ಬೆಂಗಳೂರು: ತಮ್ಮ ಮಗ ಗೌತಮ್ ಘಟ್ಟಮನೇನಿ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲಿದ್ದಾರೆ ಎಂದು ಮಹೇಶ್ ಬಾಬು (Mahesh Babu) ಪತ್ನಿ ನಟಿ ನಮ್ರತಾ ಶಿರೋಡ್ಕರ್ (Namrata Shirodkar) ಅವರು ತಮ್ಮ ಅಭಿಮಾನಿಗಳಿಗೆ ಹಾಗೂ ಫಾಲೋವರ್ಸ್‌ಗೆ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಡಿ. 17ರಂದು ಇನ್‌ಸ್ಟಾಗ್ರಾಮ್‌ನಲ್ಲಿ ನಮ್ರತಾ ಅವರು ಫ್ಯಾಮಿಲಿ ಜತೆಗಿನ ಪೋಟೊವನ್ನು ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ನಮ್ರತಾ ಮತ್ತು ಗೌತಮ್ ಒಟ್ಟಿಗೆ ಪಕ್ಕದಲ್ಲಿ ಕುಳಿತು ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ನಮ್ರತಾ ಬೂದು ಬಣ್ಣದ ಉಡುಪನ್ನು ಧರಿಸಿದ್ದರೆ, ಗೌತಮ್ ಚೆಕ್ಡ್ ಶರ್ಟ್ ಮತ್ತು ಡೆನಿಮ್‌ಗಳ ಧರಿಸಿದ್ದರು. ʻಗೌತಮ್ ಘಟ್ಟಮನೇನಿ ಹೊಸ ಅಧ್ಯಾಯವನ್ನುʼ ಪ್ರಾರಂಭಿಸಿದ್ದಾರೆ ಎಂದು ನಮ್ರತಾ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ʻʻನಿನ್ನ ಕಠಿಣ ಪರಿಶ್ರಮದ ಬಗ್ಗೆ ತುಂಬಾ ಹೆಮ್ಮೆ ಇದೆʼʼ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಶಿಲ್ಪಾ ಶಿರೋಡ್ಕರ್ “ಲವ್ ಯೂ ಮೈ ಬೇಬಿ, ತುಂಬಾ ಹೆಮ್ಮೆ ಆಗುತ್ತಿದೆ” ಎಂದು ಕಮೆಂಟ್ ಮಾಡಿದ್ದಾರೆ. ದಂಪತಿಗೆ ಸಿತಾರಾ ಘಟ್ಟಮನೇನಿ ಎಂಬ ಮಗಳಿದ್ದಾಳೆ.
ಗುಂಟೂರು ಖಾರಂ ಸಿನಿಮಾದಲ್ಲಿ ಮಹೇಶ್ ಬಾಬು
ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯಲ್ಲಿರುವ ನಟ ಮಹೇಶ್ ಬಾಬು(Mahesh Babu). ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದಿಲ್ಲವಾದರೂ ಸ್ಥಳೀಯವಾಗಿ ಅವರಿಗೆ ಅತಿ ದೊಡ್ಡ ಅಭಿಮಾನಿಗಳ ಬಳಗವಿದೆ. ಅವರ ಸಿನಿಮಾವೆಲ್ಲವೂ ಹಿಟ್ ಲಿಸ್ಟ್‌ಗೆ ಸೇರಿಕೊಳ್ಳುತ್ತಿವೆ. ಅದೇ ಹಿನ್ನೆಲೆಯಲ್ಲಿ ನಟ ತಮ್ಮ ಸಂಭಾವನೆಯನ್ನೂ ಏರಿಸಿಕೊಂಡಿದ್ದು, ಮುಂಬರುವ ʼಗುಂಟೂರು ಖಾರಂʼ ಸಿನಿಮಾಗಾಗಿ ಬರೋಬ್ಬರಿ 78 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Mahesh Babu : ಮಹೇಶ್ ಬಾಬು ಜನುಮದಿನದಂದು ಅವರ ಹಿಟ್ ಸಿನಿಮಾ ಮರು ಬಿಡುಗಡೆ!
ಮಹೇಶ್ ಬಾಬು ಅವರು ಕೊನೆಯದಾಗಿ ನಟಿಸಿದ ʼಸರ್ಕಾರು ವಾರಿ ಪಾಟʼ ಸಿನಿಮಾ ಕೂಡ ಹಿಟ್ ಆಗಿತ್ತು. ಅದೇ ಕಾರಣಕ್ಕೆ ಅವರು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ತ್ರಿವಿಕ್ರಮ್ ಅವರು ನಿರ್ದೇಶನ ಮಾಡುತ್ತಿರುವ ʼಗುಂಟೂರು ಖಾರಂʼ ಸಿನಿಮಾದಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೆ 78 ಕೋಟಿ ರೂ. ಸಂಭಾವನೆ ಕೇಳಿದರಂತೆ. ಅಂದ ಹಾಗೆ ಈ ʼಗುಂಟೂರು ಖಾರಂʼ ಸಿನಿಮಾವನ್ನು 200 ಕೋಟಿ ರೂ. ಬಜೆಟ್‌ನಲ್ಲಿ ತಯಾರಿಸಲಾಗುತ್ತಿದೆ. ಮೀನಾಕ್ಷಿ ಚೌಧರಿ ಮತ್ತು ಶ್ರೀಲೀಲಾ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲಿಗೆ ಪೂಜಾ ಹೆಗ್ಡೆ ಅವರನ್ನು ಈ ಸಿನಿಮಾದ ನಾಯಕ ನಟಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಸಿನಿಮಾದ ಸ್ಕ್ರಿಪ್ಟ್‌ನಲ್ಲಿ ಆಗಾಗ ಬದಲಾವಣೆ ಆಗುತ್ತಿದ್ದ ಕಾರಣಕ್ಕೆ ಪೂಜಾ ಹೆಗ್ಡೆ ಅವರು ಈ ಸಿನಿಮಾದಿಂದ ಹೊರನಡೆದರು. ನಂತರ ಅವರ ಬದಲಾಗಿ ಮೀನಾಕ್ಷಿ ಚೌಧರಿ ಅವರನ್ನು ಸಿನಿಮಾಕ್ಕೆ ಕರೆತರಲಾಗಿದೆ.