ಬೆಂಗಳೂರು: ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಅವರ ತಾಯಿ ಇಂದಿರಾ ದೇವಿ ಬುಧವಾರ ಬೆಳಗಿನ ಜಾವ 4 ಗಂಟೆಗೆ ಹೈದರಾಬಾದ್‌ನಲ್ಲಿ ನಿಧನರಾದರು.
ಅವರ ನಿಧನಕ್ಕೆ ಚಿತ್ರರಂಗ, ರಾಜಕೀಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಜ್ಯೂನಿಯರ್ ಎನ್‌ಟಿಆರ್ ಮತ್ತು ಚಿರಂಜೀವಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಇಂದಿರಾ ದೇವಿಗೆ ಇಂದಿರಮ್ಮ ಎಂದೂ ಕರೆಯಲಾಗುತ್ತಿತ್ತು.
ಕೆಲ ದಿನಗಳಿಂದ ಇಂದಿರಾ ದೇವಿ ಅನಾರೋಗ್ಯದಿಂದ ಬಳಲುತ್ತಿದ್ದರು. ಮಹೇಶ್ ಬಾಬು ತಂದೆ ಕೃಷ್ಣ ಹಿರಿಯ ಕಲಾವಿದರಾಗಿದ್ದಾರೆ. ಇತ್ತೀಚೆಗೆ ಮಹೇಶ್ ಬಾಬು ಸೋದರ ರಮೇಶ್ ಬಾಬು ಮೃತರಾಗಿದ್ದರು. ಇದೀಗ ತಾಯಿ ಇಂದಿರಾದೇವಿ ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ | Shivamogga terror | ಮಗ ಉಗ್ರನಾದ ನೋವು: ಮಹಮ್ಮದ್ ಮಾಜ್‌ನ ತಂದೆ ಹೃದಯಾಘಾತದಿಂದ ನಿಧನ
ಕೃಷ್ಣ ಮತ್ತು ಇಂದಿರಾ ದೇವಿ ದಂಪತಿಗೆ ಮಹೇಶ್ ಬಾಬು ಮತ್ತು ರಮೇಶ್ ಬಾಬು, ಪದ್ಮಾವತಿ, ಮಂಜುಳಾ ಮತ್ತು ಪ್ರಿಯದರ್ಶಿನಿ ಎಂಬ ಐವರು ಮಕ್ಕಳು. ಪ್ರಿಯದರ್ಶಿನಿ ಪತಿ ಸುಧೀರ್ ಬಾಬು ಸಹ ನಟರಾಗಿದ್ದಾರೆ.
ಇಂದಿರಾ ದೇವಿ ಪುತ್ರಿ ನಿರ್ಮಾಪಕಿ ಮಂಜುಳಾ ಘಟ್ಟಮನೇನಿ ಇನ್ಸ್ಟಾದಲ್ಲಿ ದುಃಖ ಹಂಚಿಕೊಂಡಿದ್ದಾರೆ. ʻʻನೀವು ನನ್ನ ಮೊದಲ ಗುರು. ನೀವು ನನ್ನ ಅಡಿಪಾಯವಾಗಿದ್ದವರು, ನನ್ನ ಹೃದಯವೂ ನೀವಾಗಿದ್ದಿರಿ. ನನ್ನ ತಾಯಿ ತನ್ನ ಜೀವನದುದ್ದಕ್ಕೂ ಕೊಡುವುದನ್ನು ಮಾತ್ರ ತಿಳಿದಿದ್ದರು. ಅವಳು ನಿಸ್ವಾರ್ಥ ಪ್ರೀತಿಯಲ್ಲಿ ನಮ್ಮ ಎಲ್ಲ ಅಗತ್ಯಗಳನ್ನು ನೋಡಿಕೊಂಡಳು.” ಎಂದು ಬರೆದುಕೊಂಡಿದ್ದಾರೆ.
ಹಿರಿಯ ನಟ ಚಿರಂಜೀವಿ ಟ್ವೀಟ್‌ನಲ್ಲಿ ಇಂದಿರಾ ದೇವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಇಂದಿರಾ ದೇವಿ ನಿಧನರಾದ ಸುದ್ದಿ ತುಂಬಾ ದುಃಖಕರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ. ಸೂಪರ್ ಸ್ಟಾರ್ ಕೃಷ್ಣ, ಸಹೋದರ ಮಹೇಶ್ ಬಾಬು ಮತ್ತು ಕುಟುಂಬದ ಎಲ್ಲ ಸದಸ್ಯರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | AV Kashinath | ನಾಡಿನ ಖ್ಯಾತ ಸಂಗೀತಗಾರ ಎ.ವಿ. ಕಾಶಿನಾಥ್ ನಿಧನ