ಬೆಂಗಳೂರು: ಫ್ಯಾಮಿಲಿ ಮ್ಯಾನ್ ನಟ ಮನೋಜ್ ಬಾಜಪೇಯಿ (Manoj Bajpayee) ಅವರು ತಮ್ಮ ಕುಟುಂಬದೊಂದಿಗೆ ಇರುವ ಹೊಸ ಫೋಟೊವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮನೆಯೊಳಗೆ ಕ್ಲಿಕ್ಕಿಸಿದ ಸುಂದರ ಚಿತ್ರದಲ್ಲಿ ಮನೋಜ್ ಅವರ ಪತ್ನಿ ಶಬಾನಾ ರಝಾ ಮತ್ತು ಮಗಳು ಅವಾ ನಾಯಲಾ ಜತೆ ಪೋಸ್ ನೀಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಚಿತ್ರವನ್ನು ಹಂಚಿಕೊಂಡಿರುವ ಮನೋಜ್ ಬಾಜ್ಪೇಯಿ ‘ಫ್ಯಾಮ್’ (ಫ್ಯಾಮಿಲಿ) ಎಂಬ ಸರಳ ಶೀರ್ಷಿಕೆಯನ್ನು ಬರೆದಿದ್ದಾರೆ. ಮನೋಜ್ ಬಿಳಿ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ಮನೋಜ್ ಅವರ ಅನೇಕ ಸ್ನೇಹಿತರು ಮತ್ತು ಸಹ-ನಟರು ಈ ಚಿತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಾಮೆಂಟ್ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. “ಲವ್ಲಿ” ಎಂದು ನಟ ಗಜರಾಜ್ ರಾವ್ ಪ್ರತಿಕ್ರಿಯಿಸಿದ್ದಾರೆ. ಬ್ಯೂಟಿಫುಲ್’ ಎಂದು ನಟಿ `ತಿಲೋತಮ್ಮ ಶೋಮ್’ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಕಾರ್ತಿಕ್ ಆರ್ಯನ್ ಅವರ `ಶೆಹಜಾದಾ’ದಲ್ಲಿ ಕಾಣಿಸಿಕೊಂಡಿದ್ದರು.
ಈ ಹಿಂದೆ ಸಂದರ್ಶನವೊಂದರಲ್ಲಿ ಶಬಾನಾ ಜತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ನಟ ಮಾತನಾಡಿ ʻʻಶಬಾನಾ ಹೆಮ್ಮೆಯ ಮುಸ್ಲಿಂ, ನಾನು ಹೆಮ್ಮೆಯ ಹಿಂದು. ಯಾವತ್ತೂ ಇವರೆಡೂ ಪರಸ್ಪರ ಘರ್ಷಣೆಯಾಗುವುದಿಲ್ಲ. ಏಕೆಂದರೆ ನಾವು ಧಾರ್ಮಿಕತೆಗಿಂತ ಆಧ್ಯಾತ್ಮಿಕರು. ನನ್ನ ಹೆಂಡತಿಯ ಧರ್ಮದ ಬಗ್ಗೆ ಮಾತನಾಡಿದರೂ, ನನ್ನೊಂದಿಗೆ ಮಾತನಾಡಲು, ಹೇಳುವರಿಗೆ ಶಕ್ತಿ ಅಥವಾ ಧೈರ್ಯವಿರಲಿಲ್ಲ. ಏಕೆಂದರೆ ನಾನು ನನ್ನ ಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಅವರಿಗೆ ಗೊತ್ತು. ಯಾರಾದರೂ ಈ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರೆ, ಕಠಿಣ ವ್ಯಕ್ತಿ ಆಗಿರುತ್ತೇನೆ”ಎಂದು ಹೇಳಿಕೊಂಡಿದ್ದರು.
ಮನೋಜ್ ಬಾಜಪೇಯಿ ಇನ್ಸ್ಟಾ ಪೋಸ್ಟ್
ಸತ್ಯ (1998), ಅಲಿಗಢ್ (2015), ಮತ್ತು ಗ್ಯಾಂಗ್ಸ್ ಆಫ್ ವಾಸೇಪುರ್ (2012) ನಂತಹ ಹಲವಾರು ಮೆಚ್ಚುಗೆ ಪಡೆದ ಚಿತ್ರಗಳಲ್ಲಿ ನಟಿಸಿರುವ ಮನೋಜ್, ಸತ್ಯ (1998), ಪಿಂಜಾರ್ (1998) ಚಿತ್ರಗಳಿಗಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮನೋಜ್ ಕೊನೆಯದಾಗಿ ಗುಲ್ಮೊಹರ್ ( Gulmohar) ಚಿತ್ರದಲ್ಲಿ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಶೀಘ್ರದಲ್ಲೇ ದಿ ಫ್ಯಾಮಿಲಿ ಮ್ಯಾನ್ನ ಸಿರೀಸ್ ಮೂರನೇ ಸೀಸನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.