Site icon Vistara News

Vivek Agnihotri: ಗಂಡಸೇ ಆಗಿದ್ದರೆ ʻಮಣಿಪುರ ಫೈಲ್ಸ್ʼ ಸಿನಿಮಾ ಮಾಡಿ; ವಿವೇಕ್​ ಅಗ್ನಿಹೋತ್ರಿಗೆ ಚಾಲೆಂಜ್‌!

Vivek Agnihotri

ಬೆಂಗಳೂರು:ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲಿ ತೋರಿಸಲಾಗದೇ ಉಳಿದಿರುವ ಅನೇಕ ವಿಷಯಗಳನ್ನು ‘ದಿ ಕಾಶ್ಮೀರ್​ ಫೈಲ್ಸ್​ ಅನ್​ರಿಪೋರ್ಟೆಡ್​’ ವೆಬ್​ ಸಿರೀಸ್‌ ಮೂಲಕ ತೋರಿಸಲು ವಿವೇಕ್​ ಅಗ್ನಿಹೋತ್ರಿ (Vivek Agnihotri) ಮುಂದಾಗಿದ್ದಾರೆ. ಶೀಘ್ರದಲ್ಲೇ ZEE5 ನಲ್ಲಿ ಸ್ಟ್ರೀಮ್ ಆಗಲಿದೆ. ಅದರ ಜತೆಗೆ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾಗಾಗಿಯೂ ವಿವೇಕ್ ಅಗ್ನಿಹೋತ್ರಿಯ ಅಭಿಮಾನಿಗಳು ಕಾದಿದ್ದಾರೆ. ಇತ್ತೀಚೆಗಷ್ಟೇ ಅಗ್ನಿಹೋತ್ರಿ ಅವರು ಅಮಾಯಕ ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಟ್ವೀಟ್ ಮಾಡಿದ್ದರು. ಅದಕ್ಕೆ ಟ್ವಿಟರ್ ಬಳಕೆದಾರರೊಬ್ಬರು ನಿರ್ದೇಶಕರಿಗೆ ಧೈರ್ಯ ಇದ್ದರೆ ಮಣಿಪುರದಲ್ಲಿ (Manipur) ನಡೆದ ಅಮಾನವೀಯ ಘಟನೆಗಳ ಕುರಿತು (Manipur Files) ಸಿನಿಮಾ ಮಾಡಿ ಎಂದು ನೆಟ್ಟಿಗರೊಬ್ಬರು ಸವಾಲು ಹಾಕಿದ್ದಾರೆ. ಈ ಬಗ್ಗೆ ವಿವೇಕ್​ ಅಗ್ನಿಹೋ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಇತ್ತೀಚೆಗಷ್ಟೇ ಅಗ್ನಿಹೋತ್ರಿ ಅವರು ಅಮಾಯಕ ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಟ್ವೀಟ್ ಮಾಡಿದ್ದರು. ಅದಕ್ಕೆ ಟ್ವಿಟರ್ ಬಳಕೆದಾರರೊಬ್ಬರು “ಸಮಯವನ್ನು ವ್ಯರ್ಥ ಮಾಡಬೇಡಿ. ನೀವು ಗಂಡಸೇ ಆಗಿದ್ದರೆ ‘ಮಣಿಪುರ ಫೈಲ್ಸ್’ ಸಿನಿಮಾ ಮಾಡಿ” ಎಂದು ಹೇಳಿದ್ದಾರೆ. ಇದಕ್ಕೆ ವಿವೇಕ್​ ಅಗ್ನಿಹೋತ್ರಿ “ನನ್ನ ಮೇಲೆ ತುಂಬ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಆದರೆ ಎಲ್ಲ ಸಿನಿಮಾವನ್ನು ನನ್ನಿಂದಲೇ ಮಾಡಿಸುತ್ತೀರಾ? ನಿಮ್ಮ ಟೀಮ್​ ಇಂಡಿಯಾದಲ್ಲಿ ಗಂಡಸ್ತನ ಇರುವ ಫಿಲ್ಮ್​​ ಮೇಕರ್​ ಯಾರೂ ಇಲ್ಲವೇ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಮರುಪ್ರಶ್ನೆ ಹಾಕಿದ್ದಾರೆ. ಇದರಲ್ಲಿ ಅವರು ಬಳಸಿರುವ ಇಂಡಿಯಾ ಎಂಬ ಪದದ ಬಗ್ಗೆ ಚರ್ಚೆ ಆಗುತ್ತಿದೆ.

ಇದನ್ನೂ ಓದಿ: Vivek Agnihotri: ನನ್ನ ಬದುಕು ಶೋಚನೀಯ, ಮಗಳ ಫೋಟೊವನ್ನೂ ಕದ್ದರು: ವಿವೇಕ್ ಅಗ್ನಿಹೋತ್ರಿ

ಮಣಿಪುರದ ಘಟನೆ ಏನು?

ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಸಾವಿರಾರು ಜನ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಇದಾದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯೊಬ್ಬರ ಸಹೋದರನನ್ನು ಕೊಲೆ ಮಾಡಿದ್ದಾರೆ. ನಮ್ಮ ಮೇಲೂ ಹಲ್ಲೆಯಾಗಿದೆ ಎಂದು ಮಹಿಳೆಯರ ಕುಟುಂಬಸ್ಥರು ತಿಳಿಸಿದ್ದಾರೆ. ಮೇ 4ರಂದೇ ಘಟನೆ ನಡೆದಿದ್ದು, ಇದುವರೆಗೆ ಕ್ರಮ ತೆಗೆದುಕೊಳ್ಳದಿರುವ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದೆ.

Exit mobile version