ಬೆಂಗಳೂರು: ಮುಂಬೈನಲ್ಲಿ ಇತ್ತೀಚೆಗೆ ಆಫೀಸ್ ಸ್ಪೇಸ್ಗೆ ದೊಡ್ಡ ಬೇಡಿಕೆ ಉಂಟಾಗಿದೆ. ಜನವಸತಿ ಅಪಾರ್ಟ್ಮೆಂಟ್ಗಳಿಗಿಂತಲೂ ಆಫೀಸ್ ಸ್ಪೇಸ್ ಹೆಚ್ಚು ಲಾಭ ತಂದುಕೊಡುತ್ತಿದೆ. ಇದೇ ಕಾರಣಕ್ಕೆ ಆಫೀಸ್ ಸ್ಪೇಸ್ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಸಾಲಿಗೆ ಬಾಲಿವುಡ್ ನಟ ಮನೋಜ್ ಬಾಜಪೇಯಿ ಕೂಡ ಸೇರಿದ್ದಾರೆ. ಮುಂಬೈನ ಓಷಿವಾರಾ ಪ್ರದೇಶದಲ್ಲಿ 7,620 ಚದರ ಅಡಿಗಳ ಆಫೀಸ್ ಸ್ಪೇಸ್ ಮನೋಜ್ ಬಾಜಪೇಯಿ ದಂಪತಿ ಖರೀದಿ ಮಾಡಿದ್ದು, 32.94 ಕೋಟಿ ರೂ.ಗೆ ವೆಚ್ಚ ಮಾಡಿದ್ದಾರೆ ಎಂದು ವರದಿಯಾಗಿದೆ. 12ನೇ ಫ್ಲೋರ್ನಲ್ಲಿ ಈ ಆಫೀಸ್ ಸ್ಪೇಸ್ ಇದ್ದು, ಇದರ ನೋಂದಣಿಗಾಗಿ 1.86 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿಯನ್ನು ಮನೋಜ್ ಬಾಜಪೇಯಿ ಪಾವತಿಸಿದ್ದಾರೆ.
ಆಫೀಸ್ ಸ್ಪೇಸ್ ತಲಾ 1,905 ಚದರ ಅಡಿ ಕಾರ್ಪೆಟ್ ಪ್ರದೇಶವನ್ನು ಹೊಂದಿವೆ. ಒಟ್ಟು ವೆಚ್ಚ 31.08 ಕೋಟಿ ರೂ. ಆಗಿದೆ. ಈ ಹಿಂದೆ, ಬಾಲಿವುಡ್ ನಟಿ ಫ್ಲೋರಾ ಸೈನಿ 2013ರಲ್ಲಿ ಓಶಿವಾರಾ ಮೈಕ್ರೋ ಮಾರ್ಕೆಟ್‌ನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದರು. ಅದೇ ಸ್ಥಳದಲ್ಲಿ ಮನೋಜ್ ಬಾಜಪೇಯಿ ಕಚೇರಿ ಸ್ಥಳಗಳನ್ನು ಖರೀದಿಸಿದ್ದಾರೆ. ಇನ್ನೂ ಆಫೀಸ್ ಘಟಕಗಳಲ್ಲಿ ಕೆಲಸಗಳು ನಡೆಯುತ್ತಿದ್ದು, ಪೂರ್ಣಗೊಳ್ಳದ ಕಾರಣ, ದಂಪತಿ ಇನ್ನೂ ಫ್ಲಾಟ್‌ಗೆ ಶಿಫ್ಟ್ ಆಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Manoj Bajpayee : ಸತ್ಯ ಸಿನಿಮಾಕ್ಕಾಗಿ 20 ಸಾವಿರ ರೂಪಾಯಿಯಲ್ಲಿ ಬಟ್ಟೆ ಖರೀದಿಸಿದ್ದ ಮನೋಜ್!
ಮನೋಜ್ ಹೊರತಾಗಿ ಹಲವಾರು ಪ್ರಸಿದ್ಧ ಬಾಲಿವುಡ್ ನಟರು 2023ರಲ್ಲಿ ಮುಂಬೈನಲ್ಲಿ ರಿಯಲ್ ಎಸ್ಟೇಟ್ ಖರೀದಿಸಲು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದೇ ಅಪಾರ್ಟ್ಮೆಂಟ್ನಲ್ಲಿ ನಟಿಯಾದ ಕಿಯಾರಾ ಆಡ್ವಾಣಿ ಸಹ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಮಾತ್ರವಲ್ಲದೆ ಯುವ ನಟಿ ಸಾರಾ ಅಲಿ ಖಾನ್ ತನ್ನ ತಾಯಿ ಅಮೃತಾ ಅವರೊಟ್ಟಿಗೆ ಸೇರಿಕೊಂಡು ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಸಾರಾ ಅಲಿ ಖಾನ್, 2100 ಚದರ ಅಡಿಯ ಪ್ಲ್ಯಾಟ್ ಅನ್ನು 9 ಕೋಟಿ ಹಣ ನೀಡಿ ಖರೀದಿ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಸಹ ಇದೇ ಪ್ರಾಜೆಕ್ಟ್ನಲ್ಲಿ 2100 ಚದರ ಅಡಿಯ ಫ್ಲ್ಯಾಟ್ ಅನ್ನು 10 ಕೋಟಿ ಹಣ ನೀಡಿ ಖರೀದಿ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಜುಹು ಏರಿಯಾನಲ್ಲಿನ ಸಿದ್ಧಿ ವಿನಾಯಕ ಅಪಾರ್ಟ್ಮೆಂಟ್ನಲ್ಲಿ 17.50 ಕೋಟಿ ಖರ್ಚು ಮಾಡಿ 1916 ಚದರ ಅಡಿಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದಾರೆ.
ಅಜಯ್ ದೇವಗನ್ ದಂಪತಿ ಕೆಲವು ತಿಂಗಳ ಹಿಂದೆ ಆಫೀಸ್ ಸ್ಪೇಸ್ ಖರೀದಿ ಮಾಡಿದ್ದರು. ಸುಮಾರು 45 ಕೋಟಿ ಹಣವನ್ನು ಇದಕ್ಕಾಗಿ ಈ ಜೋಡಿ ವೆಚ್ಚ ಮಾಡಿದ್ದರು. ಮನೋಜ್ ಬಾಜಪೇಯಿ ‘ಬ್ಯಾಂಡಿಟ್ ಕ್ವೀನ್’, ‘ಸತ್ಯ’, ‘ಪ್ರೇಮ ಕಥಾ’, ‘ದಿಲ್ ಪೇ ಮತ್ ಲೇ ಯಾರ್’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ನಿರ್ಮಾಪಕನಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ.