Site icon Vistara News

Mahesh Babu: ಪ್ಯಾರಿಸ್‌ನಲ್ಲಿ ಜಾಲಿ ಮೋಡ್‌ನಲ್ಲಿ ಮಹೇಶ್‌ ಬಾಬು ಕುಟುಂಬ; ಫೋಟೋ ಹಂಚಿಕೊಂಡ ನಮ್ರತಾ

#image_title

ಪ್ಯಾರಿಸ್‌: ದಕ್ಷಿಣ ಭಾರತದ ನಟ ಮಹೇಶ್‌ ಬಾಬು (Mahesh Babu) ಅವರ ಕುಟುಂಬ ಸದ್ಯ ಪ್ಯಾರಿಸ್‌ನಲ್ಲಿ ಮಜಾ ಮಾಡುತ್ತಿದೆ. ನಟನ ಪತ್ನಿ ನಮ್ರತಾ ಮತ್ತು ಮಗಳು ಸಿತಾರಾ ಗರ್ಲ್ಸ್‌ ಟ್ರಿಪ್‌ ಹೆಸರಿನಲ್ಲಿ ಮೊದಲೇ ಪ್ಯಾರಿಸ್‌ಗೆ ಹೋಗಿದ್ದರೆ, ಇದೀಗ ನಟ ಹಾಗೂ ಅವರ ಮಗ ಗೌತಮ್‌ ಕೂಡ ಆ ಪ್ರವಾಸದಲ್ಲಿ ಸೇರಿಕೊಂಡಿದ್ದಾರೆ. ಪ್ರವಾಸದ ಒಂದು ಫೋಟೋವನ್ನು ನಮ್ರತಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಆ ಫೋಟೋ ಎಲ್ಲೆಡೆ ಹರಿದಾಡಿದ್ದು, ವೈರಲ್‌ ಆಗಿದೆ.

ಮಹೇಶ್‌ ಬಾಬು, ಗೌತಮ್‌ ಮತ್ತು ಸಿತಾರಾ ಒಂದು ಸ್ಥಳದಲ್ಲಿ ನಿಂತುಕೊಂಡು ನಗುತ್ತಿರುವ ಫೋಟೋವನ್ನು ನಮ್ರತಾ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಾಗಿ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು “ಮೈ 3 ಮಸ್ಕಟೀರ್ಸ್‌ ಬ್ಯಾಕ್‌ ಟುಗೇದರ್‌” ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಹಾಗೆಯೇ ಫೋಟೋದಲ್ಲಿ ಪ್ಯಾರಿಸ್‌ ಲೊಕೇಶನ್‌ ಅನ್ನು ಮತ್ತು ಪತಿ ಹಾಗೂ ಇಬ್ಬರು ಮಕ್ಕಳನ್ನೂ ಟ್ಯಾಗ್‌ ಕೂಡ ಮಾಡಿದ್ದಾರೆ.

ಫೋಟೋದಲ್ಲಿ ನಟ ವೈಟ್‌ ಆಂಡ್‌ ವೈಟ್‌ ಉಡುಗೆಯಲ್ಲಿರುವುದನ್ನು ಕಾಣಬಹುದು. ಹಾಗೆಯೇ ಸಿತಾರಾ ಮತ್ತು ಗೌತಮ್‌ ಸ್ವೆಟ್‌ ಶರ್ಟ್‌ ಜತೆ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಾರೆ.


ನಮ್ರತಾ ಅವರು ಸಹೋದರಿ ಶಿಲ್ಪಾ ಹಾಗೂ ಮಗಳೊಂದಿಗೆ ಸ್ವಿಝರ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಹಲವು ಫೋಟೋಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅದಾದ ನಂತರ ಅವರು ಅಲ್ಲಿಂದ ನೇರವಾಗಿ ಪ್ಯಾರಿಸ್‌ಗೆ ತೆರಳಿದ್ದಾರೆ. ಅಲ್ಲಿ ಕುಟುಂಬದೊಂದಿಗೆ ಪ್ರವಾಸದ ಮಸ್ತಿಯಲ್ಲಿದ್ದಾರೆ. ಈ ಬಗ್ಗೆ ಮಹೇಶ್‌ ಬಾಬು ಅವರ ಮಗಳು ಕೂಡ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಪ್ರವಾಸದಲ್ಲಿ ತಾನು ಗೌತಮ್‌ನೊಂದಿಗೆ ತೆಗೆಸಿಕೊಂಡಿರುವ ಫೋಟೋವನ್ನು ಸಿತಾರಾ ಸಹೋದರ-ಸಹೋದರಿಯರ ದಿನದಂದು ಹಂಚಿಕೊಂಡಿದ್ದರು. “ನನ್ನಂತ ಸಹೋದರಿ ಸಿಕ್ಕಿರುವುದಕ್ಕೆ ನೀನು ಲಕ್ಕಿ” ಎಂದು ಫೋಟೋದೊಂದಿಗೆ ಬರೆದುಕೊಂಡಿದ್ದರು ಕೂಡ.

Exit mobile version