Site icon Vistara News

Rocketry: The Nambi Effect | ಮಾಧವನ್ ನಿರ್ದೇಶಿಸಿ, ನಟಿಸಿರುವ ರಾಕೆಟ್ರಿ ಸಿನಿಮಾ ವೀಕ್ಷಿಸಿದ ಸಂಸದರು

Rocketry The Nambi Effect

ಬೆಂಗಳೂರು: ಭಾರತದ ಹೆಮ್ಮೆಯ ವಿಜ್ಞಾನಿ ನಂಬಿ ನಾರಾಯಣನ್‌ ಅವರ ಜೀವನಾಧಾರಿತ ‘ರಾಕೆಟ್ರಿ’ ಸಿನಿಮಾ (Rocketry: The Nambi Effect) ಜು.1ರಂದು ಬಿಡುಗಡೆಗೊಂಡಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ನಟ ಮಾಧವನ್ ಸಂಸದರಿಗಾಗಿ ಈ ಸಿನಿಮಾವನ್ನು ಸಂಸತ್ತಿನಲ್ಲಿ ಪ್ರದರ್ಶಿಸಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಹಿರಿಯ ಮುಖಂಡರು ಸಂಸದರ ಜತೆ ‘ರಾಕೆಟ್ರಿ’ ಸಿನಿಮಾ ವೀಕ್ಷಿಸಿದ್ದಾರೆ. ರಾಕೆಟ್‌ ಉಡಾವಣೆಗೆ ಬಳಸುವ ಮಹತ್ವದ ವಿಕಾಸ್‌ ಎಂಜಿನ್‌ ತಯಾರಿಸಿದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್‌ ಅವರು ಸಹ ವಿಶೇಷ ಪ್ರದರ್ಶನದ ವೇಳೆ ಹಿರಿಯ ನಾಯಕರು ಹಾಗೂ ಸಂಸದರ ಜತೆ ಪಾಲ್ಗೊಂಡಿದ್ದರು. ಸಿನಿಮಾ ವೀಕ್ಷಣೆ ಬಳಿಕ ನಂಬಿ ನಾರಾಯಣನ್ ಮತ್ತು ಮಾಧವನ್‌ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ | Rocketry: The Nambi Effect | ಮಾಧವನ್ ನಿರ್ದೇಶಿಸಿ ನಟಿಸಿರುವ ʼರಾಕೆಟ್ರಿʼಯ 7 ದಿನದ ಕಲೆಕ್ಷನ್‌?

ಆರ್‌ ಮಾಧವನ್‌ ನಿರ್ದೇಶಿಸಿ ನಟಿಸಿರುವ “ರಾಕೆಟ್ರಿ ದಿ ನಂಬಿ ಎಫೆಕ್ಟ್ʼ 1 ಜುಲೈ 2022ರಂದು ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಪ್ರಪಂಚದಾದ್ಯಂತ ಆರು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್‌ ಅವರು ಸುಳ್ಳು ಆಪಾದನೆ ಎದುರಿಸಿ 1994ರಿಂದ 1998ರವರೆಗೆ ಅನುಭವಸಿದ ಹಿಂಸೆ, ಕೇರಳ ಪೊಲೀಸರು ನೀಡಿದ ಕಿರುಕುಳ ಮತ್ತು ಕೊನೆಗೂ ಅವರು ದೋಷಮುಕ್ತಿಯಾದ ಕಥಾವಸ್ತುವನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ.

ರಾಕೆಟ್ರಿಯು ಫಿಲ್ಲಿಸ್ ಲೋಗನ್, ವಿನ್ಸೆಂಟ್ ರಿಯೊಟ್ಟಾ ಹೀಗೆ ಅಂತಾರಾಷ್ಟ್ರೀಯ ಮಟ್ಟದ ನಟರನ್ನು ಒಳಗೊಂಡಿದೆ. ರಾನ್ ಡೊನಾಚಿ, ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸೂರ್ಯ ವಿಶೇಷ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಹಿಂದೆ ಮಾಧವನ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರನ್ನು ಭೇಟಿ ಮಾಡಿದ್ದರು.

ಇದನ್ನೂ ಓದಿ | Swimming | ನಟ ಮಾಧವನ್​ ಹೆಮ್ಮೆಪಡುವಂತೆ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ ಪುತ್ರ ವೇದಾಂತ್​

Exit mobile version