Site icon Vistara News

Manoranjan Prabhakar | ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ವಿಧಿವಶ

Manoranjan Prabhakar

ಬೆಂಗಳೂರು: ಕನ್ನಡ ಸಿನಿಮಾ ಹಾಗೂ ಕಿರುತೆರೆ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ (Manoranjan Prabhakar) ಬುಧವಾರ (ಡಿಸೆಂಬರ್‌ 14) ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ. ೮೦೦ಕ್ಕೂ ಹೆಚ್ಚು ಸಂಗೀತದ ಆಲ್ಬಂ ಹೊರತಂದಿರುವ ಇವರು, ಮನೋರಂಜನ್ ಹೆಸರಿನ ತಂಡವನ್ನು ಕಟ್ಟಿಕೊಂಡು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ʻಕಾರ್ತಿಕ ದೀಪʼ ಸೇರಿದಂತೆ ಅನೇಕ ಧಾರಾವಾಹಿಗಳಿಗೆ ಶೀರ್ಷಿಕೆ ಸಂಗೀತವನ್ನು ನೀಡಿದ್ದಾರೆ. ಇವರು 70ರ ದಶಕದ ಆರಂಭದಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು. ಮನೋರಂಜನ್‌ ತಂಡದ ಹೆಸರಿನಲ್ಲಿ ಕಾರ್ಯಕ್ರಮವನ್ನು ನೀಡುತ್ತಿದ್ದರು. 1980ರ ಅವಧಿಯಲ್ಲಿ ಇದು ಹೆಸರಾಂತ ತಂಡವಾಗಿತ್ತು. ಸಂಗೀತ ಕುಟುಂಬದಿಂದಲೇ ಬೆಳೆದು ಬಂದಿದ್ದ ಮನೋರಂಜನ್ ತಂದೆ ಪಂಡಿತ್ ಬಿ.ಎನ್. ಪಾರ್ಥಸಾರಥಿ ನಾಯ್ಡು ಕೂಡ ಸಂಗೀತದಲ್ಲಿ ಪಾಂಡಿತ್ಯ ಹೊಂದಿದ್ದರು.

ಇದನ್ನೂ ಓದಿ | K Muralidharan | ಹಿರಿಯ ನಿರ್ಮಾಪಕ ಕೆ. ಮುರಳೀಧರನ್ ವಿಧಿವಶ

90ರ ದಶಕದಲ್ಲಿ ಅವರು ಕೆಲಕಾಲ ಆದರ್ಶ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಶಿಕ್ಷಕರಾಗಿದ್ದರು. ಸಂಗೀತಾಸಕ್ತರಿಗಾಗಿ ತಮ್ಮದೇ ಆದ ಶ್ರುತಿಲಯ ಕಲ್ಚರಲ್ ಅಕಾಡೆಮಿ ಪ್ರಾರಂಭಿಸಿ ಸಂಗೀತ ಕ್ಷೇತ್ರಕ್ಕೆ ಹೊಸ ಹೊಸ ಪ್ರತಿಭೆಗಳನ್ನು ನೀಡಿದ್ದಾರೆ.
ಪ್ರಭಾಕರ್ ಅವರು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಭಾರತದ ಚಲನಚಿತ್ರ ವಿಭಾಗಕ್ಕಾಗಿ 15ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು 2000ರಲ್ಲಿ “ಗಾಳಿ ಮಾತು” ಎಂಬ ಚಲನಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ | Gandasi Nagaraj | ಚಂದನವನದ ಹಿರಿಯ ವಸ್ತ್ರಾಲಂಕಾರ, ಹಾಸ್ಯ ಕಲಾವಿದ ಗಂಡಸಿ ನಾಗರಾಜ್ ವಿಧಿವಶ

Exit mobile version