ಬೆಂಗಳೂರು : ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಫ್ಯಾಷನ್ ಐಕಾನ್ ಎಂತಲೇ ಖ್ಯಾತಿ ಪಡೆದಿರುವ ನಟಿ ಉರ್ಫಿ ಜಾವೇದ್ (Urfi Javed ) ಅವರಿಗೆ ವಾಟ್ಸ್ ಆ್ಯಪ್‌ನಲ್ಲಿ ಅತ್ಯಾಚಾರ ಮತ್ತು ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮುಂಬೈ ಪೊಲೀಸರು ಡಿಸೆಂಬರ್ 21 ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನವೀನ್ ಗಿರಿ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ 354 ಎ (ಲೈಂಗಿಕ ಕಿರುಕುಳ) 354 ಡಿ (ಹಿಂಬಾಲಿಸುವಿಕೆ) , 509, 506 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ಐಪಿಸಿಸಿ ಮತ್ತು ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಲಾಗಿದೆ. ವಾಟ್ಸ್ ಆ್ಯಪ್ ಮೂಲಕ ಸೆಲೆಬ್ರಿಟಿಗಳು ಸೇರಿದಂತೆ ಹಲವರಿಗೆ ನವೀನ್ ಬೆದರಿಕೆ ಸಂದೇಶ ರವಾನಿಸುತ್ತಿದ್ದ. ಸದ್ಯ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ | Urfi Javed | ಉರ್ಫಿ ಜಾವೇದ್ ವಿರುದ್ಧ ದೂರು ಸಲ್ಲಿಕೆ: ಸೀರೆಯಿಂದ ಟ್ರೋಲ್ ಆಗಿದ್ಯಾಕೆ ನಟಿ?
ದುಬೈನಲ್ಲಿ ಉರ್ಫಿ ಜಾವೇದ್ ಅರೆಸ್ಟ್
ಉರ್ಫಿ ಇತ್ತೀಚೆಗಷ್ಟೇ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತಮ್ಮ ಮುಂಬರುವ ಪ್ರಾಜೆಕ್ಟ್‌ಗಳ ಚಿತ್ರೀಕರಣಕ್ಕಾಗಿ ಹೋಗಿದ್ದರು. ಒಂದು ವಾರಕ್ಕೂ ಹೆಚ್ಚು ಕಾಲ ಅಲ್ಲಿಯೇ ಇದ್ದರು. ತಮ್ಮ ಪ್ರವಾಸದ ವಿಡಿಯೊ ಹಾಗೂ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ದುಬೈನಲ್ಲಿಯೂ ಅಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದಾರೆ. ವರದಿಯ ಪ್ರಕಾರ ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ಬಟ್ಟೆಗಳನ್ನು ಧರಿಸಿ ಚಿತ್ರೀಕರಣ ಮಾಡಿದ್ದಕ್ಕಾಗಿ ಚಿತ್ರೀಕರಣದ ನಂತರ ಉರ್ಫಿಯನ್ನು ದುಬೈನಲ್ಲಿ ಸ್ಥಳೀಯ ಪೊಲೀಸರು ಪ್ರಶ್ನಿಸಿದ್ದಾರೆ. ಮತ್ತೊಂದು ವರದಿ ಹೇಳುವಂತೆ ಉರ್ಫಿ ಅವರು ಧರಿಸಿರುವ ಬಟ್ಟೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಆಕೆ ವಿಡಿಯೊವನ್ನು ಸಾರ್ವಜನಿಕ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದಕ್ಕಾಗಿ ದುಬೈ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದೆ.
ರಿಯಾಲಿಟಿ ಶೋದಲ್ಲಿ ಉರ್ಫಿ ಜಾವೇದ್
ರಿಯಾಲಿಟಿ ಶೋ ಸ್ಪ್ಲಿಟ್ಸ್‌ವಿಲ್ಲಾ X4ರಲ್ಲಿ (MTV Splitsvilla X4) ಉರ್ಫಿ ಭಾಗವಹಿಸಿದ್ದಾರೆ. ಇದೀಗ ಈ ವಿಚಾರಕ್ಕೆ ಉರ್ಫಿ ಜಾವೇದ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಈಗಾಗಲೇ ಉರ್ಫಿ ತುಂಡು ಬಟ್ಟೆಯ ವಿಚಾರಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ರಿಯಾಲಿಟಿ ಶೋ ಮೂಲಕ ಮತ್ತೆ ಸುದ್ದಿಯಾಗುತ್ತಿದ್ದಾರೆ.
ಇದನ್ನೂ ಓದಿ | Urfi Javed | ದುಬೈನಲ್ಲಿ ಉರ್ಫಿ ಜಾವೇದ್ ಅರೆಸ್ಟ್: ಬಂಧನಕ್ಕೆ ಕಾರಣವೇನು?