ಬೆಂಗಳೂರು: ಡೀಪ್‌ಫೇಕ್ ವಿಡಿಯೊ (Deepfake Technology) ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ನಕಲಿ ವಿಡಿಯೊ ವೈರಲ್ ಆದ ಬಳಿಕ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅಮಿತಾಭ್ ಬಚ್ಚನ್ ಮಾತ್ರವಲ್ಲ, ರಶ್ಮಿಕಾ ಮಂದಣ್ಣ ಅವರ ಹಲವಾರು ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಟಿಯನ್ನು ಡೀಪ್‌ಫೇಕ್ ವಿಚಾರವಾಗಿ ಬೆಂಬಲಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಪ್ರಕರಣ ಬಗ್ಗೆ ಸೆನ್ಸೇಷನಲ್ ತಾರೆ ಮಾಧವಿ ಲತಾ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ರಶ್ಮಿಕಾ ಕಾರ್ಯಕ್ರಮಗಳಲ್ಲಿ ಧರಿಸುವಷ್ಟು ಕೆಟ್ಟದಾಗಿ ವಿಡಿಯೊ ಇಲ್ಲ. ವಿಡಿಯೊದಲ್ಲಿ ಸ್ತನ ಗಾತ್ರ ಮಾತ್ರ ದೊಡ್ಡದಾಗಿದೆ ಎಂದು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.
ಆಂಗ್ಲೋ ಇಂಡಿಯನ್ ಯುವತಿ ಝರಾ ಪಟೇಲ್ ಅವರ ಹಾಟ್ ವಿಡಿಯೊಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗಿತ್ತು. ಅಕ್ಟೋಬರ್ 9ರಂದು ಲಿಫ್ಟ್ ಏರುತ್ತಿರುವ ವಿಡಿಯೊವನ್ನು ಝರಾ ಪೋಸ್ಟ್ ಮಾಡಿದ್ದರು. ಮೃಣಾಲ್ ಠಾಕೂರ್, ನಾಗ ಚೈತನ್ಯ ಮತ್ತು ಗಾಯಕಿ ಚಿನ್ಮಯಿ ಶ್ರೀಪಾದರಂತಹ ಅನೇಕ ಸೆಲೆಬ್ರಿಟಿಗಳು ಈ ಕೃತಕ ಬುದ್ಧಿಮತ್ತೆಯ ದುರುಪಯೋಗದ ಬಗ್ಗೆ ಮಾತನಾಡಲು ಮುಂದೆ ಬಂದಿದ್ದರು. ಆದರೀಗ ಮಾಧವಿ ಲತಾ ರಶ್ಮಿಕಾ ಇರುವ ಬೋಲ್ಡ್ ಫೋಟೊಗಳನ್ನು ವಿಡಿಯೊ ರೀತಿ ಹಂಚಿಕೊಂಡು ವಾಯ್ಸ್ ಕೊಟ್ಟಿದ್ದಾರೆ.
ʻʻವೈರಲ್ ಆಗಿರುವ ವಿಡಿಯೊ ಅಷ್ಟೇನೂ ಅಸಭ್ಯವಾಗಿಲ್ಲ. ಕಾರ್ಯಕ್ರಮಗಳಲ್ಲಿ ರಶ್ಮಿಕಾ ಧರಿಸುವ ಡ್ರೆಸ್‌ಗಳು ಇದಕ್ಕಿಂತಲೂ ಬೋಲ್ಡ್ ಆಗಿರುತ್ತದೆ. ವ್ಯತ್ಯಾಸ ಏನು ಅಂದರೆ ರಶ್ಮಿಕಾ ಸ್ತನ ಚಿಕ್ಕದು. ಆ ಹುಡುಗಿಯ ಸ್ತನ ದೊಡ್ಡದು ಅಷ್ಟೇ ವ್ಯತ್ಯಾಸ ಎಂದಿದ್ದಾರೆ. ಅಂದಹಾಗೆ ಅದು ಸ್ವಿಮ್ ಸೂಟ್. ಸ್ವಿಮ್ ಸೂಟ್ಸ್ ಅದೇ ರೀತಿ ಇರುತ್ತದೆ. ಸ್ಟಾರ್ ಹೀರೊಯಿನ್ಸ್ ಇಷ್ಯೂ ಬಗ್ಗೆ ಮಾತನಾಡಿದಾಗ ಆ ವಿಚಾರ ಸಮಾಜದಲ್ಲಿ ದೊಡ್ಡದಾಗಿಬಿಡುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನೀಡಿದರೆ ಉತ್ತಮ. ಮೈತುಂಬಾ ಬಟ್ಟೆ ಹಾಕಿಕೊಳ್ಳುವಂತಹ ನಾಯಕಿಯರೇನೂ ಅಲ್ಲ ಅವರುʼʼ. ಎಂದು ನಟಿ ಮಾಧವಿ ಲತಾ ಹೇಳಿದ್ದಾರೆ.
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ನೆರವಿಗೆ ಧಾವಿಸಿದ ವಿಜಯ್ ದೇವರಕೊಂಡ, ನಾಗಚೈತನ್ಯ, ಮೃಣಾಲ್ ಠಾಕೂರ್
ನಟಿ ಮಾಧವಿ ಲತಾ ಹಂಚಿಕೊಂಡಿರುವ ವಿಡಿಯೊ
ಆದರೆ ನೆಟ್ಟಿಗರು ಮಾಧವಿ ಲತಾ ಅವರಿಗೆ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಹಿಳೆಯಾಗಿ ಈ ರೀತಿ ಹೇಳುವುದು ತಪ್ಪು ಎಂದು ಕಮೆಂಟ್ ಮಾಡಿದ್ದಾರೆ. ಇಂದು ರಶ್ಮಿಕಾಗೆ ಆದ ಸಮಸ್ಯೆ ನಾಳೆ ಇನ್ನೊಬ್ಬರಿಗೆ ಆಗುತ್ತದೆ. ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.