ಬೆಂಗಳೂರು : ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಪತ್ನಿ ನಮ್ರತಾ ಶಿರೋಡ್ಕರ್ ಸ್ಟಾರ್ ನಟಿಯಾಗಿ ಸಿನಿ ಜಗತ್ತಿನಲ್ಲಿ ಮಿಂಚಿದವರು. ಇದೀಗ ತಮ್ಮ ವೈಯಕ್ತಿಕ ವಿಚಾರಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಮಹೇಶ್ ಬಾಬು ಅವರಿಗೋಸ್ಕರವಾಗಿ ಸಿನಿ ಜೀವನವನ್ನೇ ತ್ಯಾಗ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಮಹೇಶ್ ಅವರ ಬಾಳಸಂಗಾತಿಯಾದ ನಂತರ ನಮ್ರತಾ ಸಿನಿಮಾ ಕ್ಷೇತ್ರಕ್ಕೆ ವಿದಾಯ ಹೇಳಬೇಕಾಯಿತು ಎಂದು ತಿಳಿಸಿದ್ದಾರೆ. ʻʻವಿವಾಹ ಆದ ನಂತರವೂ ಹಲವಾರು ಆಫರ್‌ಗಳು ಬಂದಿತ್ತು. ಒಳ್ಳೊಳ್ಳೆ ಸಿನಿಮಾಗಳನ್ನು ನಾನು ಬಿಟ್ಟೆ. ಆ ಬಗ್ಗೆ ನನಗೆ ಸ್ವಲ್ಪವೂ ಬೇಸರವಿಲ್ಲ. ನನಗೆ ಮಹೇಶ್ ಅವರು ತುಂಬಾ ಮುಖ್ಯವಾಗಿದ್ದರು. ನಮ್ಮಲ್ಲಿ ಭಿನ್ನಾಭಿಪ್ರಾಯ ಒಂದೇ ಅದು ಮಕ್ಕಳ ವಿಚಾರಕ್ಕೆ. ಮಕ್ಕಳಾದ ಗೌತಮ್ ಹಾಗೂ ಸಿತಾರಾ ವಿಷಯದಲ್ಲಿ ನಾವು ಸಾಮಾನ್ಯವಾಗಿ ಜಗಳಾಡುತ್ತೇವೆ. ಅಂತೆಯೇ ನಮ್ಮ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿವೆʼʼ ಎಂಬುದನ್ನು ಹೇಳಿದ್ದಾರೆ.
ಇದನ್ನೂ ಓದಿ | ಮಹೇಶ್ ಬಾಬು ತಂದೆ ನಟ ಕೃಷ್ಣಗೆ ಹೃದಯಾಘಾತ, ಗಂಭೀರ ಸ್ಥಿತಿಯಲ್ಲಿ ವೆಂಟಿಲೇಟರ್‌ಗೆ
ʻʻಗೌತಮ್ ಹುಟ್ಟಿದ ನಂತರ ನಾವು ಮಗು ಬೇಡ ಎಂದು ನಿರ್ಧಾರ ಮಾಡಿದ್ದೆವು. ಆದರೆ, ಸಿತಾರಾ ಇಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲʼʼ ಎಂಬುದು ನಮ್ರತಾ ಮಾತಾಗಿದೆ. ‘ಜಬ್ ಪ್ಯಾರ್ ಕಿಸಿಸೇ ಹೋತಾ ಹೈ’ ಚಿತ್ರದ ಪುಟ್ಟ ಪಾತ್ರದ ಮೂಲಕ ನಮ್ರತಾ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಅದಕ್ಕೂ ಮುನ್ನ ಬಾಲನಟಿಯಾಗಿಯೂ ಬಣ್ಣ ಹಚ್ಚಿದ್ದರು. ತೆಲುಗಿನಲ್ಲಿ ‘ವಂಶಿ’ ನಮ್ರತಾ ನಟಿಸಿದ ಮೊದಲ ಚಿತ್ರ. ‘ಹೆರಾ ಪೇರಿ’, ‘ಅಸ್ತಿತ್ವ’, ‘ಅಂಜಿ’ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಕನ್ನಡದ ‘ಚೋರ ಚಿತ್ತ ಚೋರ’ ಚಿತ್ರದಲ್ಲಿ ನಮ್ರತಾ, ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿಯಾಗಿ ಮಿಂಚಿದ್ದರು.
ಇದನ್ನೂ ಓದಿ | ಮಹೇಶ್ ಬಾಬು ತಂದೆ ನಟ ಕೃಷ್ಣ ಹೃದಯಸ್ತಂಭನದಿಂದ ನಿಧನ