ಬೆಂಗಳೂರು: ಸಾಮಾನ್ಯವಾಗಿ ತಾಯಂದಿರು ಹೆಚ್ಚಾಗಿ ಮಗಳ ಜತೆಯಲ್ಲಿ ಸೆಕ್ಸ್, ಮದುವೆ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಆದರೆ ಮಗನ ಜತೆಯಲ್ಲಿ ಮದುವೆ ವಿಚಾರದ ಬಗ್ಗೆ ಚರ್ಚಿಸಿದರೂ ಸೆಕ್ಸ್ ವಿಚಾರಗಳನ್ನು ಚರ್ಚಿಸಲು ಮುಜುಗರಪಡುತ್ತಾರೆ. ಆದರೆ ನಟಿ ಮಲೈಕಾ ಅರೋರಾ (Malika Arora) ಮಾತ್ರ ಮಗನ ಜತೆ ಸೆಕ್ಸ್ ವಿಚಾರ ಮಾತನಾಡಿ ಸುದ್ದಿಯಾಗಿದ್ದಾರೆ.
ಹೌದು, ನಟಿ ಮಲೈಕಾ ಅರೋರಾ ಮತ್ತು ಅವರ ಮಾಜಿ ಪತಿ ಅರ್ಬಾಜ್ ಖಾನ್ ಅವರ ಮಗ ಅರ್ಹಾನ್ ಖಾನ್ ಅವರ ʻವೋಡ್ಕಾಸ್ಟ್ ದಮ್ ಬಿರಿಯಾನಿʼಯ ಎರಡನೇ ಸಂಚಿಕೆ ಬಿಡುಗಡೆಯಾಗಿದೆ. ಮೊದಲ ಸಂಚಿಕೆಯಲ್ಲಿ ಅರ್ಬಾಜ್ ಖಾನ್ ಮತ್ತು ಅವರ ಸಹೋದರ ಸೋಹೈಲ್ ಖಾನ್ ಕಾಣಿಸಿಕೊಂಡಿದ್ದರು. ಆದರೆ ಎರಡನೇ ಸಂಚಿಕೆಯಲ್ಲಿ ಮಲೈಕಾ ಮತ್ತು ಅವರ ಮಗ ಅರ್ಹಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ನಟಿ ಮಲೈಕಾ ತನ್ನ ಮಗನ ಜೊತೆ ಸೆಕ್ಸ್ ಮತ್ತು ಮದುವೆಗೆ ಸಂಬಂಧಪಟ್ಟ ಬಗ್ಗೆ ಚರ್ಚೆ ನಡೆಸಿದ್ದಾರೆ.
ನಿಮ್ಮ ಕನ್ಯತ್ವವನ್ನು ಯಾವಾಗ ಕಳೆದುಕೊಂಡಿದ್ದೀರಿ?
ದಮ್ ಬಿರಿಯಾನಿಯ ಪ್ರೋಮೊ ಅನ್ನು ಇನ್ ಸ್ಟಾಗ್ರಾಂನಲ್ಲಿ ಏಪ್ರಿಲ್ 16ರಂದು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಮಲೈಕಾ ಅವರು ಮಗ ಅರ್ಹಾನ್ ಬಳಿ “ನಿಮ್ಮ ಕನ್ಯತ್ವವನ್ನು ಯಾವಾಗ ಕಳೆದುಕೊಂಡಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅರ್ಹಾನ್ “ವಾವ್” ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾನೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಮಲೈಕಾ ತನಗೆ ಪ್ರಾಮಾಣಿಕವಾದ ಉತ್ತರ ಬೇಕು ಎಂದು ಕೇಳಿದ್ದಾರೆ.
ಈ ಪ್ರೋಮೊ ವಿಡಿಯೊಗೆ ವೀಕ್ಷಕರಿಂದ ಸಾಕಷ್ಟು ಮಿಶ್ರ ಪ್ರತಿಕ್ರಿಯೆ ಬಂದಿದೆ. ಅದರಲ್ಲಿ ಒಬ್ಬರು ʻಈ ಎಪಿಸೋಡ್ ಗಾಗಿ ಕಾತುರದಿಂದ ಕಾಯುತ್ತಿರುವುದಾಗಿʼ ತಿಳಿಸಿದ್ದಾರೆ. ಇನ್ನೊಬ್ಬರು ತಾಯಿ ತಾಯಿಯಾಗುತ್ತಿದ್ದಾಳೆ ಎಂದಿದ್ದಾರೆ.
ಆದರೆ ಕೆಲವರು ಮಲೈಕಾ ಅವರ ವಿರುದ್ಧ ಕಿಡಿಕಾರಿದ್ದಾರೆ. ʻಪೋಷಕರು ಮಗನ ಬಳಿ ತನ್ನ ಕನ್ಯತ್ವ ಯಾವಾಗ ಕಳೆದುಕೊಂಡೆ ಎಂದು ಕೇಳುವುದು ತುಂಬಾ ಅಸಹ್ಯಕರವಾದ ವಿಷಯ ಎಂದರೆ, ಇನ್ನೊಬ್ಬರು ಪಾಶ್ಚಿಮಾತ್ಯರ ಜೀವನಶೈಲಿಯನ್ನು ನಕಲು ಮಾಡುತ್ತಿದ್ದಾರೆʼ ಎಂದು ಮಲೈಕಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Samantha Kickboxing: ನಟನೆ ಬಿಟ್ಟು `ಕಿಕ್ ಬಾಕ್ಸಿಂಗ್’ ಕಡೆಗೆ ಗಮನಹರಿಸಿದ್ರಾ ನಟಿ ಸಮಂತಾ?
ಅರ್ಹಾನ್ ಖಾನ್ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಏಕೈಕ ಪುತ್ರ, ಈತ 2002ರಲ್ಲಿ ಜನಿಸಿದನು. ಅರ್ಹಾನ್ ಖಾನ್ ಮಲೈಕಾ ಅರೋರಾ ಅವರು ವಿವಾಹವಾಗಿ 19 ವರ್ಷಗಳ ಕಾಲ ಜೊತೆಗಿದ್ದರು. ನಂತರ 2016ರಲ್ಲಿ ಬೇರ್ಪಟ್ಟು 2017ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡರು. ನಂತರ ಅರ್ಬಾಜ್ ಖಾನ್ ಮೇಕಪ್ ಆರ್ಟಿಸ್ಟ್ ಶುರಾ ಕಾನ್ ಅವರನ್ನು ಮದುವೆಯಾದರು. ಮಲೈಕಾ ಅರೋರಾ ಅವರು ಮಾತ್ರ ವರ್ಷಗಳಿಂದ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.