Site icon Vistara News

Turbo Movie: ಮಮ್ಮುಟ್ಟಿ ಅಭಿನಯದ ʻಟರ್ಬೊʼ ಫಸ್ಟ್‌ ಲುಕ್‌ ಔಟ್‌!

Mammootty starrer Turbo first look

ಬೆಂಗಳೂರು: ಮುಂದಿನ ವರ್ಷ (Turbo Movie) ಬಿಡುಗಡೆಯಾಗುವ ನಿರೀಕ್ಷೆಯಿರುವ ಮಮ್ಮುಟ್ಟಿಯ ಇತ್ತೀಚಿನ ಚಿತ್ರ `ಟರ್ಬೊ’ ಫಸ್ಟ್‌ ಲುಕ್‌ ಹಂಚಿಕೊಂಡಿದೆ. ಕಪ್ಪು ಶರ್ಟ್ ಮತ್ತು ಬಿಳಿ ಪಂಚೆಯಲ್ಲಿ ರಗಡ್‌ ಆಗಿ ಕಂಡಿದ್ದಾರೆ ಮಮ್ಮುಟ್ಟಿ. ವೈಶಾಖ್ ನಿರ್ದೇಶನದ ಈ ಚಿತ್ರವನ್ನು ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದಿದ್ದಾರೆ. ಮಮ್ಮುಟ್ಟಿ ಅವರ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಿದ್ದಾರೆ.

ಮಮ್ಮುಟ್ಟಿ ಅವರು ಘೋಷಿಸಿದ ಮೂರು ಸಿನಿಮಾಗಳ ಬಿಡುಗಡೆಗಳಲ್ಲಿ ಟರ್ಬೋ ಕೂಡ ಒಂದು. ರಾಜ್ ಬಿ ಶೆಟ್ಟಿ ಮತ್ತು ತೆಲುಗು ನಟ ಸುನೀಲ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ತಯಾರಾಗುವ ಸಾಧ್ಯತೆಯಿದೆ ಎಂತಲೂ ವರದಿಯಾಗಿದೆ. ಇದರಲ್ಲಿ ಫೈಟ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಹೇಳಲಾಗುತ್ತಿದ. ಜೀಪಿನಿಂದ ಹೊರಬರುವ ಮಮ್ಮುಟ್ಟಿಯ ಸ್ಟೈಲಿಶ್ ಅವತಾರಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಟರ್ಬೊ’ ಸಿನಿಮಾ ನಿರ್ದೇಶಕ ವೈಶಾಖ್ ಜತೆ ಇದು ಮೂರನೇ ಬಾರಿ ಮಮ್ಮುಟ್ಟಿ ಜತೆ ಕೈ ಜೋಡಿಸುತ್ತಿದ್ದಾರೆ. ಪೊಕ್ಕಿರಿ ರಾಜ ಮತ್ತು ಮಧುರ ರಾಜ ಸಿನಿಮಾಗಳ ಬಳಿಕ ಮಮ್ಮುಟ್ಟಿಯವರ ಮೂರನೇ ಚಿತ್ರವಾಗಿದೆ. ಚಲನಚಿತ್ರ ನಿರ್ಮಾಪಕ ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದ ಚಿತ್ರಕಥೆಯನ್ನು ಈ ಸಿನಿಮಾ ಆಧರಿಸಿದೆ. ಇದು ಆ್ಯಕ್ಷನ್ ಕಾಮಿಡಿ ಎಂದು ಹೇಳಲಾಗುತ್ತದೆ.

ಮಮ್ಮುಟ್ಟಿ ಮತ್ತು ಜ್ಯೋತಿಕಾ ನಟನೆ, ನಿರ್ದೇಶಕ ಜಿಯೋ ಬಾಬು ಅವರ ʻಕಾತಲ್ ದಿ ಕೋರ್ʼ (Kaathal – The Core) ಈಗಾಗಲೇ ಬಿಡುಗಡೆಗೊಂಡಿದ್ದು ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಏರಿಕೆಯಾಗಲಿದೆ Hyundai i20 ಕಾರಿನ ಬೆಲೆ, ಟರ್ಬೊ ಐಎಮ್​ಟಿ ವೇರಿಯೆಂಟ್​ ಕೂಡ ಸ್ಥಗಿತ

ಸಿನಿಮಾದಲ್ಲಿ ಮಮ್ಮುಟ್ಟಿಗೆ ನಾಯಕಿಯಾಗಿ ನಟಿ ಜ್ಯೋತಿಕಾ ಕಾಣಿಸಿಕೊಂಡಿದ್ದು, ಒಂದು ದಶಕದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ. ಮಮ್ಮುಟ್ಟಿ ಅವರ ಕೈಯಲ್ಲಿ ಭ್ರಮಯುಗಂ (Bramayugam) ಸಿನಿಮಾ ಕೂಡ ಇದೆ. ಅವರ ಜನುಮದಿನ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿತ್ತು. ನಟ ಮಮ್ಮುಟ್ಟಿ ತುಂಬಾ ಒರಟಾದ ರಗಡ್‌ ಲುಕ್‌ನಲ್ಲಿ ಕಂಡಿದ್ದು, ವರದಿಗಳ ಪ್ರಕಾರ, ಹಾವುಗಳ ನಡುವೆ ವಾಸಿಸುವ ಮಾಂತ್ರಿಕನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಮಮ್ಮುಟ್ಟಿ ನಾಯಕ ಹಾಗೂ ಖಳನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿಯನ್ನು ಹಂಚಿಕೊಂಡಿಲ್ಲ. ಭ್ರಮಯುಗಂ ಸಿನಿಮಾವನ್ನು ರಾಹುಲ್ ಸದಾಶಿವನ್ ನಿರ್ದೇಶಿಸಿದ್ದಾರೆ. ʻಭೂತಕಾಲಂʼನಂತಹ ಭಯಾನಕ ಚಲನಚಿತ್ರಗಳಲ್ಲಿ ಈ ಮುಂಚೆ ಕೆಲಸ ಮಾಡಿದ್ದರು. ಚಿತ್ರದಲ್ಲಿ ಅರ್ಜುನ್ ಅಶೋಕನ್, ಸಿದ್ಧಾರ್ಥ್ ಭರತನ್ ಮತ್ತು ಅಮಲ್ಡಾ ಲಿಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 2024ರ ಆರಂಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಫ್ಲ್ಯಾನ್‌ ಚಿತ್ರತಂಡ ಹಾಕಿಕೊಂಡಿದೆ.

ಮಮ್ಮುಟ್ಟಿ ಅವರು ಕೊಟ್ಟಾಯಂ ಕುಂಜಚ್ಚನ್ 2 ಸಿನಿಮಾ ಹೊಂದಿದ್ದಾರೆ. ಮಹಿ ವಿ ರಾಘವ್ ಮತ್ತು ಕಣ್ಣೂರು ಸ್ಕ್ವಾಡ್ ನಿರ್ದೇಶನದ ಯಾತ್ರಾ 2 ಸಿನಿಮಾ ಕೂಡ ಅವರ ಕೈಯಲ್ಲಿದೆ.

Exit mobile version