Site icon Vistara News

Malaika Arora: ʻಚೈಯಾ ಚೈಯಾʼ ಹಾಡಿಗೆ ಮಲೈಕಾ ಅರೋರಾ ಸೆಕ್ಸಿ ಮೂವ್ಸ್‌!

Chaiyya Malaika Arora

ಬೆಂಗಳೂರು: ನಟಿ ಮಲೈಕಾ ಅರೋರಾ (Malaika Arora) ತಮ್ಮ ಬಾಯ್‌ ಫ್ರೆಂಡ್‌ ಅರ್ಜುನ್ ಕಪೂರ್ ಅವರ 38ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಿಳಿ ಮತ್ತು ಕೆಂಪು ಮ್ಯಾಕ್ಸಿ ಉಡುಪಿನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅರ್ಜುನ್‌ ಅವರ ಮುಂಬೈನ ಮನೆಯಲ್ಲಿ ನಡೆದ ಜನುಮದಿನದ ಸಮಾರಂಭದಲ್ಲಿ ಮಲೈಕಾ ಅರೋರಾ ನೃತ್ಯ ಮಾಡಿದ ವಿಡಿಯೊ ವೈರಲ್ ಆಗಿದೆ. ಚೈಯಾ ಚೈಯಾ ಹಾಡಿಗೆ ಡ್ಯಾನ್ಸ್‌ ಮಾಡಿದ್ದು ಮಲೈಕಾರ ಸೆಕ್ಸಿ ಮೂವ್ಸ್‌ ಸಖತ್‌ ಸದ್ದು ಮಾಡಿದೆ. ಅಷ್ಟೇ ಅಲ್ಲದೇ ನಟಿ ಟ್ರೋಲಿಗೂ ಗುರಿಯಾಗಿದ್ದಾರೆ.

ಅರ್ಜುನ್‌ ಕಪೂರ್‌ಗೆ ವಯಸ್ಸು 38. ಮಲೈಕಾಗೆ 49. ಈ ವಯಸ್ಸಿನ ಅಂತರದ ಬಗೆಗ ಸಾಕಷ್ಟು ಟ್ರೋಲಿಗೆ ಒಳಗಾದರೂ ಅವರಿಬ್ಬರು ಮಾತ್ರ ಝುಮ್ಮಂತ ಜತೆಗೇ ತಿರುಗಾಡುತ್ತಿದ್ದಾರೆ. ಈ ನಡುವೆ, ಮಲೈಕಾ ಅರೋರಾ ಅವರು ಚೈಯಾ ಚೈಯಾ ಹಾಡಿಗೆ ಡ್ಯಾನ್ಸ್‌ ಮಾಡಿದ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ʻʻತುಂಬಾ ವಿಚಿತ್ರವಾಗಿ ನೃತ್ಯ ಮಾಡಿದ್ದಾರೆʼʼಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು `ಬೋರಿಂಗ್‌ ಹಾಡುʼʼಎಂದು ಕಮೆಂಟ್‌ ಮಾಡಿದ್ದಾರೆ. ನಿಜವೆಂದರೆ ಇದು ಮಲೈಕಾ ಅರೋರಾ ಅವರೇ 25 ವರ್ಷದ ಹಿಂದೆ ಮಾಡಿದ ಡ್ಯಾನ್ಸ್‌. ಅಂದು ಅದು ಇಡೀ ಭಾರತದಲ್ಲಿ ಹುಡಿ ಹಾರಿಸಿತ್ತು.

ಅರ್ಜುನ್ ಮತ್ತು ಮಲೈಕಾ ಸುಮಾರು 5 ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಇಬ್ಬರೂ ಪರಸ್ಪರ ಚೆನ್ನಾಗಿದ್ದಾರೆ.

ಇದನ್ನೂ ಓದಿ: Malaika Arora: ಅರ್ಜುನ್‌ ಕಪೂರ್‌ನ ಅರೆ ನಗ್ನ ಫೋಟೊ ಹಂಚಿಕೊಂಡ ಮಲೈಕಾ; ನಟಿ ಕುಡಿದಿರಬೇಕು ಅಂದ್ರು ನೆಟ್ಟಿಗರು!

ಮಲೈಕಾ ಈ ಹಿಂದೆ ನಟ, ನಿರ್ಮಾಪಕ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು. ಇಬ್ಬರು 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಅವರಿಗೆ ಅರ್ಹಾನ್ ಖಾನ್ ಹೆಸರಿನ ಮಗನಿದ್ದಾನೆ. ಮಲೈಕಾ ಮತ್ತು ಅರ್ಜುನ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, 2019ರಲ್ಲಿ ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಇವರಿಬ್ಬರ ಮದುವೆ ವದಂತಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ.

ಅತ್ಯಂತ ಜನಪ್ರಿಯ ಹಾಡು, ನೃತ್ಯ

ಚೈಯಾ ಚೈಯಾ- ಇದು 1998ರಲ್ಲಿ ಬಿಡುಗಡೆಯಾದ ಮಣಿರತ್ನಂ ನಿರ್ದೇಶನ ದಿಲ್‌ ಸೇ ಚಿತ್ರದ ಹಾಡು. ಅದ್ಭುತ ಹಾಡು ಮತ್ತು ಕೊರಿಯೊಗ್ರಾಫಿಗಳಿಂದ ಕೂಡಿದ್ದ ಈ ಚಿತ್ರದ ಎಲ್ಲ ಹಾಡುಗಳೂ ಸೂಪರ್‌ ಹಿಟ್‌ ಆಗಿದ್ದವು. ಅದರಲ್ಲೂ ಚಲಿಸುವ ರೈಲಿನ ಮೇಲೆ ಕುಣಿದಾಡುವ ಚೈಯಾ ಚೈಯಾ ಹಾಡು ಕಾಲು ಶತಮಾನದ ಬಳಿಕವೂ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಅಂದು ಆ ಹಾಡಿಗೆ ರೈಲಿನ ಮೇಲೆ ಕುಣಿದದ್ದು ಇದೇ ಮಲೈಕಾ ಅರೋರಾ ಖಾನ್‌ ಮತ್ತು ಶಾರುಖ್‌ ಖಾನ್‌!

Exit mobile version