Site icon Vistara News

Kundara Johny: ಮಲಯಾಳಂ ಖ್ಯಾತ ನಟ ಕುಂದರ ಜಾನಿ ಹೃದಯಾಘಾತದಿಂದ ನಿಧನ

Kundara Johny

ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ನೆಗೆಟಿವ್‌ ಶೆಡ್‌ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದ ಖ್ಯಾತ ನಟ ಕುಂದರ ಜಾನಿ (Kundara Johny) ಅವರು ಅ.17ರಂದು ಕೇರಳದ ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಟ ಹೃದಯಾಘಾತಕ್ಕೆ ಒಳಗಾಗೊದ್ದರು ಎನ್ನಲಾಗಿದೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. 1991ರ ಚಲನಚಿತ್ರ ಗಾಡ್‌ಫಾದರ್‌ ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದರು. ಅಂತ್ಯಕ್ರಿಯೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಕುಟುಂಬ ಹಂಚಿಕೊಂಡಿಲ್ಲ.

ಹೃದಯಾಘಾತಕ್ಕೆ ಒಳಗಾದ ಕುಂದರ ಜಾನಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಟನ ನಿಧನಕ್ಕೆ ಕೇರಳ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಸಂತಾಪ ಸೂಚಿಸಿದ್ದಾರೆ. ಜಾನಿ ತಮ್ಮ ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

1979ರಲ್ಲಿ ʻನಿತ್ಯ ವಸಂತಂʼ ಸಿನಿಮಾ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದರು. ಮಲಯಾಳಂ ಚಲನಚಿತ್ರಗಳಲ್ಲಿ ನೆಗೆಟಿವ್‌ ಪಾತ್ರಗಳನ್ನು ಹೆಚ್ಚಾಗಿ ಅಭಿನಯಿಸಿದ್ದರು. ವಿಶೇಷವಾಗಿ ಬ್ಲಾಕ್‌ಬಸ್ಟರ್‌ಗಳಾದ ʻಕಿರೀಡಮ್ʼ ಮತ್ತು ʻಚೆಂಕೋಲ್‌ʼನಲ್ಲಿ ಕಾಣಿಸಿಕೊಂಡರು. ʻವಾಜ್ಕೈ ಚಕ್ರಂʼ ಮತ್ತು ʻನಾಡಿಗನ್‌ನಂತಹʼ ತಮಿಳು ಚಿತ್ರಗಳನ್ನು ಸಹ ಮಾಡಿದ್ದಾರೆ.

ಇದನ್ನೂ ಓದಿ: Priyanka Upendra: ಪ್ರಿಯಾಂಕಾ ನಟನೆಯ ‘ಕ್ಯಾಪ್ಚರ್’ ಸಿನಿಮಾ; 60 ಅಡಿ ಎತ್ತರದ ಟೈಟಲ್ ಪೋಸ್ಟರ್ ರಿಲೀಸ್!

ಮೋಹನ್‌ಲಾಲ್ ಅಭಿನಯದ ʻಕಿರೀಡಂʼನಲ್ಲಿ ಕುಂದರ ಜಾನಿಯ ಪಾತ್ರ ಪರಮೇಶ್ವರನ್. ಈ ಪಾತ್ರ ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತ್ತು. ಹಲೋ, ಭಾರ್ಗವಚರಿತಂ ಮೂನ್ನಂ ಖಂಡಂ, ತರದಾಸ್, ಭರತ್ ಚಂದ್ರನ್ ಐಪಿಎಸ್, ದಾದಾ ಸಾಹೇಬ್, ಕ್ರೈಮ್ ಫೈಲ್, ತಚಿಲೇದತ್ ಚುಂದನ್, ಸಮಂತಾರಂ, ವರ್ಣಪ್ಪಕಿಟ್ಟ್, ಸಾಗರಂ ಸಾಕ್ಷಿ, ಮತ್ತು ಆನವಲ್ ಮೋತಿರಾಮ್ ಇವರ ಇತರ ಕೆಲವು ಗಮನಾರ್ಹ ಚಲನಚಿತ್ರಗಳಾಗಿವೆ.

Exit mobile version