ಬೆಂಗಳೂರು: ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ (Madhuri Dixit) ಪ್ರತಿ ಬಾರಿ ಒಟ್ಟಿಗೆ ಕಾಣಿಸಿಕೊಂಡಾಗ ಒಂದಲ್ಲ ಒಂದು ಗಾಸಿಪ್ಗಳು ವೈರಲ್ ಆಗುತ್ತಲೇ ಇರುತ್ತದೆ. ʻತೇಜಾಬ್ʼ ʻಬೀಟಾ ಟು ಖೇಲ್ʼ ಮತ್ತು ʻಪರಿಂದಾʼವರಿಗಿನ ಸಿನಿಮಾಗಳಲ್ಲಿ ಬಾಲಿವುಡ್ನ ಹಿಟ್ ಜೋಡಿಗಳಲ್ಲಿ ಒಂದು ಎಂದು ಪದೇಪದೆ ಸಾಬೀತುಪಡಿಸಿದ್ದಾರೆ. ಆನ್-ಸ್ಕ್ರೀನ್ ಕೆಮಿಸ್ಟ್ರಿ ಇದಾದರೆ, ಈ ಜೋಡಿ ನಿಜ ಜೀವನದಲ್ಲಿ ಒಂದಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದುಂಟು. ಈ ಬಗ್ಗೆ ಮಾಧುರಿ ಸಂದರ್ಶನವೊಂದರಲ್ಲಿ ʻʻತಾನು ಅನಿಲ್ನನ್ನು ಮದುವೆಯಾಗುವುದಿಲ್ಲ. ಅವರು ತುಂಬಾ ಸೂಕ್ಷ್ಮ. ನನಗೆ ಕೂಲ್ ಆಗಿರುವ ಗಂಡ ಬೇಕುʼʼ ಎಂದು ಹೇಳಿಕೆ ನೀಡಿದ್ದರು. ಇದೀಗ ಅನಿಲ್ ಅವರು ಸುನಿತಾ ಕಪೂರ್ರನ್ನು ಮದುವೆಯಾಗಿದ್ದರೆ, ಮಾಧುರಿ ಡಾ. ಶ್ರೀರಾಮ್ ನೆನೆ ಅವರನ್ನು ಮದುವೆಯಾಗಿದ್ದಾರೆ.
1989ರ ಸಂದರ್ಶನದಲ್ಲಿ, ಮಾಧುರಿಗೆ ಅನಿಲ್ ಅವರನ್ನು ಮದುವೆಯಾಗಲು ಇಷ್ಟವಿದೆಯೇ ಎಂಬ ಪ್ರಶ್ನೆ ಕೇಳಲಾಗಿತ್ತು. ನಟಿ ಈ ಬಗ್ಗೆ ಮಾತನಾಡಿ “ಇಲ್ಲ! ನಾನು ಅವರನ್ನು ಮದುವೆಯಾಗುವುದಿಲ್ಲ. ಅವರು ತುಂಬಾ ಸೂಕ್ಷ್ಮ ವ್ಯಕ್ತಿ. ನನಗೆ ಮದುವೆಯಾಗ ಬೇಕು ಎಂದವರು ಕೂಲ್ ಆಗಿರಬೇಕು. ಅನಿಲ್ ಅವರ ಜತೆ ತುಂಬಾ ಸಿನಿಮಾ ಮಾಡಿದ್ದೇನೆ. ಹಾಗಾಗಿ ಅವರ ಜತೆ ಕಂಫರ್ಟಬಲ್ ಆಗಿದ್ದೇನೆʼʼಎಂದಿದ್ದರು.
ಅನಿಲ್ ಕಪೂರ್ ಸುನೀತಾ ಅವರನ್ನು ಮದುವೆಯಾಗಿದ್ದಾರೆ. ಸೋನಮ್ ಕಪೂರ್ , ರಿಯಾ ಕಪೂರ್ ಮತ್ತು ಮಗ ಹರ್ಷವರ್ಧನ್ ಕಪೂರ್ ಮಕ್ಕಳಿದ್ದಾರೆ. ಆ ಕಾಲದಲ್ಲಿ ಇದರ ಜತೆ ಮಾಧುರಿ ಅವರು ಸಂಜಯ್ ದತ್ ಜತೆ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿತ್ತು. ಬಳಿಕ ನಟಿ ಅಮೆರಿಕ ಮೂಲದ ಶ್ರೀರಾಮ್ ನೆನೆ ಅವರನ್ನು ಭೇಟಿಯಾಗಿ, 1999ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಇದನ್ನೂ ಓದಿ: Madhuri Dixit Birthday: ʼDhak-Dhak Girlʼ ಮಾಧುರಿ ದೀಕ್ಷಿತ್ ಬ್ಲಾಕ್ಬಾಸ್ಟರ್ ಮೂವಿಗಳ ವಿವರ ಇಲ್ಲಿದೆ
ಮಾಧುರಿ ದೀಕ್ಷಿತ್ ಅವರು ವಿವಾಹದ ಬಳಿಕ ಕೆಲಕಾಲ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದರು. 2007ರಲ್ಲಿ ʻಆಜಾ ನಾಚ್ಲೆʼ ಸಿನಿಮಾ ಮೂಲಕ ಮತ್ತೆ ಸಿನಿರಂಗಕ್ಕೆ ಕಮ್ಬ್ಯಾಕ್ ಆದರು. 2018ರಲ್ಲಿ ಮರಾಠಿ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದರು. ಅವರ ಕೊನೆಯ ಪ್ರಾಜೆಕ್ಟ್ 2022ರ ʻಮಜಾ ಮಾʼ ಸಿನಿಮಾ.