Site icon Vistara News

KG George: ಮಲಯಾಳಂ ಖ್ಯಾತ ನಿರ್ದೇಶಕ ಕೆ ಜಿ ಜಾರ್ಜ್ ಇನ್ನಿಲ್ಲ!

KG George passes away

ಬೆಂಗಳೂರು: ಮಲಯಾಳಂನ ಖ್ಯಾತ ನಿರ್ದೇಶಕ ಕೆ ಜಿ ಜಾರ್ಜ್ (KG George) ಅವರು ಸೆ. 24ರಂದು ನಿಧನರಾದರು. ಅವರಿಗೆ ಕೇವಲ 77 ವರ್ಷ ವಯಸ್ಸಾಗಿತ್ತು. ಸೆಪ್ಟೆಂಬರ್ 24ರಂದು ಎರ್ನಾಕುಲಂನ ಕಾಕ್ಕನಾಡ್‌ನಲ್ಲಿರುವ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪಾರ್ಶ್ವವಾಯುವಿಗೆ ಕೆ ಜಿ ಜಾರ್ಜ್ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಕೆಜಿ ಜಾರ್ಜ್ ಚಿತ್ರರಂಗದಲ್ಲಿ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದರು. 1975ರಲ್ಲಿ ತೆರೆ ಕಂಡ ʻಸ್ವಪ್ನಾದನಂʼ ಚಿತ್ರದ ಮೂಲಕ ಸಾಕಷ್ಟು ಹೆಸರನ್ನು ಪಡೆದರು. ಈ ಸಿನಿಮಾ ಕೇರಳ ರಾಜ್ಯದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ಮಲಯಾಳಂನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿತು. ಚಿತ್ರವು ವಿಮರ್ಶಾತ್ಮಕ ಹಿಟ್ ಮಾತ್ರವಲ್ಲದೆ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಂಡಿತು. KG ಜಾರ್ಜ್‌ರ ಇತರ ಗಮನಾರ್ಹ ಚಿತ್ರಗಳೆಂದರೆ ಮೇಳ (Mela), ಯವನಿಕಾ (Yavanika), ಲೇಖನುದೆ ಮರಣಂ ಓರು ಫ್ಲ್ಯಾಶ್‌ಬ್ಯಾಕ್ (Lekhayude Maranam Oru Flashback), ಆದಮಿಂತೆ ವಾರಿಯೆಲ್ಲು (Adaminte Vaariyellu), ಮತ್ತು ಮತ್ತೋರಲ್ (Mattoral) ಸೇರಿವೆ.

ನಮ್ಮ ದೇಶದ ಶ್ರೇಷ್ಠ ಮತ್ತು ಪ್ರಭಾವಿ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು. RIP ಕೆಜಿ ಜಾರ್ಜ್ ಸರ್” ಎಂದು ಬರಹಗಾರ ವಿವೇಕ್ ರಂಜಿತ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: KL Rahul: ವಿಶ್ವಕಪ್​ ಟಿಕೆಟ್​ ಬಗ್ಗೆ ಆಪ್ತರಿಗೆ ಸ್ಪಷ್ಟ ಸಂದೇಶ ರವಾನಿಸಿದ ಕೆ.ಎಲ್​ ರಾಹುಲ್

ಮಲಯಾಳಂ ಸಿನಿರಂಗದ ಹಲವರು ದುಃಖ ವ್ಯಕ್ತಪಡಿಸಿದ್ದಾರೆ. ನಟ ಮಮ್ಮುಟ್ಟಿ ಜತೆಗೆ ಹೆಚ್ಚು ಆಪ್ತರಾಗಿದ್ದ ಅವರು ಹೆಚ್ಚು ಸಿನಿಮಾಗಳಲ್ಲಿ ನಾಯಕನನ್ನಾಗಿ ಮಾಡಿದ್ದಾರೆ.

Exit mobile version