Mahesh Babu: 47 ವರ್ಷ ಆಯ್ತು ಅಂತ ಯಾರಾದ್ರೂ ನೆನಪಿಸ್ರಿ ಪ್ಲೀಸ್; ಹೀರೊ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ! Yashaswi Devadiga 2 ವರ್ಷಗಳು ago ಟಾಲಿವುಡ್ ನಟ ಮಹೇಶ್ ಬಾಬು (Mahesh Babu ) ತಮ್ಮ ‘ಗುಂಟೂರು ಖಾರಂ’ ಸಿನಿಮಾದ ರಗಡ್ ಲುಕ್ ಬೆನ್ನಲ್ಲೇ ಕೆಲವು ಸ್ಟೈಲಿಶ್ ಮತ್ತು ಹಾಟ್ ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಮೆಸ್ಸಿ ಹೇರ್‌ನೊಂದಿಗೆ ಕ್ಯಾಶುಯಲ್ ಡೆನಿಮ್‌ನಲ್ಲಿ ಹಾಲಿವುಡ್ ಹೀರೊ ರೀತಿ ಕಾಣಿಸಿಕೊಂಡಿದ್ದಾರೆ. ಫೋಟೊಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು 47 ವರ್ಷಾಯಿತು ಅವರಿಗೆ ಎಂದು ನೆನಪಿಸಿ ಎಂದು ಕಮೆಂಟ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಮಹೇಶ್ ಬಾಬು ತಮ್ಮ 28ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೈಟಲ್ ಅನಾವರಣಗೊಳಿಸಿದ್ದರು. ‘ಗುಂಟೂರು ಖಾರಂ’ (Guntur Kaaram) ಎಂದು ಖಾರವಾದ ಟೈಟಲ್ ಅನ್ನೇ ಇಡಲಾಗಿದೆ. 2024ರ ಜನವರಿ 13ರಂದು ಚಿತ್ರಮಂದಿರಗಳಲ್ಲಿ ‘ಗುಂಟೂರು ಖಾರಂ’ ಬಿಡುಗಡೆಯಾಗಲಿದೆ ಎನ್ನಲಾಗಿದೆ. ‘ಹಾರಿಕಾ ಆ್ಯಂಡ್ ಹಾಸಿನಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಇದರ ನಂತರ, ಮಹೇಶ್ ಬಾಬು RRR ಚಲನಚಿತ್ರ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಜತೆ ಸಿನಿಮಾ ಮಾಡಲಿದ್ದಾರೆ. ಚಿತ್ರಕ್ಕೆ ತಾತ್ಕಾಲಿಕವಾಗಿ SSMB29 ಎಂದು ಹೆಸರಿಡಲಾಗಿದೆ.