Site icon Vistara News

Actor Navdeep: ಡ್ರಗ್ಸ್‌ ಕೇಸ್‌; ಟಾಲಿವುಡ್ ನಟ ನವದೀಪ್‌ಗೆ ಇ.ಡಿ ನೋಟಿಸ್!

Actor Navdeep

ಬೆಂಗಳೂರು: ಡ್ರಗ್ಸ್‌ ಕೇಸ್‌ ಸಂಬಂಧಿಸಿದಂತೆ ಟಾಲಿವುಡ್ ನಟ ನವದೀಪ್ (Actor Navdeep) ಅವರಿಗೆ ಜಾರಿ ನಿರ್ದೇಶನಾಲಯ ಅ. 6ರಂದು ಸಮನ್ಸ್ ಜಾರಿ ಮಾಡಿದ್ದು, ಅಕ್ಟೋಬರ್ 10 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ತೆಲಂಗಾಣ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ನಂತರ ನವದೀಪ್ ಅವರಿಗೆ ನೋಟಿಸ್ ನೀಡಲಾಗಿದೆ.

ಇ.ಡಿ ಮೂಲಗಳ ಪ್ರಕಾರ ʻʻಡ್ರಗ್ ಟ್ರಾಫಿಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ನಟ ನವದೀಪ್‌ ಅವರಿಗೆ ಸಮನ್ಸ್ ನೀಡಿದ್ದೇವೆ. ನವದೀಪ್ ಅವರಿಗೆ ಎರಡು ಬಾರಿ ಸಮನ್ಸ್ ನೀಡಲಾಗಿದೆ, ಆದರೆ ಅವರು ನಮ್ಮ ಮುಂದೆ ಹಾಜರಾಗಲು ವಿಫಲರಾಗಿದ್ದಾರೆʼʼಎಂದು ಹೇಳಿಕೆ ನೀಡಿದೆ.

ಇದಕ್ಕೂ ಮುನ್ನ ಇ.ಡಿ ಟಾಲಿವುಡ್ ನಟರಾದ ನವದೀಪ್, ರಾಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿತೇಜಾ, ಚಾರ್ಮಿ ಕೌರ್, ಮುಮೈತ್ ಖಾನ್, ತನಿಶ್, ನಂದು ಮತ್ತು ತರುಣ್ ಅವರನ್ನು ವಿಚಾರಣೆ ನಡೆಸಿತ್ತು. ನವದೀಪ್ ಅವರು ಮಾದಾಪುರ ಡ್ರಗ್​ ಕೇಸ್​ನಲ್ಲಿ 37ನೇ ಆರೋಪಿ ಆಗಿದ್ದರು. ಅವರ ವಿಚಾರಣೆಗೆ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ವಿಚಾರಣೆಗೂ ಒಳಗಾಗಿರುವ ನವದೀಪ್‍ ತಲೆಮರೆಸಿಕೊಂಡಿದ್ದರು. ಜತೆಗೆ ತೆಲಂಗಾಣ ಹೈಕೋರ್ಟಿಗೆ (High Court) ನಿರೀಕ್ಷಣಾ ಜಾಮೀನಿಗೆ ಅರ್ಜಿ ಕೂಡ ಸಲ್ಲಿದ್ದರು. ಬಂಧಿತರಲ್ಲಿ ಮಾಜಿ ಸಂಸದ ಡಿ ವಿಠಲ್ ರಾವ್ ಅವರ ಪುತ್ರ ದೇವರಕೊಂಡ ಸುರೇಶ್ ರಾವ್, ಚಲನಚಿತ್ರ ನಿರ್ದೇಶಕ ಅನುಗು ಸುಶಾಂತ್ ರೆಡ್ಡಿ ಮತ್ತು ನೈಜೀರಿಯಾದ ಪೆಡ್ಲರ್‌ಗಳಾದ ಅಮೋಬಿ ಚುಕ್ವುಡಿ ಮೂನಾಗೊಲು (Chukwudi Muonagolu), ಇಗ್ಬಾವ್ರೆ ಮೈಕೆಲ್ ಮತ್ತು ಥಾಮಸ್ ಅನಗಾ (Thomas Anaga Kalu) ಕಾಲು ಕೂಡ ಇದಿದ್ದರು.

ಇದನ್ನೂ ಓದಿ: Actor Navdeep: ಡ್ರಗ್ಸ್ ಕೇಸ್‌ನಲ್ಲಿ ಜನಪ್ರಿಯ ಟಾಲಿವುಡ್ ನಟ ನವದೀಪ್‌; ಪೊಲೀಸರಿಂದ ಶೋಧ!

ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ತೆಲಂಗಾಣ ಉಚ್ಚ ನ್ಯಾಯಾಲಯವು ಬಲವಂತವಾಗಿ ನವದೀಪ್ ಅವರನ್ನು ಬಂಧಿಸುವಂತಿಲ್ಲ ಎಂದು ಆದೇಶ ನೀಡಿದೆ. ಜತೆಗೆ ಅವರನ್ನು ವಿಚಾರಣೆಗೆ ಕರೆಯಬಹುದು ಮತ್ತು ಪರೀಕ್ಷೆಗೂ ಒಳಪಡಿಸಬಹುದು. ಆದರೆ, ಈ ನೆಪದಲ್ಲಿ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿದೆ.

ಕೇವಲ ತೆಲುಗು ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಮಲಯಾಳಂ ಚಿತ್ರರಂಗದಲ್ಲೂ ಈ ರೀತಿಯ ಪ್ರಕರಣ ಹೆಚ್ಚಾಗುತ್ತಿದೆ.ನವದೀಪ್ ಅವರು 2004ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಧಾರಾವಾಹಿಗಳಲ್ಲೂ ಅವರು ಅಭಿನಯಿಸಿದ್ದಾರೆ. ಆ ಬಳಿಕ ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದರು.

Exit mobile version