Site icon Vistara News

Mahesh Babu: ಜಿಮ್‌ ವರ್ಕೌಟ್‌ ಫೋಟೊ ಹಂಚಿಕೊಂಡ ಮಹೇಶ್ ಬಾಬು, SSMB 28 ತಯಾರಿ ನಡೆಸಿದ್ದಾರಾ ನಟ?

Mahesh Babu new look in SSMB 28

ಬೆಂಗಳೂರು: ಟಾಲಿವುಡ್‌ ನಟ ಮಹೇಶ್ ಬಾಬು (Mahesh Babu) ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ನಟ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಬಾಬು ಸ್ಪೋರ್ಟ್ಸ್ ಹೊಸ ಲುಕ್‌ಗೆ ಅವರ ಅಭಿಮಾನಿಗಳು SSMB 28 ಸಿನಿಮಾದ ತಯಾರಿಯಲ್ಲಿದ್ದಾರಾ ಎಂದು ಕಮೆಂಟ್‌ ಮಾಡುತ್ತಿದ್ದಾರೆ

ಜಿಮ್‌ನಲ್ಲಿ ಇರುವ ಒಂದು ಫೋಟೊ ಹಂಚಿಕೊಂಡು ʻʻಆರ್ಮ್ ಡೇ !!” ಎಂದು ಬರೆದಿದ್ದಾರೆ. ಮಹೇಶ್ ಬಾಬು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ SSMB28ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ʻಮಹರ್ಷಿʼ ಸಿನಿಮಾ ನಂತರ ಮತ್ತೆ ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ತಾತ್ಕಾಲಿಕವಾಗಿ SSMB28 ಎಂದು ಹೆಸರಿಡಲಾಗಿದೆ.

ಈ ಹಿಂದೆ ʻಅತಡುʼ ಮತ್ತು ʻಖಲೇಜಾʼದಂತಹ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಕೆಲಸ ಮಾಡಿದ್ದರು. ನಟಿ ಶ್ರೀಲೀಲಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ. SSMB28 ಅನ್ನು ಆಗಸ್ಟ್ 11, 2023ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Mahesh Babu: ಪತ್ನಿ ನಮ್ರತಾ ಜತೆ ಸ್ವಿಟ್ಜರ್ಲೆಂಡ್‌ಗೆ ಹಾರಿದ ಮಹೇಶ್‌ ಬಾಬು

ಇದರ ನಂತರ, ಮಹೇಶ್ ಬಾಬು RRR ಚಲನಚಿತ್ರ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಜತೆ ಸಿನಿಮಾ ಮಾಡಲಿದ್ದಾರೆ. ಚಿತ್ರಕ್ಕೆ ತಾತ್ಕಾಲಿಕವಾಗಿ SSMB29 ಎಂದು ಹೆಸರಿಡಲಾಗಿದೆ.

Exit mobile version