಕಟಗೊಂಡಿಲ್ಲ.

ರಾಮ ಮಂದಿರ ಉದ್ಘಾಟನೆ ದಿನ ನೆರೆಯ ಮಹಾರಾಷ್ಟ್ರದಲ್ಲಿ ಸರ್ಕಾರಿ ರಜೆ

ಮಹಾರಾಷ್ಟ್ರ ರಾಜ್ಯ ಸರ್ಕಾರವು ಜನವರಿ 22ರ ದಿನವನ್ನು ‘ಶ್ರೀ ರಾಮ್ ಲಲ್ಲಾ ಪ್ರಾಣ್-ಪ್ರತಿಷ್ಠಾ ದಿನ್’ ಎಂದು ಘೋಷಿಸುತ್ತಿದೆ ಎಂದು ರಾಜ್ಯ ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶವು ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು ಮತ್ತು ಉದ್ಯಮಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.

“ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಗಾಗಿ ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್​ಗೆ ಸಿಎಂ ಏಕನಾಥ್ ಶಿಂಧೆ ಹೋಗಿದ್ದರು. ಈ ವೇಳೆ ಸಿದ್ಧಪಡಿಸಿದ್ದ ಅನುಮೋದನೆಗೆ ಅಂಕಿತ ಬಿದ್ದಿದ್ದು, ಆದೇಶವನ್ನು ಹೊರಡಿಸಲಾಗಿದೆ ಎಂದು ಆಡಳಿತ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನವರಿ 22 ರಂದು “ದೀಪಾವಳಿ ರೀತಿ ಆಚರಣೆ” ನಡೆಸಲು ಮುಂಬೈ ನಗರದಾದ್ಯಂತ ದೇವಾಲಯಗಳು ಮತ್ತು ಕಟ್ಟಡಗಳ ಮೇಲೆ ಅಲಂಕಾರಿಕ ದೀಪಗಳನ್ನು ಹಾಕುವಂತೆ ಮುಖ್ಯಮಂತ್ರಿ ಈಗಾಗಲೇ ಮುಂಬೈ ನಗರ ಆಯುಕ್ತರ ಐಎಸ್ ಚಾಹಲ್ ಅವರಿಗೆ ನಿರ್ದೇಶನ ನೀಡಿದ್ದಾರೆ.

Exit mobile version