ಬೆಂಗಳೂರು: ರಾಜಮೌಳಿ (SS Rajamouli) ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬುದು ಗೊತ್ತಿರುವ ವಿಚಾರ. ಸದ್ಯಕ್ಕೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ರಾಜಮೌಳಿ ಅವರು ಚಿತ್ರಕ್ಕಾಗಿ ಪಾತ್ರವನ್ನು ಹುಡುಕಲಾರಂಭಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ರಾಜಮೌಳಿ ಇಂಡೋನೇಷಿಯಾದ ನಟಿ ಚೆಲ್ಸಿಯಾ ಎಲಿಜಿಬೆತ್ ಇಸ್ಲೇನ್ ಅವರನ್ನು ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಕೆಲ ದಿನಗಳ ಹಿಂದೆ ರಾಜಮೌಳಿ ನಟಿಯನ್ನು ಸ್ಕ್ರೀನ್ ಟೆಸ್ಟ್ ಕೂಡ ಮಾಡಿದ್ದರು ಎಂಬ ಮಾತು ಕೇಳಿ ಬಂದಿತ್ತು. ಚೆಲ್ಸ್ಲಿಯಾ ಇಸ್ಲೇನ್, ಅಮೆರಿಕದಲ್ಲಿ ಜನಿಸಿದ ಇಂಡೋನೇಷ್ಯಾ ಮೂಲದ ನಟಿ. ‘ಟೇಂಟಂಗಾ ಮೆಸಾ ಗಿಟು’ (Tetangga Masa Gitu) ಹೆಸರಿನ ಟಿವಿ ಸರಣಿ ಮೂಲಕ ಚೆಲ್ಸ್ಲಿಯಾ ಇಸ್ಲೇನ್ ಜನಪ್ರಿಯತೆ ಗಳಿಸಿದರು. ಈ ಧಾರಾವಾಹಿಯ ನಟನೆಗೆ ಹಲವು ಪ್ರಶಸ್ತಿಗಳನ್ನು ಸಹ ಇವರು ಪಡೆದಿದ್ದಾರೆ.
ಈ ಸುದ್ದಿ ಇನ್ನೂ ದೃಢಪಟ್ಟಿಲ್ಲವಾದರೂ, ಟಾಲಿವುಡ್‌ನಲ್ಲಿ ಸಖತ್ ವೈರಲ್ ಆಗಿದೆ. ‘ಆರ್ಆರ್ಆರ್’ ಸಿನಿಮಾದಲ್ಲಿ ವಿದೇಶಿ ನಟಿ ಒಲಿವಾ ಮೋರಿಸ್ ಅವರನ್ನು ಹಾಕಿಕೊಂಡಿದ್ದರು ರಾಜಮೌಳಿ.
ರಾಜಮೌಳಿ, ಕೆ.ಎಲ್. ನಾರಾಯಣ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಒಂದು ವಿಶಿಷ್ಟ ತಂಡವನ್ನು ರಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ರಾಜಮೌಳಿ -ಮಹೇಶ್ ಬಾಬು ಕಾಂಬಿನೇಷನ್ ಚಿತ್ರದಲ್ಲಿ ಚಿತ್ರೀಕರಣಕ್ಕೆ ಕಾಡಿನಲ್ಲಿ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಹೆಚ್ಚಾಗಿ ರಾಜಮೌಳಿ ಅರಣ್ಯದಲ್ಲೇ ಹೆಚ್ಚು ಚಿತ್ರೀಕರಣ ಮಾಡುತ್ತಾರೆ. ಇದರಿಂದಾಗಿ ಜನರಿಗೆ ಇನ್ನೂ ಕ್ರೇಜ್ ಹೆಚ್ಚಾಗಿದೆ.
ಇದನ್ನೂ ಓದಿ: SS Rajamouli: ರಾಜಮೌಳಿ ಹೊಸ ಸಿನಿಮಾ ಅನೌನ್ಸ್; ಬಯೋಪಿಕ್ ಮೂಲಕ ಕಮ್‌ಬ್ಯಾಕ್; ನಿರ್ದೇಶಕ ಮಾತ್ರ ಬೇರೆ!
ರಾಜಮೌಳಿ ಹೊಸ ಸಿನಿಮಾ ಅನೌನ್ಸ್
ಎಸ್‌ಎಸ್ ರಾಜಮೌಳಿ (SS Rajamouli) ಹೊಸ ಕಥೆಯೊಂದಿಗೆ ಮರಳಿದ್ದಾರೆ. ಈ ಬಾರಿ ʻಮೇಡ್ ಇನ್ ಇಂಡಿಯಾʼ ಬಯೋಪಿಕ್ ಸಿನಿಮಾ ಮೂಲಕ ಬರುತ್ತಿದ್ದಾರೆ. ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ನಿತಿನ್ ಕಕ್ಕರ್ ನಿರ್ದೇಶಿಸಲಿದ್ದಾರೆ. ಮರಾಠಿ, ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಹೀಗೆ ಆರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಅಂದಹಾಗೆ ಈ ಸಿನಿಮಾವನ್ನು ರಾಜಮೌಳಿ ಅವರು ನಿರ್ದೇಶನ ಮಾಡುತ್ತಿಲ್ಲ. ಈ ಸಿನಿಮಾವನ್ನು ನಿತಿನ್ ಕಕ್ಕರ್ ನಿರ್ದೇಶನ ಮಾಡುತ್ತಿದ್ದು, ರಾಜಮೌಳಿ ಅವರ ಮಗ ಎಸ್ ಎಸ್ ಕಾರ್ತಿಕೇಯ ಮತ್ತು ವರುಣ್ ಗುಪ್ತಾ ಎನ್ನುವವರು ಈ ಸಿನಿಮಾಕ್ಕೆ ಬಂಡವಾಳ ಹಾಕಲಿದ್ದಾರೆ. ಇದನ್ನು ರಾಜಮೌಳಿ ಅವರು ಅರ್ಪಿಸಲಿದ್ದಾರೆ. ಎಸ್‌ಎಸ್ ರಾಜಮೌಳಿ ಸೆ.19ರಂದು ಟ್ವೀಟ್ ಮೂಲಕ ಅಧಿಕೃತ ಮಾಹಿತಿ ಹಂಚಿಕೊಂಡಿದ್ದರು.