ಮಲಯಾಳಂ ನಟ ಕಲಾಭವನ್ ಹನೀಫ್ (Kalabhavan Haneef ) ಅವರು ನವೆಂಬರ್ 9ರ ಗುರುವಾರ ಕೊಚ್ಚಿಯಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕಲಾಭವನ್ ಹನೀಫ್ ಅವರು ಕಲಾಭವನದ ಮಿಮಿಕ್ರಿ ತಂಡದಲ್ಲಿ ಮಿಮಿಕ್ರಿ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರಿಗೆ ಅಪಾರ ಅಭಿಮಾನ ಬಳಗ ಹೊಂದಿದ್ದರು. ನಟ ಟಿನಿ ಟಾಮ್ ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.
ಹನೀಫ್ ಕೊಚ್ಚಿಯ ಮಟ್ಟಂಚೇರಿ ಮೂಲದವರು. ಚಿಕ್ಕ ವಯಸ್ಸಿನಲ್ಲೇ ಮಿಮಿಕ್ರಿ ಮತ್ತು ಪ್ರದರ್ಶನ ಕಲೆಗಳಲ್ಲಿ ತೊಡಗಿಸಿಕೊಂಡರು. ಕೊಚ್ಚಿನ್ ಕಲಾಭವನದ ಪ್ರಮುಖ ಸದಸ್ಯರಾಗಿದ್ದರು 1991 ರ ಚಲನಚಿತ್ರ ಮಿಮಿಕ್ಸ್ ಪರೇಡ್‌ನೊಂದಿಗೆ ತಮ್ಮ ನಟನೆಯನ್ನು ಪ್ರಾರಂಭಿಸಿದರು, ಇದರಲ್ಲಿ ಸಿದ್ದಿಕ್, ಇನೋಸೆಂಟ್, ಜಗದೀಶ್, ಅಶೋಕನ್ ಮತ್ತು ಇನ್ನೂ ಅನೇಕ ಪ್ರಮುಖ ತಾರೆಗಳು ನಟಿಸಿದ್ದರು.
ಇದನ್ನೂ ಓದಿ: Darlyn Morais: ಮುಖಕ್ಕೆ ಜೇಡ ಕಚ್ಚಿ ಖ್ಯಾತ ಯುವ ಗಾಯಕ ನಿಧನ!
தமிழில் நகைச்சுவை நடிகர் வடிவேலு போன்று மலையாள நெட்டிசன்கள் மீம்ஸ் உருவாக்கும் அளவுக்கு காமெடி ஏரியாவில் கலக்கிவந்தார் கலாபவன் ஹனீப். #KalabhavanHaneef | #RIP https://t.co/5mLr2ruq7m
— சினிமா விகடன் (@CinemaVikatan) November 10, 2023
Actor and mimicry artist Kalabhavan Haneef no more https://t.co/EtATwGYML2
— Sooraj (@zipview) November 10, 2023
ದಿಲೀಪ್ ಅವರ 2001ರ ಹಾಸ್ಯ-ನಾಟಕ ಚಲನಚಿತ್ರ ಈ ಪರಾಕ್ಕುಂ ತಾಲಿಕಾದಲ್ಲಿ ವರನ ಪಾತ್ರದ ಮೂಲಕ ಹನೀಫ್ ಹೆಸರು ಗಳಿಸಿದ್ದರು. ಪಾಂಡಿಪ್ಪಡಾ, ಚೊಟ್ಟಾ ಮುಂಬೈ, ಉಸ್ತಾದ್ ಹೋಟೆಲ್, ದೃಶ್ಯಂ ಮತ್ತು 2018 ಸಿನಿಮಾ ಸೇರಿದಂತೆ ಇತರ ಪ್ರಮುಖ ಚಲನಚಿತ್ರಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ.