ಬೆಂಗಳೂರು: ನಟಿ ಮಲೈಕಾ ಅರೋರಾ (Malaika Arora) ಮತ್ತು ಅವರ ಮಾಜಿ ಪತಿ ಅರ್ಬಾಜ್ ಖಾನ್ ( Arbaaz Khan) ಅವರ ಮಗ ಅರ್ಹಾನ್ ಖಾನ್ ಅವರ ʻಪಾಡ್‌ಕಾಸ್ಟ್ ದಮ್ ಬಿರಿಯಾನಿʼಯ (‘Dumb Biryani’) ಎರಡನೇ ಸಂಚಿಕೆ ಬಿಡುಗಡೆಯಾಗಿದೆ. ಕಾರ್ಯಕ್ರಮದಲ್ಲಿ, ತಾಯಿ-ಮಗ ಇಬ್ಬರೂ ಪರಸ್ಪರ ಕೆಲವು ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಮಾಜಿ ಪತಿ ಅರ್ಬಾಜ್ ಖಾನ್‌ರಿಂದ ಮಗ ಯಾವ ಗುಣಗಳನ್ನು ಅನುವಂಶಿಕವಾಗಿ ಪಡೆದಿದ್ದಾರೆ ಎಂಬುದನ್ನು ಮಲೈಕಾ ಅರೋರಾ ಹೇಳಿದ್ದಾರೆ.
ಮೊದಲಿಗೆ ಅರ್ಹಾನ್ ಮಲೈಕಾಗೆ ತಂದೆ ಅರ್ಬಾಜ್ ಅವರ ಕೆಲವು ಗುಣಗಳ ಬಗ್ಗೆ ಕೇಳಿದರು. ಅದಕ್ಕೆ ಮಲೈಕಾ ಉತ್ತರಿಸಿ ʻʻನಿನ್ನ ಮ್ಯಾನರಿಸಂ ನಿನ್ನ ತಂದೆಯಂತೆಯೇ ಇದೆ. ಇಬ್ಬರು ಹಲವು ವಿಚಾರಗಳಿಗೆ ಹೋಲಿಕೆ ಇದೆ. ಅರ್ಬಾಜ್ ಅವರ ಮ್ಯಾನರಿಸಂ ಅಷ್ಟಾಗಿ ಅಟ್ರ್ಯಾಕ್ಟಿವ್ ಆಗಿಲ್ಲʼʼಎಂದಿದ್ದಾರೆ.
ಮಲೈಕಾ ಮಾತು ಮುಂದುವರಿಸಿ ʻʻಅರ್ಬಾಜ್ ನ್ಯಾಯಯುತ ವ್ಯಕ್ತಿ. ಅವರು ಎಂದಿಗೂ ವಿಷಯಗಳ ಬಗ್ಗೆ ಅತಿಯಾಗಿ ಯೋಚಿಸಲು ಹೋಗುವುದಿಲ್ಲ, ಕೆಲವು ವಿಷಯಗಳ ಬಗ್ಗೆ ತುಂಬಾ ಸ್ಪಷ್ಟವಾಗಿರುತ್ತಾರೆ. ಆ ಗುಣ ನಿನ್ನಲ್ಲಿ ಕೂಡ ಇದೆʼʼಎಂದಿದ್ದಾರೆ.
ಇದನ್ನೂ ಓದಿ: Loksabha Election 2024: ಕೆ ಅಣ್ಣಾಮಲೈ ಗೆಲುವು ಸಾಧಿಸಬಹುದೆ? ಪ್ರಬಲ ಪೈಪೋಟಿಗೆ ಸಾಕ್ಷಿಯಾಗಲಿದೆ ಕೊಯಮತ್ತೂರು
ಸಾಮಾನ್ಯವಾಗಿ ತಾಯಂದಿರು ಹೆಚ್ಚಾಗಿ ಮಗಳ ಜತೆಯಲ್ಲಿ ಸೆಕ್ಸ್, ಮದುವೆ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಆದರೆ ಮಗನ ಜತೆಯಲ್ಲಿ ಮದುವೆ ವಿಚಾರದ ಬಗ್ಗೆ ಚರ್ಚಿಸಿದರೂ ಸೆಕ್ಸ್ ವಿಚಾರಗಳನ್ನು ಚರ್ಚಿಸಲು ಮುಜುಗರಪಡುತ್ತಾರೆ. ಆದರೆ ನಟಿ ಮಲೈಕಾ ಅರೋರಾ (Malika Arora) ಮಾತ್ರ ಮಗನ ಜತೆ ಸೆಕ್ಸ್ ವಿಚಾರ ಮಾತನಾಡಿದರು. ಮಲೈಕಾ ಅವರು ಮಗ ಅರ್ಹಾನ್ ಬಳಿ “ನಿಮ್ಮ ಕನ್ಯತ್ವವನ್ನು ಯಾವಾಗ ಕಳೆದುಕೊಂಡಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅರ್ಹಾನ್ “ವಾವ್” ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾನೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಮಲೈಕಾ ತನಗೆ ಪ್ರಾಮಾಣಿಕವಾದ ಉತ್ತರ ಬೇಕು ಎಂದು ಕೇಳಿದ್ದಾರೆ.
ಆದರೆ ಕೆಲವರು ಮಲೈಕಾ ಅವರ ವಿರುದ್ಧ ಕಿಡಿಕಾರಿದ್ದಾರೆ. ʻಪೋಷಕರು ಮಗನ ಬಳಿ ತನ್ನ ಕನ್ಯತ್ವ ಯಾವಾಗ ಕಳೆದುಕೊಂಡೆ ಎಂದು ಕೇಳುವುದು ತುಂಬಾ ಅಸಹ್ಯಕರವಾದ ವಿಷಯ ಎಂದರೆ, ಇನ್ನೊಬ್ಬರು ಪಾಶ್ಚಿಮಾತ್ಯರ ಜೀವನಶೈಲಿಯನ್ನು ನಕಲು ಮಾಡುತ್ತಿದ್ದಾರೆʼ ಎಂದು ಮಲೈಕಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅರ್ಹಾನ್ ಖಾನ್ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಏಕೈಕ ಪುತ್ರ, ಈತ 2002ರಲ್ಲಿ ಜನಿಸಿದನು. ಅರ್ಹಾನ್ ಖಾನ್ ಮಲೈಕಾ ಅರೋರಾ ಅವರು ವಿವಾಹವಾಗಿ 19 ವರ್ಷಗಳ ಕಾಲ ಜೊತೆಗಿದ್ದರು. ನಂತರ 2016ರಲ್ಲಿ ಬೇರ್ಪಟ್ಟು 2017ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡರು. ನಂತರ ಅರ್ಬಾಜ್ ಖಾನ್ ಮೇಕಪ್ ಆರ್ಟಿಸ್ಟ್ ಶುರಾ ಕಾನ್ ಅವರನ್ನು ಮದುವೆಯಾದರು. ಮಲೈಕಾ ಅರೋರಾ ಅವರು ಮಾತ್ರ ವರ್ಷಗಳಿಂದ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.