Site icon Vistara News

Malaika Arora | ಮಾಜಿ ಪತಿ ಅರ್ಬಾಜ್ ಖಾನ್‌ಗೆ ನಟಿ ಮಲೈಕಾ ಅರೋರಾ ವಿಶ್‌ ಮಾಡಿದ್ದೇನು?

Malaika Arora (Malaika Arora congratulates Arbaaz Khan)

ಬೆಂಗಳೂರು : ಸಲ್ಮಾನ್‌ ಖಾನ್‌ ಸಹೋದರ ನಟ ಅರ್ಬಾಜ್ ಖಾನ್ ತಮ್ಮ ಮುಂಬರುವ ಚಿತ್ರದ ಕುರಿತು ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ʻಪಟನಾ ಶುಕ್ಲಾʼ ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಇದೀಗ ಈ ಪೋಸ್ಟ್‌ಗೆ ಮಾಜಿ ಪತ್ನಿ ಮಲೈಕಾ ಅರೋರಾ (Malaika Arora ) ಮತ್ತು ಗರ್ಲ್‌ ಫ್ರೆಂಡ್‌ ಜಾರ್ಜಿಯಾ ಆಂಡ್ರಿಯಾನಿ ಪ್ರತಿಕ್ರಿಯಿಸಿದ್ದಾರೆ.

ಅರ್ಬಾಜ್ ಅವರು ಕ್ಲಾಪ್‌ ಬೋರ್ಡ್‌ ಹಿಡಿದಿರುವ ಫೋಟೊ ಶೇರ್‌ ಮಾಡಿಕೊಂಡಿದ್ದು, ʻʻನಮ್ಮದೇ ಪ್ರೊಡಕ್ಷನ್‌ನಲ್ಲಿ ʻಪಟನಾ ಶುಕ್ಲಾʼ ಬರುತ್ತಿದೆ. ಚಿತ್ರದ ಚಿತ್ರೀಕರಣ ಭೋಪಾಲ್‌ನಲ್ಲಿ ʼʼಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ನಟಿ ಮಲೈಕಾ ಅರೋರಾ, “ಆಲ್ ದಿ ಬೆಸ್ಟ್ʼʼಎಂದು ಪ್ರತಿಕ್ರಿಯೆ ನೀಡಿದರೆ, ಗರ್ಲ್‌ ಫ್ರೆಂಡ್‌ ಜಾರ್ಜಿಯಾ ಆಂಡ್ರಿಯಾನಿ ಹೃದಯದ ಎಮೋಜಿಯನ್ನು ಕಮೆಂಟ್‌ ಮೂಲಕ ಹೇಳಿದ್ದಾರೆ.

ʻಪಟನಾ ಶುಕ್ಲಾʼ ಚಿತ್ರದಲ್ಲಿ ರವೀನಾ ಟಂಡನ್, ಸತೀಶ್ ಕೌಶಿಕ್, ಮಾನವ್ ವಿಜ್, ಚಂದನ್ ರಾಯ್ ಸನ್ಯಾಲ್ ಮತ್ತು ಅನುಷ್ಕಾ ಕೌಶಿಕ್ ನಟಿಸಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರ 2023ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮಲೈಕಾ ಅರೋರಾ ಮತ್ತು ನಟ ಅರ್ಬಾಜ್ 1998ರಲ್ಲಿ ಮದುವೆ ಆಗಿದ್ದರು. 2017ರಲ್ಲಿ ನಟಿ ವಿಚ್ಛೇದನ ಪಡೆದರು.

ಇದನ್ನೂ ಓದಿ | ಬಾಲಿವುಡ್​ನ ಬಳಕುವ ಬಳ್ಳಿ ಮಲೈಕಾ ಅರೋರಾ ಜನುಮ ದಿನ ಸಂಭ್ರಮದಲ್ಲಿ

ಸದ್ದಿಲ್ಲದೆ ಮದುವೆ ತಯಾರಿಯಲ್ಲಿದ್ದಾರಾ ನಟಿ ಮಲೈಕಾ?
ಈ ಹಿಂದೆ ಅಷ್ಟೇ ನಟಿ ಮಲೈಕಾ ಅರೋರಾ (Malaika Arora) ಅವರ ಪೋಸ್ಟ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗಿವೆ. ನಾಚಿಕೊಂಡಂತಿರುವ ಫೋಟೊ ಪೋಸ್ಟ್‌ ಮಾಡಿರುವ ಮಲೈಕಾ ಅವರು ʻಐ ಸೆಡ್ ಯೆಸ್ʼ ಎಂಬ ಅಡಿಬರಹ ಕೊಟ್ಟಿದ್ದರು. ಈ ಪೋಸ್ಟ್‌ನಿಂದ ಮಲೈಕಾ ಮತ್ತು ಅರ್ಜುನ್ ಜೋಡಿ ಮದುವೆಗೆ ಸೈಲೆಂಟ್ ಆಗಿ ರೆಡಿಯಾಗಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ತಮಗಿಂತ ಹತ್ತು ವರ್ಷ ಚಿಕ್ಕ ವಯಸ್ಸಿನ ಅರ್ಜುನ್‌ ಕಪೂರ್‌ ಅವರೊಂದಿಗೆ ಡಿಸೆಂಬರ್‌ ಹೊತ್ತಿಗೆ ಮಲೈಕಾ ಮದುವೆ ಆಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಅರ್ಜುನ್‌ ಮತ್ತು ಮಲೈಕಾ ಜತೆಗೆ ವಾಸವಿದ್ದು, ಮದುವೆಯಷ್ಟೇ ಆಗಬೇಕಿದೆ.

ಇದನ್ನೂ ಓದಿ | Malaika Arora | ʻಐ ಸೆಡ್‌ ಯೆಸ್‌ʼ ಅಂದಿದ್ಯಾಕೆ ನಟಿ ಮಲೈಕಾ? ಸದ್ದಿಲ್ಲದೇ ನಡೀತೀದೆ ಮದುವೆ ತಯಾರಿ!

Exit mobile version