ಬೆಂಗಳೂರು: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರ ತಾಯಿ ಸ್ನೇಹಲತಾ ದೀಕ್ಷಿತ್ (Snehalata Dixit) (Snehalata Dixit)ನಿಧನರಾಗಿದ್ದಾರೆ. ಮಾರ್ಚ್ 12ರಂದು ತಮ್ಮ ಮುಂಬೈ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಕ್ರಿಯೆ ಮಧ್ಯಾಹ್ನ 3 ಗಂಟೆಗೆ ವರ್ಲಿಯಲ್ಲಿರುವ ಸ್ಮಶಾನದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ʻʻನಮ್ಮ ಪ್ರೀತಿಯ ಆಯಿ, ಸ್ನೇಹಲತಾ ದೀಕ್ಷಿತ್ ಅವರು ಮಾರ್ಚ್ 12ರಂದು ಬೆಳಗ್ಗೆ ನಿಧನರಾಗಿದ್ದಾರೆ ʼʼಎಂದು ಮಾಧುರಿ ದೀಕ್ಷಿತ್ ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷ, ತನ್ನ ತಾಯಿಯ 90ನೇ ವರ್ಷದ ಹುಟ್ಟುಹಬ್ಬದಂದು, ಮಾಧುರಿ ದೀಕ್ಷಿತ್ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ʻʻತಾಯಿ ಮಗಳ ಬಾಂಧವ್ಯ ಸ್ನೇಹಿತರಂತೆ. ನೀವು ನನಗಾಗಿ ಎಲ್ಲವನ್ನೂ ಮಾಡಿದ್ದೀರಿ. ನೀವು ಕಲಿಸಿದ ಪಾಠಗಳು ನನಗೆ ದೊಡ್ಡ ಕೊಡುಗೆಯಾಗಿದೆ. ನಾನು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆʼʼಎಂದು ತಾಯಿಯ ಜತೆಗಿರುವ ಅಪರೂಪದ ಫೋಟವನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: Sumangala s mummigatti : ಹಿರಿಯ ಲೇಖಕಿ ಸುಮಂಗಳಾ ಎಸ್ ಮುಮ್ಮಿಗಟ್ಟಿ ನಿಧನ
2013ರಲ್ಲಿ, ಮಾಧುರಿ ಅವರ ‘ಗುಲಾಬ್ ಗ್ಯಾಂಗ್’ ಚಿತ್ರದ ಹಾಡಿನ ರೆಕಾರ್ಡ್‌ಗಾಗಿ ಮಗಳೊಂದಿಗೆ ಬಂದಿದ್ದರು. ಚಿತ್ರನಿರ್ಮಾಪಕ ಅನುಭವ್ ಸಿನ್ಹಾ ಈ ಬಗ್ಗೆ ಅನುಭವ ಹಂಚಿಕೊಂಡು ʻʻನಾವು ಚಿತ್ರದಲ್ಲಿ ಹಾಡೊಂದನ್ನು ರೆಕಾರ್ಡ್ ಮಾಡಲು ಮಾಧುರಿಯನ್ನು ಸಂಪರ್ಕಿಸಿದಾಗ, ಅವರು ಅದನ್ನು ಮಾಡಲು ಸಂತೋಷದಿಂದ ಒಪ್ಪಿಕೊಂಡರು. ತನ್ನ ತಾಯಿಯೊಂದಿಗೆ ಬಂದಿದ್ದರು. ಅವರ ತಾಯಿಯೂ ಕೂಡ ಒಳ್ಳೆಯ ಗಾಯಕಿʼʼಎಂದಿದ್ದರು.