Site icon Vistara News

ಮಹಿಮಾ ಚೌಧರಿಗೆ Breast cancer: ಧೈರ್ಯ ತುಂಬಿದ ಅನುಪಮ್‌ ಖೇರ್‌

ಮಹಿಮಾ ಚೌಧರಿ

ಬೆಂಗಳೂರು : 1997ರಲ್ಲಿ ಶಾರುಖ್‌ ಅವರೊಂದಿಗೆ ʼಪರ್ದೇಸ್‌ʼ (Perdes) ಚಿತ್ರದಲ್ಲಿ ಲೀಡಿಂಗ್‌ ರೋಲ್‌ನಲ್ಲಿ ಮಿಂಚಿದ ನಟಿ ಮಹಿಮಾ ಚೌಧರಿ. ಇದೀಗ ಮಹಿಮಾ ಚೌಧರಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ನಟ ಅನುಪಮ್‌ ಖೇರ್‌ ನಟಿ ಮಹಿಮಾ ಚೌಧರಿಯೊಂದಿಗೆ ಹೊಸ ಪ್ರಾಜೆಕ್ಟ್‌ ಮಾಡಲಿದ್ದು, ಅವರನ್ನು ಭೇಟಿ ಮಾಡಿದ ಭಾವನಾತ್ಮಕ ವಿಡಿಯೋವನ್ನು ಇನ್ಸ್‌ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಖೇರ್‌ ಹೀಗೆ ಬರೆದುಕೊಂಡಿದ್ದಾರೆ- @ಮಹಿಮಾಚೌಧರಿ- ಅವರ ಧೈರ್ಯ ಮತ್ತು ಕ್ಯಾನ್ಸರ್‌ ಕಥೆ : ಇದು ನನ್ನ 525ನೇ ಚಿತ್ರ. . #TheSignatureನಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ನಿರ್ವಹಿಸಲು ನಾನು ಒಂದು ತಿಂಗಳ ಹಿಂದೆ ಅಮೆರಿಕದಿಂದ # MahimaChaudhryಗೆ ಕರೆ ಮಾಡಿದೆ. ಆಕೆಗೆ ಸ್ತನ ಕ್ಯಾನರ್‌ ಇದೆ ಎಂದು ತಿಳಿದ ಮೇಲೆ ಸಂಬಾಷಿಸಲು ಒಂದು ಕ್ಷಣ ಅಸಾಧ್ಯವಾಯಿತು. ಅವಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಧೈರ್ಯವಂತೆ ಎಂದು ಅನಿಸಿತು. ಈ ವಿಷಯದಲ್ಲಿ ಅವಳು ಅನೇಕ ಹೆಣ್ಣು ಮಕ್ಕಳಿಗೆ ಸೂರ್ತಿಯಾಗಿದ್ದಾಳೆ. ಅವಳು ನನ್ನನ್ನು ಆಶಾವಾದಿ ಎಂದು ಕರೆದಿದ್ದಾಳೆ. ಆದರೆ ಮಹಿಮಾ, ನೀನು ನನ್ನ ಹೀರೋ. ಸ್ನೇಹಿತರೆ..! ನಿಮ್ಮ, ಪ್ರೀತಿ, ಪ್ರಾರ್ಥನೆ, ಶುಭಾಶಯ ಮತ್ತು ಹಾರೈಕೆ ಅವಳ ಮೇಲೆ ಇರಲಿ. She is ready to fly. ಎಲ್ಲಾ ನಿರ್ಮಾಪಕರು/ನಿರ್ದೇಶಕರಿಗೆ ವಿನಂತಿ, ಆಕೆಯ ಪ್ರತಿಭೆಯನ್ನು ಬಳಸಿಕೊಳ್ಳಲು ನಿಮಗೆ ಅವಕಾಶ ಇಲ್ಲಿದೆ! ಅವಳಿಗೆ ಜೈ ಹೋ!!

ಮಹಿಮಾ ವಿಡಿಯೋ ಮೂಲಕ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಭಾವುಕರಾಗಿ ಮಾತನಾಡಿದ್ದಾರೆ. ʼʼಸಿನಿಮಾ ವಿಚಾರವಾಗಿ, ಹಲವಾರು ಚಿತ್ರಗಳು ಮತ್ತು ವೆಬ್‌ ಶೋಗಳನ್ನು ಮಾಡಲು ನನಗೆ ಆಫರ್‌ಗಳು ಬರುತ್ತಲೇ ಇತ್ತು. ಆದರೆ ನನಗೆ ತಲೆಕೂದಲು ಇಲ್ಲವಾದ್ದರಿಂದ ಓಕೆ ಎನ್ನಲು ಸಾದ್ಯವಾಗಲಿಲ್ಲ. ಅನುಪಮ್‌ ಅವರ  ಸಿನಿಮಾವನ್ನು ವಿಗ್‌ ಹಾಕಿಕೊಂಡೇ ಮಾಡಬಹುದೇ ಎಂದು ಕೇಳಿದ್ದೆ. ನನಗೆ ಆರಂಭದಲ್ಲಿ ರೋಗದ ಯಾವುದೇ ಲಕ್ಷಣಗಳಿರಲಿಲ್ಲ. ರೊಟೀನ್‌ ಚೆಕ್‌ಅಪ್‌ ಮಾಡುವಾಗ ಸ್ತನ ಕ್ಯಾನ್ಸರ್‌ ಎಂದು ತಿಳಿದು ಬಂತುʼʼ ಎಂದಿದ್ದಾರೆ.

ಇದನ್ನೂ ಓದಿ | ಕಾಡುವ ಕ್ಯಾನ್ಸರ್‌ಗೆ ಸಿಕ್ತು ಪವಾಡದ ಔಷಧ, ಪ್ರಾಯೋಗಿಕ ಹಂತದಲ್ಲೇ 18 ಜನ ಗುಣಮುಖ

ವಿಡಿಯೋ ನೋಡಿ ಕಮೆಂಟ್‌ನಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನುಪಮ್‌ ವಿಚಾರವಾಗಿ, ʼʼಸರ್‌ ನೀವು ಯಾವಾಗಲೂ ಅದ್ಬುತ. ಒಲವು ಪ್ರೀತಿ ಸದಾ ತೋರಿಸುತ್ತಿರುತ್ತೀರಿ. ದೇವರು ನಿಮಗೆ ಒಳ್ಳೆಯದು ಮಾಡುತ್ತಾನೆ. ನಿಮ್ಮ ಬಗ್ಗೆ ಹೆಮ್ಮೆ ಇದೆʼʼ ಎಂದಿದ್ದಾರೆ.

ಮಹಿಮಾ 2006ರಲ್ಲಿ ಬೊಬಿ ಮುಖರ್ಜಿ ಅವರೊಂದಿಗೆ ವಿವಾಹವಾಗಿದ್ದರು. 2013ರಲ್ಲಿ ವಿಚ್ಛೇದನ ಪಡೆದರು. ಇದೀಗ ಅವರಿಗೆ ಅರಿಯಾನಾ ಎಂಬ ಒಬ್ಬ ಮಗಳು ಇದ್ದಳು.

2021ರಲ್ಲಿ ಪಿಂಕ್‌ವಿಲ್ಲಾ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಹಿಮಾ ಚೌಧರಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಮಗಳನ್ನು ಬೆಳೆಸುವುದಕ್ಕೋಸ್ಕರವಾಗಿಯೇ ನಟನೆಯನ್ನು ಬಿಟ್ಟಿರುವುದಾಗಿ ಹೇಳಿಕೊಂಡಿದ್ದರು. ವಿಚ್ಛೇದನ ನಂತರ ತಂದೆ- ತಾಯಿಯೊಂದಿಗೆ ವಾಸಿಸಲು ಶುರು ಮಾಡಿದ್ದರು ಮಹಿಮಾ. ತಾಯಿಯ ಅನಾರೋಗ್ಯದಿಂದ ಮಗಳನ್ನು ನೋಡಿಕೊಳ್ಳಲು ಅಸಾಧ್ಯವಾಗಿತ್ತು. ಅವರೇ ಅನಾರೋಗ್ಯದಿಂದ ಇದ್ದ ಕಾರಣ ಮಗಳನ್ನು ನೋಡಿಕೊಳ್ಳಲು ಸಾಧ್ಯವಾಗದೆ ಕಷ್ಟಕರ ವಾತಾವರಣವನ್ನು ಮಹಿಮಾ ಫೇಸ್‌ ಮಾಡಿದ್ದರು. ಸಹೋದ್ಯೋಗಿಗಳಿಗೆ ಅವಲಂಬಿತವಾಗಿರುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮಹಿಮಾ ಚೌಧರಿ ತಂದೆಯೂ ಕೂಡ ಡಾರ್ಜಿಲಿಂಗ್‌ನಲ್ಲಿ ನೆಲೆಸಿದ್ದರು. ತಂಗಿಗೂ ಕೂಡ ಮಗು ಆಗಷ್ಟೇ ಜನನವಾಗಿತ್ತು. ತಂಗಿಯೂ ಒಬ್ಬಳೇ ಇದ್ದ ಕಾರಣ ಮಕ್ಕಳನ್ನು ಬೆಳೆಸಿ ಪೋಷಿಸುವುದು ಟಫ್‌ ಟಾಸ್ಕ್‌ ಆಗಿತ್ತು ಎಂದು ಹೇಳಿಕೊಂಡಿದ್ದರು.

ಮಹಿಮಾ ಕೊನೆಯದಾಗಿ 2016ರ ಡಾರ್ಕ್ ಚಾಕೊಲೇಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಮಾಧ್ಯಮ ದೊರೆಗಳಾದ ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿಯವರ ಮಗಳು ಶೀನಾ ಬೋರಾ ಅವರ ಕೊಲೆಯ ವಾಸ್ತವ ಘಟನೆಯನ್ನು ಆಧರಿಸಿದೆ.

ದಿ ಫೈರ್, ಪ್ಯಾರ್ ಕೋಯಿ ಖೇಲ್ ನಹಿ, ದೀವಾನೆ, ಕುರುಕ್ಷೇತ್ರ, ಧಡ್ಕನ್, ಲಜ್ಜಾ, ಬಾಗ್‌ಬಾನ್, ಜಮೀರ್: ದಿ ಫೈರ್ ವಿಥಿನ್, ಓಂ ಜೈ ಜಗದೀಶ್ ಮತ್ತು ದಿಲ್ ಹೈ ತುಮ್ಹಾರಾ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | No Tobacco Day: ಸ್ಮೋಕ್ ಮಾಡೋರ ಸಹವಾಸ ಮಾಡಲೇಬೇಡಿ!

Exit mobile version