Site icon Vistara News

Madhuri Dixit: ತಾಯಿ ಕುರಿತು ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಮಾಧುರಿ ದೀಕ್ಷಿತ್

Madhuri Dixit pens emotional note for mom Snehalata Dixit after death

ಬೆಂಗಳೂರು: ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರ ತಾಯಿ ಸ್ನೇಹಲತಾ ದೀಕ್ಷಿತ್ (Snehalata Dixit) (Snehalata Dixit)ಮಾರ್ಚ್‌ 12ರಂದು ನಿಧನರಾಗಿದ್ದರು. ಇದೀಗ ತಾಯಿಯ ಕುರಿತು ನಟಿ ಭಾವನಾತ್ಮಕ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. ತಾಯಿ ಜತೆಗಿನ ಹಳೆಯ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.

ಫೋಟೊದಲ್ಲಿ ಮಾಧುರಿ ಅವರ ತಾಯಿಯೊಂದಿಗೆ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾಧುರಿ ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, “ ಬೆಳಗ್ಗೆ ಎದ್ದ ಕೂಡಲೇ ಅಮ್ಮನ ಕೋಣೆ ನೋಡಿದೆ. ಖಾಲಿಯಾದಂತೆ ಅನುಭವ. ಅವಳು ನಮಗೆ ಜೀವನ ಹೇಗೆ ಎಂಬುದು ಕಲಿಸಿಕೊಟ್ಟಳು. ಎಷ್ಟೋ ಜನರಿಗೆ ಕೊಟ್ಟಳು. ನಾವು ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ನಮ್ಮ ನೆನಪುಗಳಲ್ಲಿ ಸದಾ ಇರುತ್ತಾಳೆ. ಓಂ ಶಾಂತಿ ಓಂ” ಎಂದು ಬರೆದುಕೊಂಡಿದ್ದಾರೆ. ನಟಿ ಪೋಸ್ಟ್ ಮಾಡಿದ ಕೂಡಲೇ, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಮೆಂಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Madhuri Dixit: ನಟಿ ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್ ನಿಧನ

ಮಾರ್ಚ್ 12ರಂದು ತಮ್ಮ ಮುಂಬೈ ನಿವಾಸದಲ್ಲಿ ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್ ಕೊನೆಯುಸಿರೆಳೆದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಕಳೆದ ವರ್ಷ, ತನ್ನ ತಾಯಿಯ 90ನೇ ವರ್ಷದ ಹುಟ್ಟುಹಬ್ಬದಂದು, ಮಾಧುರಿ ದೀಕ್ಷಿತ್ ಸೋಷಿಯಲ್‌ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದರು.

Exit mobile version