Site icon Vistara News

Lucky Man Movie | ಆಗಸ್ಟ್‌ನಲ್ಲಿ ತೆರೆಗೆ ಅಪ್ಪಳಿಸಲಿದೆ ಲಕ್ಕಿ ಮ್ಯಾನ್‌: ಅಪ್ಪು ಬಾಸ್‌ ನೋಡಲು ಫ್ಯಾನ್ಸ್‌ ಕಾತುರ

Lucky Man Movie

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ನಿಧನ ಹೊಂದುವುದಕ್ಕೂ ಮುಂಚೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆ ಪೈಕಿ ಜೇಮ್ಸ್‌ ಸಿನಿಮಾ ಈಗಾಗಲೇ ಬಿಡುಗಡೆಗೊಂಡಿದೆ. ಡಾರ್ಲಿಂಗ್‌ ಕೃಷ್ಣ ನಟನೆಯ ಲಕ್ಕಿ ಮ್ಯಾನ್‌ ಸಿನಿಮಾದಲ್ಲಿ (Lucky Man Movie) ಪುನೀತ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಸಿನಿಮಾ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ಚಿತ್ರ ಆಗಸ್ಟ್‌ನಲ್ಲಿ ತೆರೆಗೆ ಬರುತ್ತಿದೆ ಎಂದು ಅಧಿಕೃತ ಘೋಷಣೆ ಮಾಡಿದೆ.

ಅಪ್ಪು ಬಾಸ್‌ ಧ್ವನಿಯಲ್ಲಿ ಹಾಡಿರುವ ಹಾಡು ಹಾಗೂ ಡ್ಯಾನ್ಸ್‌ ಕಿಂಗ್‌ ಪ್ರಭುದೇವ ಜತೆ ಅಪ್ಪು ಡ್ಯಾನ್ಸ್‌ ಚಮತ್ಕಾರ ನೋಡಲು ಎಲ್ಲ ಸೆಟ್‌ ಆಗಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿಕೊಂಡಿತ್ತು.

ಇದನ್ನೂ ಓದಿ | James Movie | ಪವರ್‌ ಸ್ಟಾರ್‌ ಪುನೀತ್‌ ಧ್ವನಿಯಲ್ಲಿ ಜೇಮ್ಸ್: ಜುಲೈ 17ಕ್ಕೆ ಸುವರ್ಣ ವರ್ಲ್ಡ್‌ ಪ್ರೀಮಿಯರ್‌

ನಾಗೇಂದ್ರ ಪ್ರಸಾದ್‌ ನಿರ್ದೇಶಿಸಿದ್ದಾರೆ. ಪಿ ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್‌. ಸುಂದರ್‌ ಕಾಮರಾಜ್ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ರೋಶನಿ ಪ್ರಕಾಶ್, ಪುನೀತ್ ರಾಜ್ ಕುಮಾರ್ ಮತ್ತು ಪ್ರಭುದೇವ ನಟಿಸಿರುವ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದೆ.

ಡಾರ್ಲಿಂಗ್‌ ಕೃಷ್ಣ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ದಿಲ್‌ ಪಸಂದ್‌, ಲವ್‌ ಬರ್ಡ್ಸ್‌, ಶುಗರ್‌ ಫ್ಯಾಕ್ಟರಿ, ಲಕ್ಕಿ ಮ್ಯಾನ್‌, ಮಿಸ್ಟರ್‌ ಬ್ಯಾಚುಲರ್‌ ಚಿತ್ರಗಳು ಕೈಯಲ್ಲಿದೆ. ತಮ್ಮ ಹುಟ್ಟುಹಬ್ಬದಂದು ನಿರ್ದೇಶಕ ಶಶಾಂಕ್‌ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಕೃಷ್ಣ ನಾಯಕನಾಗಿರುವ ಈ ಚಿತ್ರವನ್ನು ಶಶಾಂಕ್‌ ನಿರ್ದೇಶಿಸುವ ಜತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ | ಲಾಲ್​ಬಾಗ್​ ಪುಷ್ಪ ಪ್ರದರ್ಶನ | ಪುನೀತ್​ ರಾಜ​ಕುಮಾರ್ ಸ್ಮರಣೆಗೆ ಸರ್ಕಾರದ ಸಿದ್ಧತೆ

Exit mobile version