ಬೆಂಗಳೂರು: ಮಹೇಶ್ ಬಾಬು (Mahesh Babu) ಸೌತ್ ಚಿತ್ರರಂಗದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಬಾಲ ಕಲಾವಿದನಾಗಿ ಪದಾರ್ಪಣೆ ಮಾಡಿದ ನಟ ಇದುವರೆಗೆ 25 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮದ ಜತೆಗೆ, ಮಹೇಶ್ ಬಾಬು ಲಕ್ ( puja ceremony) ಕೂಡ ನಂಬುತ್ತಾರೆ. ಮಹೇಶ್ ಬಾಬು ಶ್ರದ್ಧೆಯಿಂದ ಅನುಸರಿಸುವ ಅಂತಹ ಒಂದು ಭಾವನೆ ಎಂದರೆ ತಮ್ಮ ಚಿತ್ರದ ಪೂಜೆಯ ಸಮಾರಂಭದಲ್ಲಿ ಭಾಗಿಯಾಗದೇ ಇರುವುದು.
ಮಹೇಶ್ ಬಾಬು ಇದುವೆರೆಗೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದರೂ ಸಿನಿಮಾದ ಯಾವುದೇ ಒಂದು ಪೂಜೆ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಮುಹೂರ್ತದಲ್ಲಿ ಇದುವೆರೆಗೂ ನಟ ಕಾಣಿಸಿಕೊಂಡಿಲ್ಲ. ನಟನ ಬದಲಿಗೆ, ಅವರ ಪತ್ನಿ ನಮ್ರತಾ ಮತ್ತು ಮಕ್ಕಳಾದ ಸಿತಾರಾ ಅಥವಾ ಗೌತಮ್ ಪೂಜೆ (SS Rajamouli) ಸಮಾರಂಭಕ್ಕೆ ಹಾಜರಾಗುತ್ತಾರೆ. ಮಹೇಶ್ ಚಿತ್ರಗಳಿಗೆ ಮೊದಲ ಕ್ಲಾಪ್ ಕೂಡ ನೀಡುತ್ತಾರೆ. ಮಹೇಶ್ ಬಾಬು ಯಾಕೆ ಹೀಗೆ ಎಂಬುದಕ್ಕೆ ಕಾರಣ ತಿಳಿದಿಲ್ಲ.
ಸಿನಿಮಾದಲ್ಲಿ ಸಖತ್ ಬ್ಯುಸಿ
ಗುಂಟೂರು ಖಾರಂ (Guntur Kaaram) ಚಿತ್ರವನ್ನು ಹಾರಿಕಾ ಆ್ಯಂಡ್ ಹಾಸಿನಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಎಸ್ ರಾಧಾಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ʻಅತಡುʼ ಮತ್ತು ʻಖಲೇಜಾʼದಂತಹ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾವನ್ನು 2024ರ ಸಂಕ್ರಾಂತಿಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಆದರೆ ಚಿತ್ರೀಕರಣದ ವೇಳೆ ಹಲವಾರು ವಿರಾಮಗಳು ಇದ್ದಿದ್ದರಿಂದಾಗಿ ಬಿಡುಗಡೆ ದಿನಾಂಕ ಮುಂದೆ ಹೋಗುವ ಸಾಧ್ಯತೆ ಹೆಚ್ಚಿದೆ. ಈ ಸಿನಿಮಾದ ಬಳಿಕ ಮಹೇಶ್ ಬಾಬು, ರಾಜಮೌಳಿ ಸಿನಿಮಾದಲ್ಲಿ ನಟಿಸಲಿದ್ದಾರೆ, ತ್ರಿವಿಕ್ರಮ್, ಅಲ್ಲು ಅರ್ಜುನ್ ಜತೆ ಕೆಲಸ ಮಾಡಲಿದ್ದಾರೆ.
ಇದನ್ನೂ ಓದಿ: Mahesh Babu : ಮಹೇಶ್ ಬಾಬು ಜನುಮದಿನದಂದು ಅವರ ಹಿಟ್ ಸಿನಿಮಾ ಮರು ಬಿಡುಗಡೆ!
#SSMB28 🌟 Pooja commenced today.✨
— 𝐕𝐚𝐦𝐬𝐢𝐒𝐡𝐞𝐤𝐚𝐫 (@UrsVamsiShekar) February 3, 2022
Regular shoot starts this April, 2022! 💫
Superstar @urstrulyMahesh #Trivikram @hegdepooja @MusicThaman @vamsi84 @haarikahassine pic.twitter.com/Cvp6hY8Qss
ಎಸ್ಎಸ್ ರಾಜಮೌಳಿ ಸಿನಿಮಾದಲ್ಲಿ ಮಹೇಶ್ ಬಾಬು ಮ್ಯಾನರಿಸಂ ಬದಲು!
ಇದರ ನಂತರ, ಮಹೇಶ್ ಬಾಬು RRR ಚಲನಚಿತ್ರ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಜತೆ ಸಿನಿಮಾ ಮಾಡಲಿದ್ದಾರೆ. ಚಿತ್ರಕ್ಕೆ ತಾತ್ಕಾಲಿಕವಾಗಿ SSMB29 ಎಂದು ಹೆಸರಿಡಲಾಗಿದೆ.
ರಾಜಮೌಳಿ ಸಿನಿಮಾಗೆ ಮಹೇಶ್ ಬಾಬು ಅವರ ಲುಕ್ ಮತ್ತು ಮ್ಯಾನರಿಸಂ ಬದಲಾಗುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಈ ಸಿನಿಮಾದ ಸ್ಕ್ರಿಪ್ಟ್ ಭರದಿಂದ ಸಾಗಿದ್ದು, ಡೈನಾಮಿಕ್ ಜೋಡಿ ತೆರೆ ಮೇಲೆ ಬರುವುದನ್ನು ಸಿನಿಪ್ರಿಯರು ಕಾಯುತ್ತಿದ್ದಾರೆ. ರಾಜಮೌಳಿ ಜತೆಗಿನ ಈ ಚಿತ್ರ ಮಹೇಶ್ ಬಾಬು 29ನೇ ಸಿನಿಮಾ ಆಗಿದೆ. ತಾತ್ಕಾಲಿಕವಾಗಿ SSMB29 ಹೆಸರು ನೀಡಲಾಗಿದೆ. ಮತ್ತು ಈ ಬಾರಿ ಈ ಸಿನಿಮಾದಲ್ಲಿ ಆರ್‌ಆರ್‌ಆರ್‌ಗಿಂತ ಹೆಚ್ಚು ವಿಎಫ್‌ಎಕ್ಸ್ ಬಳಸಲಿದ್ದಾರೆ ಎನ್ನಲಾಗುತ್ತಿದೆ.
ರಾಜಮೌಳಿ, ಕೆ.ಎಲ್. ನಾರಾಯಣ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಇದಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ರಾಜಮೌಳಿ -ಮಹೇಶ್ ಬಾಬು ಕಾಂಬಿನೇಷನ್ ಚಿತ್ರದಲ್ಲಿ ಚಿತ್ರೀಕರಣಕ್ಕೆ ಕಾಡಿನಲ್ಲಿ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಹೆಚ್ಚಾಗಿ ರಾಜಮೌಳಿ ಅರಣ್ಯದಲ್ಲೇ ಹೆಚ್ಚು ಚಿತ್ರೀಕರಣ ಮಾಡುತ್ತಾರೆ. ಇದರಿಂದಾಗಿ ಜನರಿಗೆ ಇನ್ನೂ ಕ್ರೇಜ್ ಹೆಚ್ಚಾಗಿದೆ.