Site icon Vistara News

Oscars 2024: ಆಸ್ಕರ್‌ ರೇಸ್‌ನಿಂದ ಹೊರ ಬಿದ್ದ ಮಲಯಾಳಂ ʻ2018ʼ ಸಿನಿಮಾ

Malayalam hit 2018 knocked out of Oscars race

ಬೆಂಗಳೂರು: ಸೆಪ್ಟೆಂಬರ್ 2023ರಲ್ಲಿ (Oscars 2024), ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ʻ2018ʼ ಸಿನಿಮಾವನ್ನು ಆಸ್ಕರ್‌ ರೇಸ್‌ಗೆ ಆಯ್ಕೆ ಮಾಡಿತ್ತು. ಆಸ್ಕರ್‌ 2024ರ (Oscars 2024) ಸ್ಪರ್ಧೆಗೆ ಕಳಿಸಲಾಗಿತ್ತು. ಆದರೆ ಅಂತಿಮ ಸುತ್ತಿನ ಸ್ಪರ್ಧೆಗೆ ಎಂಟ್ರಿ ಪಡೆಯಲು ‘2018’ ಸಿನಿಮಾ (2018 Movie) ಸೋತಿದೆ. ಆಸ್ಕರ್​ ಸ್ಪರ್ಧೆಯ ‘ಅಂತಾರಾಷ್ಟ್ರೀಯ ಫೀಚರ್​ ಫಿಲ್ಮ್​’ ವಿಭಾಗಕ್ಕೆ ಬೇರೆ ಬೇರೆ ದೇಶಗಳಿಂದ ಸಿನಿಮಾಗಳನ್ನು ಕಳಿಸಲಾಗುತ್ತದೆ. ಇಷ್ಟು ವರ್ಷ ಭಾರತದಿಂದ ಯಾವ ಸಿನಿಮಾ ಕೂಡ ಆಯ್ಕೆ ಆಗಿರಲಿಲ್ಲ. ಆದರೆ 2018 ಸಿನಿಮಾಗೆ ಆಸ್ಕರ್‌ ಸಿಗಬಹುದು ಎಂದು ಭಾರತೀಯರು ಅಂದು ಕೊಂಡಿದ್ದರು. ಇದೀಗ ನಿರಾಸೆಯಿಂದ ಭಾರತೀಯರು ಸೋಷಿಯಲ್‌ ಮೀಡಿಯಾ ಮೂಲಕ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

15 ಸಿನಿಮಾಗಳು ಮುಂದಿನ ಸುತ್ತಿಗೆ ಆಯ್ಕೆ ಆಗಿವೆ. ಇವುಗಳ ಪೈಕಿ ಉಕ್ರೇನ್​, ಜರ್ಮನಿ, ಯುನೈಟೆಕ್​ ಕಿಂಗ್​ಡಂ ಮುಂತಾದ ದೇಶಗಳ ಸಿನಿಮಾಗಳು ಇವೆ. ಕಳೆದ ವರ್ಷ ಪಾನ್​ ನಳೀನ್​ ನಿರ್ದೇಶನ ಮಾಡಿದ, ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಭಾರತದಿಂದ ಸ್ಪರ್ಧೆಗೆ ಹೋಗಿತ್ತು. ಅದು ಕೂಡ ಅಂತಿಮ ಸುತ್ತಿಗೆ ಆಯ್ಕೆ ಆಗಲಿಲ್ಲ. 2024ರ ಜನವರಿಗೆ 23ರಂದು ‘96ನೇ ಆಸ್ಕರ್​ ಪ್ರಶಸ್ತಿ’ಯ ಎಲ್ಲ ವಿಭಾಗಗಳ ನಾಮಿನೇಷನ್​ ಪಟ್ಟಿ ಘೋಷಣೆ ಆಗಲಿದೆ. ಮಾರ್ಚ್​ 10ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ‘ಬಾರ್ಬಿ’ ಮತ್ತು ‘ಆಪನ್​ಹೈಪರ್​’ ಸಿನಿಮಾಗಳ ಮೇಲೆ ನಿರೀಕ್ಷೆ ಜಾಸ್ತಿ ಇದೆ. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಿಂದ ಎಬಿಸಿಯಲ್ಲಿ ನೇರ ಪ್ರಸಾರವಾಗುತ್ತದೆ. ಕಾರ್ಯಕ್ರಮ ಎಂದಿಗಿಂತಲೂ ಒಂದು ಗಂಟೆ ಮುಂಚಿತವಾಗಿ ಅಂದರೆ ಸಂಜೆ 7 ಗಂಟೆಗೆ ಆರಂಭವಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Oscars 2024: ‘ಆಸ್ಕರ್‌’ಗೆ ಪ್ರವೇಶ ಪಡೆದ ಮಲಯಾಳಂ ಸಿನಿಮಾ; ನೀವೂ ಇದನ್ನು ನೋಡಿರುತ್ತೀರಿ!

ಜೂಡ್​ ಆಂಥೊನಿ ಜೋಸೆಫ್​ ನಿರ್ದೇಶನದ ನೈಜ ಘಟನೆ ಆಧಾರಿತ ಮಲಯಾಳಂ `2018′ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಕೇರಳ ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿತ್ತು.

ಟೊವಿನೋ ಥಾಮಸ್​ ಜತೆ ಆಸಿಫ್​ ಅಲಿ, ಅಪರ್ಣಾ ಬಾಲಮುರಳಿ, ವಿನೀತ್​ ಶ್ರೀನಿವಾಸನ್​, ಕಲೈಯರಸನ್​, ಸುದೇಶ್​, ಅಜು ವರ್ಗೀಸ್​, ತನ್ವಿ ರಾಮ್​, ಗೌತಮಿ ನಾಯರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

2018 ಸಿನಿಮಾ ಕಥೆ ಏನು?

‘2018’ ಸಿನಿಮಾ 2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹವನ್ನು ಆಧರಿಸಿ ಮಾಡಿದ ಸಿನಿಮಾ ಇದಾಗಿದೆ. ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟದ ಘಟನೆಗಳು ಇವೆ. ಅತೀ ಕಷ್ಟದ ಸಮಯದಲ್ಲೂ ಕೇರಳದ ಪ್ರತಿಯೊಬ್ಬರು ಹೇಗೆ ನಡೆದುಕೊಂಡರು ಎಂಬ ವಿವರ ಈ ಸಿನಿಮಾದಲ್ಲಿ. ‘ಪ್ರತಿಯೊಬ್ಬರೂ ಹೀರೊ’ ಎಂಬ ಟ್ಯಾಗ್​ಲೈನ್​ ಗಮನ ಸೆಳೆದಿತ್ತು. 2018ರ ಪ್ರವಾಹದಲ್ಲಿ ಕೇರಳದ 400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಅನೇಕರು ನಾಪತ್ತೆಯಾದರು. 1924ರ ಬಳಿಕ ಕೇರಳದಲ್ಲಿ ಉಂಟಾಗಿದ್ದ ಅತಿ ಭೀಕರ ಪ್ರವಾಹ ಅದಾಗಿತ್ತು.

Exit mobile version