ಬೆಂಗಳೂರು: ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ (Malaika Arora ) ಪ್ರೇಮ ಪಕ್ಷಿಗಳು ಎಂಬುದು ಗೊತ್ತಿರುವ ವಿಚಾರ. ಸಾಕಷ್ಟು ವರ್ಷಗಳಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ. ಇದೀಗ ಮಲೈಕಾ ಅರೋರಾ ತನ್ನ ಗೆಳೆಯ, ಬಾಲಿವುಡ್ ಸ್ಟಾರ್ ಅರ್ಜುನ್ ಕಪೂರ್ ಅವರ ಖಾಸಗಿ ಫೋಟೊವನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೊವಿನಿಂದಾಗಿ ನಟಿ ಟೀಕೆಗೆ ಗುರಿಯಾಗಿದ್ದಾರೆ. ಅರ್ಜುನ್ ಮಂಚದ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅರ್ಜುನ್ ಅರೆ ನಗ್ನ ಸ್ಥಿತಿಯಲ್ಲಿ ಕಂಡಿದ್ದಾರೆ. ಮಲೈಕಾ ಅರೋರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೊ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ನಟಿಯನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
ನೆಟ್ಟಿಗರೊಬ್ಬರು ಕಮೆಂಟ್‌ನಲ್ಲಿ ʻʻಮಲೈಕಾ ಈ ಫೋಟೊವನ್ನು ನಮಗೆ ಯಾಕೆ ತೋರಿಸಬೇಕು? ನಗ್ನ ಅರ್ಜುನನನ್ನು ನೋಡಲು ನಾವು ಬಯಸುವುದಿಲ್ಲ. ನಾವು ಬಟ್ಟೆ ಧರಿಸಿದವರನ್ನು ಸಹಿಸುವುದಿಲ್ಲʼʼಎಂದರೆ, ಮತ್ತೊಬ್ಬರು “ಮಲೈಕಾ ತನ್ನ ಸಾರ್ವಜನಿಕ ಖಾತೆಯಲ್ಲಿ ಪೋಸ್ಟ್ ಮಾಡಿದಾಗ ಅವರು ಕುಡಿದಿರಬೇಕು, ಇದು ನಾಚಿಕೆಗೇಡಿನ ಸಂಗತಿ” ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Malaika Arora: ಹೀಗಿತ್ತು NMACC ಉದ್ಘಾಟನಾ ಸಮಾರಂಭದಲ್ಲಿ ಮಲೈಕಾ ಅರೋರಾ ರಾಯಲ್ ಔಟ್ ಫಿಟ್
1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆ ಆಗಿದ್ದರು ಮಲೈಕಾ. ಅನಂತರ ವಿಚ್ಛೇದನ ಪಡೆದರು. ಕೆಲವು ವರ್ಷಗಳ ಕಾಲ ಒಂಟಿಯಾಗೇ ಇದ್ದ ನಟಿ , ನಂತರದಲ್ಲಿ ಅರ್ಜುನ್ ಅವರೊಂದಿಗೆ ಡೇಟಿಂಗ್‌ನಲ್ಲಿ ತೊಡಗಿಸಿಕೊಂಡರು. ಅರ್ಬಾಜ್ ಖಾನ್ ಮತ್ತು ಮಲೈಕಾಗೆ ಒಬ್ಬ ಪುತ್ರನಿದ್ದಾನೆ. ಮಲೈಕಾ ಮತ್ತು ಅರ್ಜುನ್ ಅವರ ವಯಸ್ಸಿನ ಅಂತರದಿಂದಾಗಿ ಆಗಾಗ್ಗೆ ಟ್ರೋಲ್ ಆಗುತ್ತಾರೆ. ಅರ್ಜುನ್ ಮಲೈಕಾಗಿಂತ ಸುಮಾರು 12 ವರ್ಷ ಚಿಕ್ಕವರು. ಮಲೈಕಾಗೆ 49 ವರ್ಷವಾದರೆ, ಅರ್ಜುನ್‌ಗೆ 37 ವರ್ಷ.