Site icon Vistara News

Raj B Shetty: ಮಮ್ಮುಟ್ಟಿ ಜತೆ ನಟಿಸುತ್ತಿದ್ದಾರೆ ರಾಜ್‌ ಬಿ ಶೆಟ್ಟಿ!

Raj B Shetty

ಬೆಂಗಳೂರು: ನಟ ರಾಜ್‌ ಬಿ ಶೆಟ್ಟಿ (Raj B Shetty) ಅವರ `ಟೋಬಿ’ ಸಿನಿಮಾ ಬಿಡುಗಡೆಯಾಗಿ, ಅಷ್ಟೇನೂ ಕಲೆಕ್ಷನ್‌ ಮಾಡಿರಲಿಲ್ಲ. ಅಷ್ಟೋತ್ತಿಗಾಗಲೇ ರಾಜ್‌ ಅವರು ಮಲಯಾಳಂ ಸಿನಿಮಾದಲ್ಲಿ ಬ್ಯುಸಿಯಾದರು. ಮೊದಲ ಮಾಲಿವುಡ್ ಸಿನಿಮಾ ‘ರುಧೀರಂ’ ಶೂಟಿಂಗ್ ಕೂಡ ಮುಗಿದು ರಿಲೀಸ್‌ಗೂ ರೆಡಿಯಾಗಿದೆ. ಇದೀಗ ಮಲಯಾಳಂ ಸ್ಟಾರ್ ಮಮ್ಮುಟ್ಟಿ ಹೊಸ ಸಿನಿಮಾ ‘ಟರ್ಬೊ’ದಲ್ಲಿ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್‌ಸ್ಟಾದಲ್ಲಿ ಈ ಬಗ್ಗೆ ಮಮ್ಮುಟ್ಟಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

‘ಟರ್ಬೊ’ ಸಿನಿಮಾ ನಿರ್ದೇಶಕ ವೈಶಾಖ್ ಜತೆ ಇದು ಮೂರನೇ ಬಾರಿ ಮಮ್ಮುಟ್ಟಿ ಜತೆ ಕೈ ಜೋಡಿಸುತ್ತಿದ್ದಾರೆ. ಪೊಕ್ಕಿರಿ ರಾಜ ಮತ್ತು ಮಧುರ ರಾಜ ಸಿನಿಮಾಗಳ ಬಳಿಕ ಮಮ್ಮುಟ್ಟಿಯವರ ಮೂರನೇ ಚಿತ್ರವಾಗಿದೆ. ಚಲನಚಿತ್ರ ನಿರ್ಮಾಪಕ ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದ ಚಿತ್ರಕಥೆಯನ್ನು ಈ ಸಿನಿಮಾ ಆಧರಿಸಿದೆ. ಇದು ಆ್ಯಕ್ಷನ್ ಕಾಮಿಡಿ ಎಂದು ಹೇಳಲಾಗುತ್ತದೆ. ಅಕ್ಟೋಬರ್ ಅಂತ್ಯದಲ್ಲಿ ಟರ್ಬೊ ಸಿನಿಮಾ ಸೆಟ್ಟೇರಲಿದೆ ಎಂದು ವರದಿಯಾಗಿದೆ. ಟರ್ಬೊದಲ್ಲಿ ತೆಲುಗು ನಟ ಸುನಿಲ್ ಕೂಡ ಕಾಣಿಸಿಕೊಂಡಿದ್ದಾರೆ.

ಸಿನಿಮಾವನ್ನು ಮಲಯಾಳಂ ಮೆಗಾಸ್ಟಾರ್ ನಿರ್ಮಾಣ ಸಂಸ್ಥೆ ಮಮ್ಮುಟ್ಟಿ ಕಂಪನಿ ಹಣ ಹೂಡುತ್ತಿದೆ.ಮಮ್ಮುಟ್ಟಿ ಪುತ್ರ ದುಲ್ಖರ್ ಸಲ್ಮಾನ್ ಹಿಂದೊಮ್ಮೆ ಕನ್ನಡ ನಟ ರಾಜ್ ಬಿ ಶೆಟ್ಟಿ ಜೊತೆ ಸೇರಿ ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಅದರಂತೆಯೇ ಈಗ ಮಮ್ಮುಟ್ಟಿ ನಿರ್ಮಾಣ ಸಂಸ್ಥೆಯಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಮೊದಲ ಸಿನಿಮಾ ‘ರುಧ್ರಿರಂ’ ಬಿಡುಗಡೆಗೂ ಮುನ್ನವೇ ಮತ್ತೊಂದು ಸಿನಿಮಾ ಸಿಕ್ಕಿದೆ. “ಅತ್ಯಂತ ಪ್ರತಿಭಾವಂತ ನಟ” ಎಂದು ಮಮ್ಮುಟ್ಟಿಯೇ ನಟ ರಾಜ್ ಬಿ ಶೆಟ್ಟಿಯನ್ನು ಕರೆದಿದ್ದು ಕನ್ನಡಿಗರಿಗೆ ಖುಷಿ ಕೊಟ್ಟಿದೆ.

ಸದ್ಯ ರಾಜ್‌ ಬಿ ಶೆಟ್ಟಿ ಅವರು ʼಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ನಟ ರಾಜ್ ಬಿ ಶೆಟ್ಟಿ (Raj B Shetty) ಹಾಗೂ ಆರ್‌. ಜೆ. ಸಿರಿ ರವಿಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಅವರ ಆ್ಯಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯಲ್ಲಿ ಮೂಡಿಬಂದ ಈ ಸಿನಿಮಾ, ನವೆಂಬರ್ 24ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಕಾರ್ಯಕ್ರಮದಲ್ಲಿ ನಟ ರಾಜ್ ಬಿ ಶೆಟ್ಟಿ ಮಾತನಾಡಿ, ನಾವು ಆಟವಾಡಿಕೊಂಡು ಸಿನಿಮಾ ಮಾಡಿದೆವು. ಈ ಕತೆಯನ್ನು ಬರೆದಿದ್ದು, ಗರುಡ ಗಮನ ವೃಷಭ ವಾಹನ ಸಿನಿಮಾ ನಂತರ. ಸಿರಿಯವರ ಈ ಹಿಂದಿನ ಸಿನಿಮಾ ನೋಡಿದ್ದೆ. ಆಗ ಪ್ರೇರಣಾ ಪಾತ್ರಕ್ಕೆ ತುಂಬಾ ಸೂಟೆಬಲ್ ಅನಿಸಿದರು, ಹೀಗಾಗಿ ಸಿನಿಮಾ ನಟಿಯಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: Raj B Shetty: ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಟ್ರೇಲರ್ ರಿಲೀಸ್

ʼಸ್ವಾತಿ ಮುತ್ತಿನ ಮಳೆ ಹನಿಯೇ’ ಸ್ಯಾಂಡಲ್‌ವುಡ್‌ ನಟಿ ರಮ್ಯಾ (Actress Ramya) ನಿರ್ಮಾಣದ ಚೊಚ್ಚಲ ಸಿನಿಮಾ ಆಗಿದ್ದು, ಇದನ್ನು ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದಾರೆ. ಬಾಲಾಜಿ ಮನೋಹರ್‌, ಸೂರ್ಯ ವಶಿಷ್ಟ, ರೇಖಾ ಕುಡ್ಲಿಗಿ, ಸ್ನೇಹಾ ಶರ್ಮಾ, ಜೆ.ಪಿ.ತುಮ್ಮಿನಾಡು, ಗೋಪಾಲಕೃಷ್ಣ ದೇಶ್‌ಪಾಂಡೆ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಮಿಧುನ್‌ ಮುಕುಂದನ್‌ ಸಂಗೀತ ಸಂಯೋಜಿಸಿದ್ದಾರೆ.

ʼಒಂದು ಮೊಟ್ಟೆಯ ಕಥೆʼ, ʻಗರುಡ ಗಮನ ವೃಷಭ ವಾಹನʼ ಚಿತ್ರಗಳ ನಂತರ ರಾಜ್‌ ಬಿ. ಶೆಟ್ಟಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಆರಂಭದಲ್ಲಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರು ನಟನೆಯಿಂದ ಹಿಂದೆ ಸರಿದು ಕೇವಲ ನಿರ್ಮಾಪಕಿಯಾಗಿ ಮುಂದುವರಿದಿದ್ದರು. ಅವರ ಜಾಗಕ್ಕೆ ಸಿರಿ ರವಿಕುಮಾರ್‌ ಎಂಟ್ರಿಯಾಗಿತ್ತು.

ರಾಜ್ ಅವರು ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ’45’ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಾಯಕರಾಗಿದ್ದಾರೆ. ಚಿತ್ರದಲ್ಲಿ ಉಪೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Exit mobile version