Site icon Vistara News

Lucky Man Movie | ಪ್ರಭುದೇವ ಹಾಗೂ ಅಪ್ಪು ಡ್ಯಾನ್ಸ್ ಚಮತ್ಕಾರ : ಬಿಡುಗಡೆಗೆ ಸಜ್ಜಾದ ಲಕ್ಕಿ ಮ್ಯಾನ್‌

Lucky Man Movie

ಬೆಂಗಳೂರು : ಲಕ್ಕಿಮ್ಯಾನ್‌ (Lucky Man Movie) ಕನ್ನಡ ಚಿತ್ರರಂಗಕ್ಕೆ ಲಕ್‌ನಂತೆಯೇ ಇದ್ದ ಪುನೀತ್ ರಾಜ್‌ ಕುಮಾರ್‌ ನಟನೆಯ ಲಕ್ಕಿ ಮ್ಯಾನ್‌ ಚಿತ್ರ ಆಗಸ್ಟ್‌ನಲ್ಲಿ ತೆರೆ ಕಾಣಲಿದೆ. ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳಿಗೆ ಡಾರ್ಲಿಂಗ್‌ ಕೃಷ್ಣ ಲಕ್ಕಿ ಮ್ಯಾನ್‌ ಚಿತ್ರದ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

ನಾಯಕ ನಟನಾಗಿ ಡಾರ್ಲಿಂಗ್‌ ಕೃಷ್ಣ ಈ ಚಿತ್ರದಲ್ಲಿ ನಟಿಸಿದ್ದು ಇದೀಗ ಲಕ್ಕಿಮ್ಯಾನ್‌ (Lucky Man Movie) ಚಿತ್ರದ ಅಪ್ಡೇಟ್ ಕುರಿತು ಪೋಸ್ಟ್ ಮಾಡಿದ್ದಾರೆ. ಹೌದು, ಲಕ್ಕಿಮ್ಯಾನ್ ಚಿತ್ರದ ಆಡಿಯೋ ಆದಷ್ಟು ಬೇಗ ಬಿಡುಗಡೆಗೆ ಸಜ್ಜಾಗುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಅಪ್ಪು ಬಾಸ್‌ ಧ್ವನಿಯಲ್ಲಿ ಹಾಡಿರುವ ಹಾಡು ಹಾಗೂ ಡ್ಯಾನ್ಸ್‌ ಕಿಂಗ್‌ ಪ್ರಭುದೇವ ಜತೆ ಅಪ್ಪು ಡ್ಯಾನ್ಸ್‌ ಚಮತ್ಕಾರ ನೋಡಲು ಎಲ್ಲ ಸೆಟ್‌ ಆಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ | Love Birds: ಸ್ಯಾಂಡಲ್‌ವುಡ್‌ ರಿಯಲ್‌ ‘ಲವ್‌ ಬರ್ಡ್ಸ್‌’ ಮತ್ತೆ ಪ್ರೇಕ್ಷರ ಮುಂದೆ

ಇದೊಂದು ಕನ್ನಡದ ರೊಮ್ಯಾಂಟಿಕ್‌ ಕಾಮಿಡಿ ಚಿತ್ರವಾಗಿದ್ದು ನಾಗೇಂದ್ರ ಪ್ರಸಾದ್‌ ನಿರ್ದೇಶಿಸಿದ್ದಾರೆ. ಪಿ ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್‌ ಸುಂದರ್‌ ಕಾಮರಾಜ್ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ರೋಶನಿ ಪ್ರಕಾಶ್, ಪುನೀತ್ ರಾಜ್ ಕುಮಾರ್ ಮತ್ತು ಪ್ರಭುದೇವ ನಟಿಸಿರುವ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದೆ.

ಸಿನಿಮಾದಲ್ಲಿ ಪ್ರಭುದೇವ್‌ ಹೆಜ್ಜೆ ಹಾಕಲು ಕಾರಣವಿದೆ. ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ನಾಗೇಂದ್ರ ಪ್ರಸಾದ್‌. ʼಮನಸೆಲ್ಲಾ ನೀನೆʼ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕೊರಿಯೋಗ್ರಾಫರ್‌ ಕೂಡ ಆದ ಇವರು ಇತ್ತೀಚೆಗೆ ತೆರೆಗೆ ಬಂದ ತಲೈವಿ ಸೇರಿ ಸಾಕಷ್ಟು ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಈಗ ʼಲಕ್ಕಿ ಮ್ಯಾನ್‌ʼ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ನಾಗೇಂದ್ರ ಪ್ರಸಾದ್‌ ಅವರ ಅಣ್ಣನೇ ಪ್ರಭುದೇವ್‌.

ಡಾರ್ಲಿಂಗ್‌ ಕೃಷ್ಣ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ದಿಲ್‌ ಪಸಂದ್‌, ಲವ್‌ ಬರ್ಡ್ಸ್‌, ಶುಗರ್‌ ಫ್ಯಾಕ್ಟರಿ, ಲಕ್ಕಿ ಮ್ಯಾನ್‌, ಮಿಸ್ಟರ್‌ ಬ್ಯಾಚುಲರ್‌ ಚಿತ್ರಗಳು ಕೈಯಲ್ಲಿದೆ. ತಮ್ಮ ಹುಟ್ಟು ಹಬ್ಬದಂದು ನಿರ್ದೇಶಕ ಶಶಾಂಕ್‌ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಕೃಷ್ಣ ನಾಯಕನಾಗಿರುವ ಈ ಚಿತ್ರವನ್ನು ಶಶಾಂಕ್‌ ನಿರ್ದೆಶಿಸುವ ಜತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ | Trivikrama Movie | ಪ್ರೀ ರಿಲೀಸ್ ಇವೆಂಟ್‌ ಲಾಂಚ್‌ಗೆ ಬರಲಿದೆ ಸ್ಯಾಂಡಲ್‌ವುಡ್‌ ದಂಡು

Exit mobile version