Site icon Vistara News

Actor Mammootty: ಮಮ್ಮುಟ್ಟಿ ಹೊಸ ಲುಕ್‌ ಕಂಡು ದಂಗಾದ ಫ್ಯಾನ್ಸ್‌; ‘ಭ್ರಮಯುಗಂ’ ಫಸ್ಟ್ ಲುಕ್ ಪೋಸ್ಟರ್ ಔಟ್‌!

Mammootty First-look Poster Of Bramayugam

ಬೆಂಗಳೂರು: ಮಲಯಾಳಂನ ಹಿರಿಯ ನಟ ಮಮ್ಮುಟ್ಟಿ (Actor Mammootty) 72ನೇ ವಸಂತಕ್ಕೆ ಸೆ.7ರಂದು ಕಾಲಿಟ್ಟರು. ಹುಟ್ಟು ಹಬ್ಬದ ದಿನ ತಮ್ಮ ಮುಂಬರುವ ಭ್ರಮಯುಗಂ (Bramayugam) ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದರು. ಪೋಸ್ಟರ್‌ ನೋಡುವಾಗ ಗುರುತಿಸಲಾಗದಂತೆ ಇರುವ ರಗಡ್‌ ಲುಕ್‌ನಲ್ಲಿ ಮಮ್ಮುಟ್ಟಿ ಕಂಡಿದ್ದಾರೆ. ಲುಕ್‌ ಕಂಡು ಸಿನಿಮಾದ ಪಾತ್ರದ ಬಗ್ಗೆ ಅವರ ಫ್ಯಾನ್ಸ್‌ಗೆ ಕುತೂಹಲ ಹೆಚ್ಚಾಗಿದೆ.

ನಟ ಮಮ್ಮುಟ್ಟಿ ತುಂಬಾ ವರಟಾದ ರಗಡ್‌ ಲುಕ್‌ನಲ್ಲಿ ಕಂಡಿದ್ದು, ವರದಿಗಳ ಪ್ರಕಾರ, ಹಾವುಗಳ ನಡುವೆ ವಾಸಿಸುವ ಮಾಂತ್ರಿಕನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಮಮ್ಮುಟ್ಟಿ ನಾಯಕ ಹಾಗೂ ಖಳನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿಯನ್ನು ಹಂಚಿಕೊಂಡಿಲ್ಲ. ಭ್ರಮಯುಗಂ ಸಿನಿಮಾವನ್ನು ರಾಹುಲ್ ಸದಾಶಿವನ್ ನಿರ್ದೇಶಿಸಿದ್ದಾರೆ. ʻಭೂತಕಾಲಂʼನಂತಹ ಭಯಾನಕ ಚಲನಚಿತ್ರಗಳಲ್ಲಿ ಈ ಮುಂಚೆ ಕೆಲಸ ಮಾಡಿದ್ದರು. ಚಿತ್ರದಲ್ಲಿ ಅರ್ಜುನ್ ಅಶೋಕನ್, ಸಿದ್ಧಾರ್ಥ್ ಭರತನ್ ಮತ್ತು ಅಮಲ್ಡಾ ಲಿಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 2024ರ ಆರಂಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಫ್ಲ್ಯಾನ್‌ ಚಿತ್ರತಂಡ ಹಾಕಿಕೊಂಡಿದೆ.

ಇದನ್ನೂ ಓದಿ: Actor Mammootty: ಮಾಲಿವುಡ್‌ ನಟ ಮಮ್ಮುಟ್ಟಿ ತಾಯಿ ಫಾತಿಮಾ ಇಸ್ಮಾಯಿಲ್ ನಿಧನ

ಮಮ್ಮುಟ್ಟಿ ಅವರ ಹುಟ್ಟುಹಬ್ಬದಂದು ಮಗ ಹಾಗೂ ನಟ ದುಲ್ಕರ್ ಸಲ್ಮಾನ್ ಸ್ಪೆಷಲ್‌ ಫೋಟೊ ಹಂಚಿಕೊಂಡು ವಿಶ್‌ ಮಾಡಿದ್ದರು. ತಂದೆ ಮಗ ಕನ್ನಡಿಯ ಮುಂದೆ ನಿಂತು ನೋಡುತ್ತಿರುವುದನ್ನು ಕಾಣಬಹುದು. ಮಮ್ಮುಟ್ಟಿ ಬಿಳಿ ಕುರ್ತಾ-ಪೈಜಾಮಾದಲ್ಲಿ ಕಾಣಿಸಿಕೊಂಡಿದ್ದರೆ, ದುಲ್ಕರ್ ಬಿಳಿ ಶರ್ಟ್ ಮತ್ತು ಕಪ್ಪು ಡೆನಿಮ್ ಪ್ಯಾಂಟ್ ಧರಿಸಿದ್ದರು.

ಭ್ರಮಯುಗಂ ಹೊರತಾಗಿ, ಮಮ್ಮುಟ್ಟಿ ಅವರು ಕೊಟ್ಟಾಯಂ ಕುಂಜಚ್ಚನ್ 2 ಸಿನಿಮಾ ಹೊಂದಿದ್ದಾರೆ. ಮಹಿ ವಿ ರಾಘವ್ ಮತ್ತು ಕಣ್ಣೂರು ಸ್ಕ್ವಾಡ್ ನಿರ್ದೇಶನದ ಯಾತ್ರಾ 2 ಸಿನಿಮಾ ಕೂಡ ಅವರ ಕೈಯಲ್ಲಿದೆ.

Exit mobile version