ಬೆಂಗಳೂರು : ಲವ್ ಮಾಕಟೆಲ್- 2 ಖ್ಯಾತೀಯ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಮತ್ತೆ ತೆರೆಯ ಮೇಲೆ ‘ಲವ್ ಬರ್ಡ್ಸ್’ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಪಿ.ಸಿ. ಶೇಖರ್ ನಿರ್ದೇಶನದ ಈ ಚಿತ್ರವನ್ನು ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡುತ್ತಿರುವುದು ವಿಶೇಷ.
ಈ ಹಿಂದೆ ಪಿ.ಸಿ. ಶೇಖರ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಚಿತ್ರವೊಂದು ಬರುತ್ತಿರುವಾದಾಗಿ ಕನ್ಫರ್ಮ್ ಆಗಿತ್ತು. ಆದರೆ ಇದೀಗ ಮತ್ತೆ ಇವರಿಬ್ಬರೂ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದ್ದು, ಸಂತಸ ಹಂಚಿಕೊಂಡಿದ್ದಾರೆ.
ಲವ್ ಮಾಕ್ಟೆಲ್ -2 ಯಶಸ್ಸಿನ ನಂತರ ಈ ಜೋಡಿ ಇದೇ ಚಿತ್ರಕ್ಕೆ ಮುಖ್ಯ ಭೂಮಿಕೆಯಲ್ಲಿ ಕಾನಿಸಿಕೊಳ್ಳುತ್ತಿದ್ದಾರೆ. ಮದುವೆ ಆದ ಮೇಲಿನ ಪ್ರೀತಿಯನ್ನು ಕಥೆ ʼಲವ್ ಬರ್ಡ್ಸ್ʼ ಒಳಗೊಂಡಿದ್ದು. ನಿಧಿಮಾ ಈ ಸಿನಿಮಾದಲ್ಲಿ ಯಾವ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಅಭಿಮಾನಿಗಳು ಕೂತೂಹಲದಿಂದ ಕಾಯುತ್ತಿದ್ದಾರೆ. ನಿಜ ಜೀವನದಲ್ಲಿಯೂ ದಂಪತಿಯಾಘಿರುವ ಈ ಜೋಡಿ ಚಿತ್ರದಲ್ಲಿ ಜೋಡಿಯಾಗಿ ನಟಿಸುತ್ತಿರುವುದಕ್ಕೆ ನಿರ್ದೇಶಕ ಶೇಖರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ದೂರದರ್ಶನ: ಇದು ಟಿವಿಯೊಂದಿಗೆ ಬದಲಾದ 80ರ ದಶಕದ ಚಿತ್ರಣ
ಈ ವಿಚಾರವಾಗಿ ಮಿಲನಾ ʼಕೃಷ್ಣ ಮತ್ತು ನಾನು ತೆರೆಯ ಮೇಲೆ ಮತ್ತೆ ಕಾಣಿಸಿಕೊಳ್ಳಬೇಕು, ಸ್ಕ್ರಿಪ್ಟ್ ಬರೆಯಬೇಕು ಎಂದು ಯೋಚಿಸಿದ್ದೆವು. ಆದರೆ ಕೃಷ್ಣ ಸ್ವಲ್ಪ ಬ್ಯುಸಿಯಾಗಿದ್ದಾರೆ. ಆದರೆ ಈ ಚಿತ್ರದ ಸ್ಕ್ರಿಪ್ಟ್ ಕೇಳಿದಾಗ ಕನೆಕ್ಟ್ ಆಯಿತು ಹಾಗೂ ಲವ್ ಮಾಕ್ಟೆಲ್ ಗಿಂತ ವಿಭಿನ್ನ ವಾಗಿದ್ದು, ಪಿ.ಸಿ. ಶೇಖರ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಸಂತಸ ವಿಚಾರʼ ಎಂದರು ಮಿಲನಾ.
ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್, ಅವಿನಾಶ್ ಮೊದಲಾದವರು ಬಣ್ಣ ಹಚ್ಚುತ್ತಿದ್ದಾರೆ. ಚಿತ್ರಕ್ಕಾಗಿ ಸೆಟ್‌ಗಳ ತಯಾರಿ ನಡೆದಿದೆ.
ಚಿತ್ರದ ಚಿತ್ರೀಕರಣ ಮೇ 30 ರಿಂದ ಆರಂಭವಾಗುತ್ತಿದ್ದು, ಸುಮಾರು 55 ದಿನಗಳ ಕಾಲ ಚಿತ್ರೀಕರಣ ಮುಂದುವರೆಯಲಿದೆ. ಚಿತ್ರೀಕರಣಕ್ಕೆ 18 ಪ್ರದೇಶಗಳನ್ನು ಫೈನಲ್ ಮಾಡಲಾಗಿದೆ. ಈ ಪ್ರದೇಶಗಳಲ್ಲಿಯೇ ಬಹುತೇಕ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಇದರಲ್ಲಿ ನಾಯಕ ಮತ್ತು ನಾಯಕಿಯ ಕೋಪ, ಪ್ರೀತಿ, ಸಂತೋಷವನ್ನು ವ್ಯಕ್ತಪಡಿಸುವಂತಹ ಹಾಡುಗಳಿವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Golden Star | ಬಾನದಾರಿಯಲ್ಲಿ ಸಿನಿಮಾ First Look ರಿಲೀಸ್