Site icon Vistara News

Malaika Arora: ಅರ್ಜುನ್ ಕಪೂರ್ ಫ್ಯಾಮಿಲಿ ಅನ್‌ಫಾಲೊ ಮಾಡಿದ ಮಲೈಕಾ; ಬ್ರೇಕಪ್‌ ನಿಜಾನಾ?

Malaika Arora Arjun Kapoor

ಅರ್ಜುನ್ ಕಪೂರ್ (Arjun Kapoor) ಮತ್ತು ಮಲೈಕಾ ಅರೋರಾ (Malaika Arora) ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದು. ಇತ್ತೀಚಿನ ವರದಿಗಳ ಪ್ರಕಾರ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನಲಾಗಿದೆ. ಅರ್ಜುನ್‌ ಕಪೂರ್ ಕುಟುಂಬದವರನ್ನು ಅನ್​ಫಾಲೋ ಮಾಡಿದ್ದಾರೆ ಮಲೈಕಾ ಅರೋರಾ. ಅಷ್ಟೇ ಅಲ್ಲದೇ ಅರ್ಜುನ್ ಕಪೂರ್ ಈಗ ನಟಿ ಕುಶಾ ಕಪಿಲಾ (Kusha Kapila) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂತಲೂ ವರದಿಗಳಿವೆ. ಇದೀಗ ಈ ಎಲ್ಲಾ ಉಹಾಪೋಹಗಳು ಸುಳ್ಳಾಗಲಿ ಎಂದು ಮಲೈಕಾ ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಮಾಜಿ ಪತಿ ಜೋರಾವರ್ ಸಿಂಗ್ ಅಹ್ಲುವಾಲಿಯಾ ಅವರಿಂದ ಬೇರ್ಪಟ್ಟ ಕುಶಾ, ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಈ ಮೊದಲು ಮಲೈಕಾ ಅವರು ಅರ್ಜುನ್ ಕಪೂರ್ ತಂದೆ ಬೋನಿ ಕಪೂರ್, ಕುಟುಂಬದ ಇತರ ಸದಸ್ಯರಾದ ಅನಿಲ್ ಕಪೂರ್, ಜಾನ್ವಿ ಕಪೂರ್, ಖುಷಿ ಕಪೂರ್ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ, ಇವರುಗಳನ್ನು ಮಲೈಕಾ ಅನ್​ಫಾಲೋ ಮಾಡಿದ್ದಾರೆ. ಆದರೆ, ಅರ್ಜುನ್ ಕಪೂರ್ ಅವರನ್ನು ಈಗಲೂ ಅವರು ಫಾಲೋ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿರುವ ಕರಣ್ ಜೋಹರ್ ಅವರ ಮನೆಯಲ್ಲಿ ಅರ್ಜುನ್ ಮತ್ತು ಕುಶಾ ಒಟ್ಟಿಗೆ ಪಾರ್ಟಿ ಮಾಡಿದ್ದಾಗಿನಿಂದಲೂ ಸಂಬಂಧದ ವದಂತಿಗಳು ಪ್ರಾರಂಭವಾದವು.

ಇದನ್ನೂ ಓದಿ: Malaika Arora: ʻಚೈಯಾ ಚೈಯಾʼ ಹಾಡಿಗೆ ಮಲೈಕಾ ಅರೋರಾ ಸೆಕ್ಸಿ ಮೂವ್ಸ್‌!

ಅರ್ಜುನ್ ಕಪೂರ್ ಅವರ ನಡೆ ಕೂಡ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಅವರು ಇತ್ತೀಚೆಗೆ ಸೋಲೋ ಬೈಕ್ ಟ್ರಿಪ್ ತೆರಳಿದ್ದರು. ಇದು ಸಾಕಷ್ಟು ಜನರ ಅಚ್ಚರಿಗೆ ಕಾರಣ ಆಗಿತ್ತು. ಸದಾ ಮಲೈಕಾ ಹಿಂದೆ ಸುತ್ತಾಡುವ ಅರ್ಜುನ್ ಕಪೂರ್ ಒಬ್ಬಂಟಿಯಾಗಿ ಸುತ್ತಾಡಿದ್ದು ಸಹಜವಾಗಿಯೇ ಅನುಮಾನ ಹುಟ್ಟುಹಾಕಿತ್ತು.

ಮಲೈಕಾ ಈ ಹಿಂದೆ ನಟ, ನಿರ್ಮಾಪಕ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು. ಇಬ್ಬರು 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಅವರಿಗೆ ಅರ್ಹಾನ್ ಖಾನ್ ಹೆಸರಿನ ಮಗನಿದ್ದಾನೆ. ಮಲೈಕಾ ಮತ್ತು ಅರ್ಜುನ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, 2019ರಲ್ಲಿ ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.  ಅರ್ಜುನ್ ಕಪೂರ್​ಗೆ ಈಗ 38 ವರ್ಷ ವಯಸ್ಸು. ಮಲೈಕಾಗೆ 49 ವರ್ಷ. ಆದರೂ ಇವರ ಮಧ್ಯೆ ಪ್ರೀತಿ ಮೂಡಿತು. 

Exit mobile version