Site icon Vistara News

Lucky Man Movie | ನಟ ಪುನೀತ್ ರಾಜಕುಮಾರ್ ಅಭಿನಯದ ಲಕ್ಕಿ ಮ್ಯಾನ್ ಸಿನಿಮಾದ ಟೀಸರ್ ಔಟ್‌

ಲಕ್ಕಿ ಮ್ಯಾನ್‌

ಬೆಂಗಳೂರು: ನಟ ಪುನೀತ್‌ ರಾಜಕುಮಾರ್‌ ಅಭಿನಯದ ಲಕ್ಕಿ ಮ್ಯಾನ್ (Lucky Man Movie) ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್ ಸಹ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತ ಶೃಂಗೇರಿ ಜೋಡಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಅಪ್ಪು ಹಾಗೂ ಪ್ರಭುದೇವ್ ಒಂದು ಹಾಡಿನಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೆ, ಪುನೀತ್ ದೇವರ ಪಾತ್ರದಲ್ಲಿ ಅಭಿನಯಿಸಿದ್ದು ಕಥೆಗೆ ತಿರುವು ನೀಡಲಿದ್ದಾರೆ.

ಎಸ್.ನಾಗೇಂದ್ರ ಪ್ರಸಾದ್ ನಿರ್ದೇಶನ ಸಿನಿಮಾದಲ್ಲಿ ಸಾಧು ಕೋಕಿಲ, ರೋಶಿನಿ ಪ್ರಕಾಶ್ ಮುಂತಾದವರು ನಟಿಸಿದ್ದಾರೆ. ಅಪ್ಪು ದೇವರ ಪಾತ್ರದಲ್ಲಿ ಕಾಣಿಸಿಕೊಂಡಿರೋದನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತಿದ್ದಾರೆ.ಪಿ ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್‌. ಸುಂದರ್‌ ಕಾಮರಾಜ್ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ರೋಶನಿ ಪ್ರಕಾಶ್, ಪುನೀತ್ ರಾಜ್ ಕುಮಾರ್ ಮತ್ತು ಪ್ರಭುದೇವ ನಟಿಸಿರುವ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದೆ.

ಇದನ್ನೂ ಓದಿ | Lucky Man Movie | ಆಗಸ್ಟ್‌ನಲ್ಲಿ ತೆರೆಗೆ ಅಪ್ಪಳಿಸಲಿದೆ ಲಕ್ಕಿ ಮ್ಯಾನ್‌: ಅಪ್ಪು ಬಾಸ್‌ ನೋಡಲು ಫ್ಯಾನ್ಸ್‌ ಕಾತುರ

ಡಾರ್ಲಿಂಗ್‌ ಕೃಷ್ಣ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ದಿಲ್‌ ಪಸಂದ್‌, ಲವ್‌ ಬರ್ಡ್ಸ್‌, ಶುಗರ್‌ ಫ್ಯಾಕ್ಟರಿ, ಲಕ್ಕಿ ಮ್ಯಾನ್‌, ಮಿಸ್ಟರ್‌ ಬ್ಯಾಚುಲರ್‌ ಚಿತ್ರಗಳು ಕೈಯಲ್ಲಿದೆ. ತಮ್ಮ ಹುಟ್ಟುಹಬ್ಬದಂದು ನಿರ್ದೇಶಕ ಶಶಾಂಕ್‌ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಕೃಷ್ಣ ನಾಯಕನಾಗಿರುವ ಈ ಚಿತ್ರವನ್ನು ಶಶಾಂಕ್‌ ನಿರ್ದೇಶಿಸುವ ಜತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ | Lucky Man Movie | ಆಗಸ್ಟ್‌ನಲ್ಲಿ ತೆರೆಗೆ ಅಪ್ಪಳಿಸಲಿದೆ ಲಕ್ಕಿ ಮ್ಯಾನ್‌: ಅಪ್ಪು ಬಾಸ್‌ ನೋಡಲು ಫ್ಯಾನ್ಸ್‌ ಕಾತುರ

Exit mobile version