Site icon Vistara News

Tamannaah Bhatia: ʻಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತೇನೆʻ ಎಂದ ವಿಜಯ್ ವರ್ಮಾ!

Tamannaah Bhatia and Vijay Varma

ಬೆಂಗಳೂರು: ತಮನ್ನಾ ಭಾಟಿಯಾ (Tamannaah Bhatia) ಮತ್ತು ವಿಜಯ್ ವರ್ಮಾ ಪ್ರೀತಿಯ ಗುಟ್ಟು ಈಗಾಗಲೇ ರಟ್ಟಾಗಿದೆ. ಲಸ್ಟ್‌ ಸ್ಟೋರೀಸ್‌ 2 ಸಿನಿಮಾದ ಪ್ರಚಾರದ ವೇಳೆ ಇವರಿಬ್ಬರ ಪ್ರಣಯದ ಸ್ಟೋರಿ ಬಹುತೇಕ ರಿವೀಲ್‌ ಆಗಿತ್ತು. ಇತ್ತೀಚೆಗಷ್ಟೆ ತಮನ್ನಾ ತನ್ನ ಬಾಯ್ ಫ್ರೆಂಡ್ ವಿಜಯ್ ವರ್ಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದರು. ಇವರಿಬ್ಬರು ಒಟ್ಟಾಗಿ ಇರುವುದರ ಬೆನ್ನಲ್ಲೇ ಅನೇಕರು ಇದು ʻಪಬ್ಲಿಸಿಟಿ ಸ್ಟಂಟ್‌ʼ ಎಂದು ಜೋಡಿಯ ಕಾಲೆಳೆಯಲು ಶುರು ಮಾಡಿದ್ದರು. ಸಿನಿಮಾ ಪ್ರೇಕ್ಷಕರ ಗಮನ ಸೆಳೆಯಬೇಕು ಎಂಬ ಕಾರಣಕ್ಕೆ ಸಿನಿಮಾದಲ್ಲಿ ನಟಿಸಿದ ಅನೇಕರು ನಿಜ ಜೀವನದಲ್ಲೂ ಒಟ್ಟಾಗಿ ಸುತ್ತಾಡಿದ ಉದಾಹರಣೆ ಇದೆ. ಇದೆಲ್ಲವೂ ಸಿನಿಮಾ ರಿಲೀಸ್ ಆಗುವವರೆಗೆ ಮಾತ್ರ ಇರುತ್ತದೆ. ಆ ಬಳಿಕ ಸೈಲೆಂಟ್ ಆಗುತ್ತಾರೆ. ವಿಜಯ್ ವರ್ಮಾ ಹಾಗೂ ತಮನ್ನಾ ಕೂಡ ಇದೇ ಸಾಲಿಗೆ ಸೇರುತ್ತಾರೆ ಎಂದು ಅನೇಕರು ಮಾತನಾಡಿಕೊಂಡಿದ್ದಿದೆ. ಇದಕ್ಕೆ ವಿಜಯ್ ವರ್ಮಾ (vijay verma) ಉತ್ತರ ನೀಡಿದ್ದಾರೆ.

ಮಾಧ್ಯಮದ ಜತೆ ಮಾತನಾಡಿದ ವಿಜಯ್ ವರ್ಮಾ, ‘ನಾವು ಒಬ್ಬರಿಗೊಬ್ಬರು ಡೇಟಿಂಗ್ ಮಾಡುತ್ತಿದ್ದೇವೆ ಎಂಬುದು ಈಗ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಅವಳೊಂದಿಗೆ ತುಂಬಾ ಸಂತೋಷದಿಂದ ಇದ್ದೇನೆ. ಹಾಗೂ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತೇನೆ’ ಎಂದು ಹೇಳಿದರು. ‘ ನನ್ನ ವಿಲನ್ ಯುಗ ಮುಗಿದಿದೆ, ರೊಮ್ಯಾಂಟಿಕ್ ಯುಗ ಪ್ರಾರಂಭವಾಗಿದೆ’ ಎಂದು ವಿಜಯ್ ಮರ್ಮಾ ಹೇಳಿದರು.

ತಮನ್ನಾ (tamanna) ಕೂಡ ಈ ಬಗ್ಗೆ ಮಾತನಾಡಿ ʻʻಅವರ ಜತೆ ಇದ್ದರೆ ನಾನು ಅತ್ಯಂತ ಸಂತೋಷವಾಗಿರುತ್ತೇನೆ. ಅವರು ಒಳ್ಳೆಯ ಮನುಷ್ಯ. ನನ್ನ ಇಕ್ವಲ್‌ ಪಾರ್ಟ್‌ನರ್. ಯಾರೋ ಒಬ್ಬರು ನಿಮ್ಮ ಸಹನಟರಾಗಿದ್ದ ಮಾತ್ರಕ್ಕೆ ಅವರೊಡನೆ ಆಕರ್ಷಿತರಾಗಲು ಸಾಧ್ಯವಿಲ್ಲ. ಏಕೆಂದರೆ ನಾನು ಈಗಾಗಲೇ ಹಲವಾರು ನಟರೊಡನೆ ನಟಿಸಿದ್ದೇನೆ. ಯಾರ ಕಡೆಗೂ ನಾನು ಆಕರ್ಷಿತಳಾಗಿಲ್ಲ. ಯಾರ ಬಗ್ಗೆಯಾದರೂ ನೀವು ನಿಜಕ್ಕೂ ಮನಸೋತಿರೆಂದರೆ, ಭಾವನೆಗಳು ಹುಟ್ಟಿದವೆಂದರೆ ಅದು ಬಹಳ ವೈಯಕ್ತಿಕವಾಗಿದೆ. ಯಶಸ್ವಿ ವ್ಯಕ್ತಿಯೋ ಎಂಬುದೆಲ್ಲವೂ ಗಣನೆಗೆ ಬರುವುದೇ ಇಲ್ಲ’ ಎಂದಿದ್ದಾರೆ. ಲಸ್ಟ್ ಸ್ಟೋರೀಸ್ 2 ಸೆಟ್‌ಗಳಲ್ಲಿ ವಿಜಯ್‌ ವರ್ಮಾ ಜೊತೆ ಪ್ರೀತಿ ಶುರುವಾಯಿತಾ ಎಂದು ಕೇಳಿದ ಪ್ರಶ್ನೆಗೆ ತಮನ್ನಾ, ‘ಹೌದು’ ಎಂದು ಹೇಳಿದರು.

ಇದನ್ನೂ ಓದಿ: Tamanna Bhatia : ಮಾಜಿ ಪ್ರೇಮಿ ಜತೆ ಸೆಕ್ಸ್‌ ಮಾಡಿದ್ದು ಹೌದಾ ಅಲ್ಲವಾ? ವಿಜಯ್‌ ವರ್ಮಾಗೆ ತಮನ್ನಾ ಪ್ರಶ್ನೆ!

ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ತಮನ್ನಾ ಕಾಣಿಸಿಕೊಳ್ಳುತ್ತಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ಬರೆದು ನಿರ್ದೇಶಿಸಿದ ‘ಜೈಲರ್’ ಸಿನಿಮಾ ಇದೇ ಆಗಸ್ಟ್ 10ರಂದು ಬಿಡುಗಡೆಯಾಗಲಿದೆ. ʻಜೈಲರ್ ಮುತ್ತುವೇಲ್ ಪಾಂಡಿಯನ್ʼ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿದ್ದಾರೆ.

ಜಾಕಿ ಶ್ರಾಫ್, ಶಿವರಾಜ್‌ಕುಮಾರ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ಕೂಡ ‘ಜೈಲರ್‌’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲರ್ ಚಿತ್ರದಲ್ಲಿ ಜಾಫರ್ ಸಾದಿಕ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Exit mobile version