Site icon Vistara News

Manchu Manoj Wedding: ಅದ್ಧೂರಿಯಾಗಿ ನಡೆದ ಹಿರಿಯ ನಟ ಮೋಹನ್​ಬಾಬು ಪುತ್ರ ಮಂಚು ಮನೋಜ್ ಎರಡನೇ ಮದುವೆ

Manchu Manoj Wedding

ಬೆಂಗಳೂರು: ಹಿರಿಯ ನಟ ಮೋಹನ್​ಬಾಬು (Mohan Babu) ಪುತ್ರ ಮಂಚು ಮನೋಜ್ (Manchu Manoj Wedding) ಅವರು ಎರಡನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ವಿವಾಹವಾದರು. ಹೈದರಾಬಾದ್‌ನಲ್ಲಿರುವ ತೆಲುಗು ನಟಿ ಲಕ್ಷ್ಮಿ ಮಂಚು ಅವರ ಮನೆಯಲ್ಲಿ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಭೂಮಿ ನಾಗ ರೆಡ್ಡಿ ಅವರ ಪುತ್ರಿ ಭೂಮಿ ಮೌನಿಕ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ದಂಪತಿಯ ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮೋಹನ್ ಬಾಬು, ಮಂಚು ವಿಷ್ಣು ಇತರರು ವಿಶೇಷ ಸಂದರ್ಭದಲ್ಲಿ ದಂಪತಿಯನ್ನು ಆಶೀರ್ವದಿಸಿದರು.
ಸಮಾರಂಭದಲ್ಲಿ ವಧು-ವರರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ಮದುವೆಗೆ ಮಂಚು ಮನೋಜ್ ಕ್ರೀಮ್ ಮತ್ತು ಗೋಲ್ಡನ್ ಕುರ್ತಾ ಮತ್ತು ಧೋತಿ ಧರಿಸಿದ್ದರೆ, ಮೌನಿಕಾ ಕೆಂಪು ಬಾರ್ಡರ್ ಹೊಂದಿರುವ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ.

ಮನೋಜ್ ಮತ್ತು ಮೌನಿಕಾ ಮದುವೆಯ ವದಂತಿಗಳು ಬಹಳ ದಿನಗಳಿಂದ ಹರಿದಾಡಿದ್ದವು. ಕಳೆದ ವರ್ಷ ಗಣೇಶ ಚತುರ್ಥಿಯಂದು ಹೈದರಾಬಾದ್‌ನಲ್ಲಿ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಮಂಚು ಮನೋಜ್ ಮದುವೆಯಾಗುತ್ತಿರುವ ಮೌನಿಕಾಗೂ ಸಹ ಇದು ಎರಡನೇ ವಿವಾಹ. ಈ ಹಿಂದೆ ಬೆಂಗಳೂರು ಮೂಲದ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದ ಮೌನಿಕಾಗೆ ಒಬ್ಬ ಗಂಡು ಮಗನಿದ್ದಾನೆ. ಇದೀಗ ಈ ಇಬ್ಬರೂ ಮದುವೆಯಾಗಿದ್ದಾರೆ.

ಇದನ್ನೂ ಓದಿ: Akshata Kuki: ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ ಬಿಗ್‌ ಬಾಸ್‌ ಖ್ಯಾತಿಯ ಅಕ್ಷತಾ ಕುಕಿ

ಮೂಲಗಳ ಪ್ರಕಾರ ಫೆಬ್ರವರಿ 23 ರಂದೇ ಮದುವೆ ಶಾಸ್ತ್ರಗಳು ಶುರುವಾಗಿದೆ. ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಮಂಚು ಮನೋಜ್, 2019 ರಲ್ಲಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ ಇತ್ತೀಚೆಗಷ್ಟೆ ತಾವು ಮತ್ತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

Exit mobile version