Site icon Vistara News

Lucky Man Movie | ಇಂದು ರಾಜ್ಯಾದ್ಯಂತ ಲಕ್ಕಿಮ್ಯಾನ್ ರಿಲೀಸ್ : ಥಿಯೇಟರ್ ಅಂಗಳದಲ್ಲಿ ಸಂಭ್ರಮಿಸಿದ ಅಪ್ಪು ಫ್ಯಾನ್ಸ್!

Lucky Man Movie

ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ಲಕ್‌ನಂತೆಯೇ (Lucky Man Movie) ಇದ್ದ ಪುನೀತ್ ರಾಜಕುಮಾರ್‌ ನಟನೆಯ ಲಕ್ಕಿ ಮ್ಯಾನ್‌ ಚಿತ್ರ ಶುಕ್ರವಾರ (ಸೆ.9) ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ನಟ ಪುನೀತ್‌ ರಾಜ್‌ಕುಮಾರ್‌ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಥಿಯೇಟರ್ ಅಂಗಳದಲ್ಲಿ ಅಪ್ಪು ಅಭಿಮಾನಿಗಳ ಹಬ್ಬ ರಂಗೇರಿದೆ.

300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಲಕ್ಕಿಮ್ಯಾನ್’ ಬಿಡುಗಡೆಗೊಂಡಿದ್ದು, 40 ನಿಮಿಷಕ್ಕೂ ಹೆಚ್ಚು ಪುನೀತ್‌ ರಾಜ್‌ಕುಮಾರ್‌ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ನೋಡಿ ಅಪ್ಪು ಫ್ಯಾನ್ಸ್‌ ಕಣ್ಣೀರಿಟ್ಟಿದ್ದಾರೆ. ಪುನೀತ್ ರಾಜಕುಮಾರ್ ಇಷ್ಟದ ಚಿತ್ರಮಂದಿರ ನರ್ತಕಿ 10 ತಿಂಗಳಿಂದ ಪ್ರದರ್ಶನ ನಿಲ್ಲಿಸಿತ್ತು. ಇದೀಗ ನರ್ತಕಿ ಥಿಯೇಟರ್‌ನಲ್ಲಿ ʻಲಕ್ಕಿಮ್ಯಾನ್’ ಫಸ್ಟ್ ಡೇ ಫಸ್ಟ್ ಶೋ ಆಗಿ ತೆರೆ ಕಂಡಿರುವುದು ವಿಶೇಷ. ನರ್ತಕಿ ಚಿತ್ರಮಂದಿರದಲ್ಲೇ ರಾಜ್‌ ಕುಟುಂಬ ಸಿನಿಮಾ ನೋಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Lucky Man Movie | ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆ ಬರೆದ ಪವರ್ ಸ್ಟಾರ್ ಲಕ್ಕಿಮ್ಯಾನ್!

ಪುನೀತ್ ಗಾಗಿ ಡಾನ್ಸ್ ಮಾಡಿದ ಮಕ್ಕಳು!
ಚಿತ್ರಮಂದಿರದ ಅಂಗಳದಲ್ಲಿ ಅಪ್ಪು ರೀತಿ ಸ್ಟೆಪ್ಸ್ ಹಾಕಿ ಪುಟಾಣಿ ಮಕ್ಕಳು ಡ್ಯಾನ್ಸ್‌ ಮಾಡಿ ಗಮನ ಸೆಳೆದರು. ಮಕ್ಕಳ ಡಾನ್ಸ್ ನೋಡಿ ಫ್ಯಾನ್ಸ್‌ ಸಂಭ್ರಮಿಸಿದ್ದಾರೆ. ಅಪ್ಪು ಅಭಿಮಾನಿಗಳ ಜತೆ ನಿರ್ದೇಶಕ ನಾಗೇಂದ್ರ ಪ್ರಸಾದ್‌ ಟಪಾಂಗುಚ್ಚಿ ಸ್ಟೆಪ್ಸ್ ಹಾಕಿದರು. ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಸಂಗೀತ ಕೂಡ ಸಿನಿಮಾ ವೀಕ್ಷಿಸಲು ನರ್ತಕಿ ಥಿಯೇಟರ್‌ಗೆ ಆಗಮಿಸಿದ್ದರು.

ನಾಗೇಂದ್ರ ಪ್ರಸಾದ್‌ ನಿರ್ದೇಶನ ಮಾಡಿದ್ದು, ಪಿ ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್‌. ಸುಂದರ್‌ ಕಾಮರಾಜ್ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ರೋಶನಿ ಪ್ರಕಾಶ್, ಪುನೀತ್ ರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Lucky Man Movie | ಲಕ್ಕಿ ಮ್ಯಾನ್‌ ಚಿತ್ರಕ್ಕೆ ಯು ಸರ್ಟಿಫಿಕೇಟ್‌: ಅಡ್ವಾನ್ಸ್ ಬುಕ್ಕಿಂಗ್‌ ಓಪನ್‌!

Exit mobile version